Site icon Vistara News

Boy dies of poisoning | ಚಾಕೋಲೆಟ್ ಎಂದು ಇಲಿ ಪಾಷಾಣ ತಿಂದ ಬಾಲಕ ಸಾವು

Boy dies of poisoning

ಶಿವಮೊಗ್ಗ: ಚಾಕೋಲೆಟ್ ಎಂದು ಇಲಿ ಪಾಷಾಣ (Boy dies of poisoning) ತಿಂದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದಲ್ಲಿ ನಡೆದಿದೆ.

ಚಂದ್ರಪ್ಪ ಎಂಬುವವರ ಪುತ್ರ ಪ್ರೀತಮ್​ ಮೃತ ಬಾಲಕ. ಶುಕ್ರವಾರ ರಾತ್ರಿ ಮನೆಯಲ್ಲಿ ಚಾಕೋಲೆಟ್ ಎಂದು ಭಾವಿಸಿ ಇಲಿ ಪಾಷಾಣವನ್ನು ಬಾಲಕ ಸೇವಿಸಿದ್ದಾನೆ. ನಂತರ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‌ಹೈಟೆನ್ಶನ್​ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಪ್ಪನಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುತ್ತಿದ್ದಾಗ ಹೈಟೆನ್ಶನ್​ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಮೃತಪಟ್ಟಿದ್ದಾನೆ. ಶ್ರೀಶೈಲ (30) ಮೃತ. ವಿದ್ಯುತ್‌ ಪ್ರವಹಿಸಿದ ತೀವ್ರತೆಗೆ ಪವರ್‌ ಮ್ಯಾನ್‌ ಕಂಬದ ಮೇಲೆಯೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ | Death in stage | ನಾಟಕ ಆಡುವಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಕಲಾವಿದ: ಸಾರ್ಥಕಿ ಬದುಕು ಸಾರ್ಥಕವಾಯ್ತಾ?

Exit mobile version