Site icon Vistara News

Bomb Threat: ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ!

Bomb threat

16-Year-old Boy Behind Threat Emails To Delhi Schools? Police React To Claims

ಆನೇಕಲ್: ಇತ್ತೀಚೆಗೆ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಿದ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಲಿಮಂಗಲದ ಟ್ರೀಮಿಸ್ ವರ್ಲ್ಡ್ ಸ್ಕೂಲ್‌ಗೆ ಶುಕ್ರವಾರ ಮಧ್ಯಾಹ್ನ ಬಾಂಬ್‌ ಬೆದರಿಕೆ ಇ-ಮೇಲ್ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ದೌಡಾಯಿಸಿ, ಇಡೀ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಶಾಲೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದರಿಂದ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.

ಡಿಸೆಂಬರ್‌ನಲ್ಲಿ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ನಂತರ ಮಾರ್ಚ್‌ 1ರಂದು ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಅದಾದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್‌, ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. 25 ಲಕ್ಷ ಡಾಲರ್‌ (20 ಕೋಟಿ ರೂ.) ನೀಡದೇ ಹೋದರೆ ಅನಾಹುತ ಖಚಿತ ಎಂದೂ ದುಷ್ಕರ್ಮಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಿದ್ದ. ಇದೀಗ ಮತ್ತೊಂದು ಶಾಲೆಗೆ ಬೆದರಿಕೆ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌; ಭಟ್ಕಳದ ಶಂಕಿತ ಉಗ್ರನ ಪುತ್ರನಿಗೆ ಎನ್‌ಐಎ ನೋಟಿಸ್‌

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

ಬೆಂಗಳೂರು : ನಗರದ ರಾಮೇಶ್ವರಂ ಕೆಫೆ ಸ್ಫೋಟ (Blast in Bangalore) ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ ಬಳಿಕ, ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡುವವರಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಘೋಷಿಸಿದೆ. ಪತ್ತೆ ಮಾಡುವ ಉದ್ದೇಶಕ್ಕಾಗಿ ಎನ್​ಐಎ ಇಬ್ಬರೂ ಶಂಕಿತರ ಮೂಲ ವಿವರಗಳನ್ನು ನೀಡಿದೆ ಮತ್ತು ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರ ನೆರವು ಕೋರಿದೆ.

ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ಆತನ ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದಾನೆ. ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದೂ ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.

ಇದನ್ನೂ ಓದಿ: Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

ಸ್ಫೋಟದ ಇನ್ನೋರ್ವ ಆರೋಪಿ ಅಬ್ದುಲ್ ಮತೀನ್ ಅಹ್ಮದ್ ತಾಹಾ, ಸ್ಫೋಟ ನಡೆಸಲು ಮುಸ್ಸಾವಿರ್​ಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದ್ದು, ಆತನಿಗೂ ಹುಡುಕಾಟ ನಡೆಯುತ್ತಿದೆ. ಈತ ತನ್ನ ಮೂಲ ಗುರುತನ್ನು ಮರೆಮಾಚಲು ವಿಘ್ನೇಶ್ ಡಿ ಮತ್ತು ಸುಮಿತ್ ಎಂಬ ಹಿಂದೂ ಹೆಸರನ್ನೂ ಬಳಸುತ್ತಿದ್ದಾನೆ ಎಂದು ಎನ್​​ಐಎ ಹೇಳಿದೆ. ಆತ ಬಹುಶಃ ಹುಡುಗರ ಹಾಸ್ಟೆಲ್ ಗಳು, ಪಿಜಿಗಳು ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ತೀರ್ಥಹಳ್ಳಿ ಮೂಲದವರು.

ಪ್ರಕರಣದ ಆರೋಪಿಗಳ ಬಗ್ಗೆ ವಿವರಗಳನ್ನು ನೀಡುವವರಿಗೆ ಎನ್ಐಎ ಈ ಹಿಂದೆಯೂ 10 ಲಕ್ಷ ರೂ.ಗಳ ಬಹುಮಾನ ಘೋಷಿಸಿತ್ತು. ಶಂಕಿತರ ರೇಖಾಚಿತ್ರಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಮಾರ್ಚ್ 1 ರಂದು ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಐಇಡಿ ಸ್ಫೋಟದ ಸಹ ಸಂಚುಕೋರ ಮುಜಮ್ಮಿಲ್ ಶರೀಪ್​ನನ್ನು ಎನ್ಐಎ ಗುರುವಾರ ಬಂಧಿಸಿದೆ. ಸ್ಫೋಟ ಸಂಭವಿಸಿದ ನಂತರ ಕಳೆದ ತಿಂಗಳಲ್ಲಿ ಎನ್ಐಎ ನಡೆಸಿದ ಮೊದಲ ಬಂಧನ ಇದಾಗಿದೆ.

Exit mobile version