Site icon Vistara News

Boys Dies: ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರ ಸಾವು

Boys Dies

#image_title

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ (Boys Dies) ದುರ್ಘಟನೆ ನಡೆದಿದೆ. ಅಭಿಷೇಕ್ (15), ಜಿತೇಂದ್ರ (10) ಮೃತ ಬಾಲಕರು.

ಬನ್ನಿಕಲ್ಲು ಗ್ರಾಮದ ವ್ಯಾಪ್ತಿಯ ಹಂಪಸಾಗರದ ನಾಗರಾಜ ಎಂಬುವರ ಕೃಷಿ ಹೊಂಡದಲ್ಲಿ ನೀರಿನಲ್ಲಿ ಮುಳುಗಿ ಬಾಲಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಉಪತಹಸೀಲ್ದಾರ್‌ ಶಂಕ್ರಪ್ಪ, ಎಎಸ್‌ಐ ಕರಿವೀರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ‌ ಶವ ಪತ್ತೆ

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ಇಂದಿರಾಗಾಂಧಿ ವಸತಿ ನಿಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ‌ ಶವ ಪತ್ತೆಯಾಗಿದೆ. ಇದರಿಂದ ಬಾಲಕ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಹಾಸ್ಟೆಲ್‌ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Kalaburagi Shootout: ಕಲಬುರಗಿಯಲ್ಲಿ ತಲವಾರ್ ಹಿಡಿದು ಜನರಿಗೆ ಬೆದರಿಕೆ, ದುಷ್ಕರ್ಮಿ ಮೇಲೆ ಶೂಟೌಟ್‌

Exit mobile version