Site icon Vistara News

ಬೈ ಎಲೆಕ್ಷನ್‌ನಲ್ಲಿ ನನ್ನನ್ನು ಸ್ವಾರ್ಥಕ್ಕೆ ಬಳಸಿಕೊಂಡ್ರು: ಭೈರತಿ ಬಸವರಾಜ್‌ ವಿರುದ್ಧ ನಂದೀಶ್‌ರೆಡ್ಡಿ ಅಸಮಾಧಾನ

kr puram

ಕೆ.ಆರ್‌.ಪುರ/ಬೆಂಗಳೂರು: ಉಪ ಚುನಾವಣೆಯಲ್ಲಿ ಇಲ್ಲಿನ ಶಾಸಕರು ನನ್ನನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್‌ರೆಡ್ಡಿ ಸಾರ್ವಜನಿಕವಾಗಿ ನೋವು ತೋಡಿಕೊಂಡಿದ್ದಾರೆ. ರಾಮಮೂರ್ತಿನಗರದ ನೈಸ್ ವೇರ್ ಹಿಂಭಾಗದ ಆಟದ ಮೈದಾನದಲ್ಲಿ ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ವೇಳೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪುರ ಕ್ಷೇತ್ರಕ್ಕೆ ನಾನೇ ತಂದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಆದರೆ ಸೌಜನ್ಯಕ್ಕೂ ನನ್ನನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ. ನನಗೆ ಮಾತ್ರವಲ್ಲದೇ ನನ್ನ ಬೆಂಬಲಿಗರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಶಾಸಕ ಕಂ ಸಚಿವ ಭೈರತಿ ಬಸವರಾಜ ಎದುರಿಗೆ ನಂದೀಶ್‌ರೆಡ್ಡಿ ಅಸಮಾಧಾನ ಹೊರಹಾಕಿದರು.

ಚುನಾವಣೆ ಸಮಯದಲ್ಲಿ ಇಡೀ ಊರು ಸುತ್ತಿ ಕೆಲಸ ಮಾಡಿದೆ. ಆಗ ಗೆದ್ದ ಶಾಸಕರು ಫೋನ್‌ ಮಾಡಿ ನಿನ್ನಿಂದ ಗೆದ್ದನಪ್ಪಾ ಎಂದವರು ಈ ತನಕ ಒಂದು ಫೋನ್‌ ಮಾಡಿಲ್ಲ. ಯಾವುದಾದರೂ ಕಾರ್ಯಕ್ರಮದಲ್ಲಿ ನಂದೀಶ್‌ರೆಡ್ಡಿ ಇದ್ದರೆ ಆ ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ ಎಂದು ಹೇಳುತ್ತಾರೆ. ನನ್ನನ್ನು ಇಲ್ಲಿರುವ ಶಾಸಕರು ಸ್ವಾರ್ಥಕ್ಕಾಗಿ ಬಳಸಿಕೊಂಡಿರುವುದು ನೋವು ತಂದಿದೆ. ಆದರೂ ನನ್ನ ಪಕ್ಷ ನನಗೆ ತಾಯಿ ಸಮಾನ ಅದರಂತೆ ಕೆಲಸ ಮಾಡಿಕೊಂಡು ಹೋಗುವುದಾಗಿ ಹೇಳಿದರು.

ಉದ್ಘಾಟನೆಯಲ್ಲಿ ಪಾಲ್ಗೊಳ್ಳದ ನಂದೀಶ್‌ರೆಡ್ಡಿ

ಒಂದೇ ವೇದಿಕೆಯಲ್ಲಿದ್ದರೂ ದೂರದಲ್ಲೇ ನಿಂತ ನಂದೀಶ್‌ರೆಡ್ಡಿ

ಸಮಾರಂಭದ ಉದ್ಘಾಟನೆ ವೇಳೆ ಭೈರತಿ ಬಸವರಾಜ್‌ ಅವರು ಇದ್ದ ಕಾರಣಕ್ಕೆ ವೇದಿಕೆಯಲ್ಲಿ ದೂರದಲ್ಲೇ ನಂದೀಶ್‌ರೆಡ್ಡಿ ನಿಂತಿದ್ದ ಚಿತ್ರಣ ಕಂಡು ಬಂತು. ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. 2019ರ ಬೈ ಎಲೆಕ್ಷನ್ ನಡೆದ ನಂತರ ಒಂದೇ ವೇದಿಕೆಯಲ್ಲಿ ಮೂವರು ನಾಯಕರು ಭಾಗಿಯಾಗಿದರು. ಒಂದೇ ವೇದಿಕೆಯಲ್ಲಿದ್ದರೂ ಸಚಿವ ಬಸವರಾಜ್‌ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್‌ರೆಡ್ಡಿ ಒಬ್ಬರ ಮುಖ ಇನ್ನೊಬ್ಬರು ನೋಡದೇ ಈ ಮೂಲಕ ಕೆಆರ್ ಪುರ ಬಿಜೆಪಿಯಲ್ಲಿ ನಾಯಕರ ಭಿನ್ನಮತ ಸ್ಫೋಟವಾಗಿದೆ. ಮುಂದಿನ ಚುನಾವಣೆಯಲ್ಲಿ ನಂದೀಶ್ ರೆಡ್ಡಿ ಕೆಆರ್‌ ಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಇದನ್ನೂ ಓದಿ | ಬಿಜೆಪಿ ಅಧಿಕಾರಕ್ಕೆ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ ಎಂದ ಎಚ್‌ಡಿಕೆ

Exit mobile version