Site icon Vistara News

Mobile addiction | ಜಾಸ್ತಿ ಮೊಬೈಲ್‌ ನೋಡ್ಬೇಡ ಎಂದು ಅಮ್ಮ ಗದರಿದ್ದಕ್ಕೆ ನೇಣು ಬಿಗಿದುಕೊಂಡ 14 ವರ್ಷದ ಬಾಲಕ

ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಜ್ಞಾನೇಶ್‌

#image_title

ಮಂಗಳೂರು: ಜಾಸ್ತಿ ಮೊಬೈಲ್‌ ನೋಡ್ಬೇಡ (Mobile addiction) ಎಂದು ಅಮ್ಮ ಗದರಿದ್ದಕ್ಕೆ ಬೇಸರಗೊಂಡ ೧೪ ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಪದವು ಗ್ರಾಮದ ಕೋಟಿಮುರ ಎಂಬಲ್ಲಿ ಈ ಘಟನೆ ನಡೆದಿದೆ.

ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್(14) ಆತ್ಮಹತ್ಯೆ ಮಾಡಿಕೊಂಡವನು. ಇವನು ದ ಬ್ರಿಕ್ಸ್ ಅಪಾರ್ಟ್ಮೆಂಟ್ ನಿವಾಸಿಗಳಾಗಿರುವ ಜಗದೀಶ್ ಹಾಗೂ ವಿನಯ ದಂಪತಿ ಪುತ್ರನಾಗಿದ್ದಾನೆ.

ಜ್ಞಾನೇಶ್‌ ಪ್ರತಿ ದಿನವೂ ಹೆಚ್ಚು ಹೆಚ್ಚು ಮೊಬೈಲ್‌ ಬಳಕೆ ಮಾಡುತ್ತಿರುವ ಬಗ್ಗೆ ಅಮ್ಮ ಆಗಾಗ ಬುದ್ಧಿವಾದ ಹೇಳುತ್ತಿದ್ದರು. ಕೆಲವೊಮ್ಮೆ ಬೈದು ಹೇಳುತ್ತಿದ್ದರು. ಮಂಗಳವಾರವೂ ಮೊಬೈಲ್‌ ಹಿಡಿದು ಕುಳಿತಿದ್ದಾಗ ಅಮ್ಮ ಗದರಿದ್ದರು.

ಅಮ್ಮ ಗದರುತ್ತಿದ್ದಂತೆಯೇ ಸ್ನಾನ ಮಾಡಿ ಬರುವುದಾಗಿ ಎದ್ದು ಹೋದ ಜ್ಞಾನೇಶ್‌ ಬಾತ್‌ ರೂಮಿನ ಒಳಗೆ ಹೋಗಿದ್ದಾನೆ. ಆತ ತುಂಬ ಹೊತ್ತು ಹೊರಗೆ ಬಾರದಿದ್ದಾಗ ಬಾತ್ ರೂಮ್ ಕಿಟಕಿ ಮೂಲಕ ನೋಡಿದರು. ಆಗ ಜ್ಞಾನೇಶ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಕೂಡಲೇ ತಂದೆ ಜಗದೀಶ್‌ ಅವರು ಕಿಟಕಿ ಬಾಗಿಲು ಒಡೆದು ಒಳಗೆ ಹೋದರು.

ನೇಣಿನಿಂದ ಇಳಿಸಿ ರಕ್ಷಣೆಗೆ ಯತ್ನಿಸಿದರೂ ಅಷ್ಟು ಹೊತ್ತಿಗೆ ಪ್ರಾಣ ಹೋಗಿದೆ. ಮಂಗಳೂರು ‌ನಗರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Young girl suicide | ಪ್ರೀತಿಸಿ ಕೈಕೊಟ್ಟ ಯುವಕ, ಮನ ನೊಂದ ಯುವತಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆ

Exit mobile version