Site icon Vistara News

Bommanahalli Election Results : ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಾರುಪತ್ಯ ಮುಂದುವರಿಸಿದ ಸತೀಶ್​ ರೆಡ್ಡಿ

Dasarahalli Election Results Sathish Reddy Winner

#image_title

ಬೆಂಗಳೂರು: ನಗರ ಜಿಲ್ಲೆಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್​ ರೆಡ್ಡಿ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ಅವರು 79340 ಮತಗಳನ್ನು ಪಡೆದರು. 2018ರಲ್ಲಿ ಸತೀಶ್ ರೆಡ್ಡಿ (1,11,863 ಮತಗಳು) ಅವರು ಸುಷ್ಮಾ ರಾಜಗೋಪಾಲ್​ ವಿರುದ್ಧ 47,162 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಐದು ವಿಧಾನಸಭಾ ಕ್ಷೇತ್ರಗಳಾಗಿ ಮರು ವಿಭಜನೆಗೊಂಡಾಗ ಬೊಮ್ಮನಹಳ್ಳಿ. ಕ್ಷೇತ್ರ ಹುಟ್ಟಿಕೊಂಡಿತು. ಆನೇಕಲ್‌ ವಿಧಾನಸಭಾ ಕ್ಷೇತ್ರದ ಕೆಲ ಭಾಗಗಳನ್ನು ಇಲ್ಲಿಗೆ ವಿಲೀನ ಮಾಡಿ ಸ್ವತಂತ್ರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಸೃಷ್ಟಿಸಲಾಯಿತು. ಬೊಮ್ಮನಹಳ್ಳಿ, ಎಚ್ಎಸ್‌ಆರ್‌ ಬಡಾವಣೆ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಅರಕೆರೆ ಬಿಬಿಎಂಪಿ ವಾರ್ಡ್‌ಗಳನ್ನು ಬೊಮ್ಮನಹಳ್ಳಿ ಕ್ಷೇತ್ರ ಒಳಗೊಂಡಿದೆ. ಹಾಲಿ ಬಿಬಿಎಂಪಿಯ ಈ 8 ವಾರ್ಡ್‌ಗಳಲ್ಲೂ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.

ಬೇಗೂರು ಜಿಲ್ಲಾ ಪಂಚಾಯಿತಿ ಹಾಗೂ ಬೊಮ್ಮನಹಳ್ಳಿ ನಗರಸಭೆ ಸದಸ್ಯ ಸ್ಥಾನದಿಂದ ರಾಜಕೀಯದ ಪಟ್ಟುಗಳನ್ನು ಕರಗತ ಮಾಡಿಕೊಂಡು ಅಲ್ಲಿಂದ ನೇರವಾಗಿ ವಿಧಾನಸೌಧ ಪ್ರವೇಶ ಮಾಡಿದವರು ಬಿಜೆಪಿಯ ಸತೀಶ್‌ ರೆಡ್ಡಿ. 2008ರಿಂದಲೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಸತೀಶ್ ರೆಡ್ಡಿ ‘ಹ್ಯಾಟ್ರಿಕ್‌ʼ ಗೆಲುವು ಪಡೆದಿದ್ದಾರೆ.

ಇದನ್ನೂ ಓದಿ : Dasarahalli Election Results : ದಾಸರಹಳ್ಳಿಯನ್ನು ಮರಳಿ ತೆಕ್ಕೆಗೆ ತೆಗೆದುಕೊಂಡ ಬಿಜೆಪಿಯ ಮುನಿರಾಜು

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಒಟ್ಟು 4,27,300 ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ 1,23,300 ಮತಗಳನ್ನು ಹೊಂದಿರುವ ದಲಿತ (ಎಸ್‌ಸಿ,ಎಸ್‌ಟಿ) ಸಮುದಾಯವೇ ಅತಿದೊಡ್ಡ ಮತದಾರ ವರ್ಗ. ಇವರ ಬಳಿಕ 95,000 ಒಕ್ಕಲಿಗರು, 55,000 ಇತರೆ ಹಿಂದುಳಿದ ಸಮುದಾಯಗಳು, 43,000 ಬ್ರಾಹ್ಮಣರು, 27,500 ಅಲ್ಪಸಂಖ್ಯಾತರು ಹಾಗೂ 2,000 ಲಿಂಗಾಯತರಿದ್ದಾರೆ.

Exit mobile version