Site icon Vistara News

Bomb threat : ಬಸವೇಶ್ವರ ನಗರದ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌; ಬಾಂಬ್‌ ಸ್ಕ್ವಾಡ್‌ನಿಂದ ಪರಿಶೀಲನೆ

bengaluru bomb blast email

ಬೆಂಗಳೂರು: ಬಸವೇಶ್ವರ ನಗರದಲ್ಲಿರುವ ಎನ್ಎಎಫ್ಎಲ್ ಶಾಲೆಗೆ ಬಾಂಬ್‌ ಬೆದರಿಕೆ (Bomb threat) ಇ-ಮೇಲ್‌ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಎಂದಿನಂತೆ ಬೆಳಗ್ಗೆ ಇ-ಮೇಲ್ ಪರಿಶೀಲಿಸಿದ್ದಾರೆ. ಆಗ ಬೆದರಿಕೆ ಇ-ಮೇಲ್ ಬಂದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಿರುವ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಾಂಬ್‌ ಸ್ಕ್ವಾಡ್‌ಗೆ ವಿಷಯ ತಿಳಿಸಿದ್ದಾರೆ.

rock imao ಎಂಬಾತನಿಂದ ಇಮೇಲ್ ಬೆದರಿಕೆ ಬಂದಿದೆ ಎನ್ನಲಾಗಿದೆ. rockamlmao@gmail.com ಎಂಬ ಇ-ಮೇಲ್ ಐಡಿಯಿಂದ ಗುರುವಾರ ರಾತ್ರಿ 8.30ಕ್ಕೆ ಬೆದರಿಕೆ ಬಂದಿದೆ. ಬೆಳಗ್ಗೆ 11.30ಕ್ಕೆ ಶಾಲಾ ಆಡಳಿತ ಮಂಡಳಿ ಈ ಇ-ಮೇಲ್ ನೋಡಿದ್ದಾರೆ.

ಮುಂದುವರಿದ ಶೋಧ
ಎನ್ಎಎಫ್ಎಲ್ ಶಾಲೆಗೆ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ಭೇಟಿ ಕೊಟ್ಟಿದ್ದು, ಶಾಲೆಯ ಮೂಲೆ ಮೂಲೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಆದರೆ, ನಿರ್ಲಕ್ಷ್ಯ ವಹಿಸದೆ ಎಲ್ಲ ಕಡೆ ಪರಿಶೀಲನೆ ನಡೆಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ, ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಪೋಷಕರಿಗೂ ಈಗಾಗಲೇ ಮಾಹಿತಿ ನೀಡಲಾಗಿದೆ. ಬಾಂಬ್‌‌ ಸ್ಕ್ವಾಡ್‌ ತಂಡದಿಂದ ಪರಿಶೀಲನೆ ನಡೆಯುತ್ತಿದೆ. ಇದುವರೆಗೆ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | Ola Electric | ತಮಿಳುನಾಡಿನಲ್ಲಿ ಎಲೆಕ್ಟ್ರಿಕ್‌ ವಾಹನ ಕಾರ್ಖಾನೆ ಸ್ಥಾಪನೆಗೆ ಓಲಾದಿಂದ 1,500 ಎಕರೆ ಭೂಮಿ ಖರೀದಿ: ವರದಿ

Exit mobile version