ಬೆಂಗಳೂರು, ಕರ್ನಾಟಕ: 5 ಕೆಜಿ ಅಕ್ಕಿಯ ಜೊತೆಗೆ 5 ಕೆಜಿ ಸಿರಿಧಾನ್ಯ ಕೂಡ ನೀಡಲಾಗುವುದು. ಒಟ್ಟು 10 ಕೆಜಿ ಪಡಿತರ ನೀಡಲಾಗುವುದು. ಪ್ರತಿ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡಲಾಗುವುದು. ಇದು ಬಿಜೆಪಿ ಪ್ರಣಾಳಿಕೆಯ ಪ್ರಮಖ ಭರವಸೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ(Karnataka Election BJP Manifesto).
ಬಿಜೆಪಿ the party with the difference. ಹಾಗಾಗಿ, ರಾಷ್ಟ್ರೀಯ ಚುಕ್ಕಾಣಿ ಹಿಡಿದಿರುವ ಪಕ್ಷ. ದೇಶವನ್ನು, ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ, ಆಡಳಿತ ಮಾಡಬೇಕಾಗುತ್ತದೆ. ಅತ್ಯಂತ ಪ್ರಬಲ ರಾಜ್ಯಗಳ ಒಕ್ಕೂಟವೇ, ಪ್ರಬಲ ರಾಷ್ಟ್ರವಾಗಲು ಸಾಧ್ಯ. ಕರ್ನಾಟಕದ ಆಡಳಿತ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ರಾಜ್ಯದ ಮೇಲೆ ಮಾತ್ರವಲ್ಲ ರಾಷ್ಟ್ರದ ಮೇಲೂ ಪರಿಣಾಮ ಬೀರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು(Karnataka Election 2023).
ಬಿಜೆಪಿಯದ್ದುಪ್ರಜಾ ಪ್ರಣಾಳಿಕೆ. ಜನರ ಪ್ರಣಾಳಿಕೆಯಾಗಿದೆ. ಸುಧಾಕರ್ ನೇತೃತ್ವದ ತಂಡ ಸಾಮಾನ್ಯ ಜನರಿಂದ ಪರಿಣಿತರವರೆಗೂ ಎಲ್ಲಾ ಅಭಿಪ್ರಾಯ ಪಡೆದಿದ್ದಾರೆ. ಒಂದು ಪ್ರಣಾಳಿಕೆ ರಾಜ್ಯ ಸರ್ಕಾರಕ್ಕೆ ಮುಂದೆ ನಡೆಯುವ ದಾರಿ ಮತ್ತು ದಿಕ್ಕು ತೋರಿಸುತ್ತದೆ. ಪ್ರಮುಖ ಘಟನೆ ನಡೆದಾಗ ಆಡಳಿತವನ್ನು ಕೂಡ ತಕ್ಕ ಹಾಗೆ ಮಾಡಬೇಕಾಗುತ್ತದೆ. 2018 ರ ಚುನಾವಣೆಗೂ ಮುನ್ನ ನಾವ್ಯಾರು ಕೋವಿಡ್ ನೀರಿಕ್ಷೆ ಮಾಡಿರಲಿಲ್ಲ. ಆರ್ಥಿಕ ಕುಸಿತ, ಜನರ ಜೀವನ ಅಸ್ತವ್ಯಸ್ತವಾಗಿತ್ತು. ಅದನ್ನು ನಿಭಾಯಿಸೋದು ನಮ್ಮ ಜವಾಬ್ದಾರಿಯಾಗಿತ್ತು. ಆ ಎಲ್ಲಾ ಅನುಭವವನ್ನು ಈ ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Karnataka Election 2023: ಸಾಮಾಜಿಕ ಭದ್ರತಾ ಯೋಜನೆಗಳ ಜತೆಗೆ, ಕನ್ನಡವೇ ಮೊದಲು! ಇದು ಜೆಡಿಎಸ್ ಪ್ರಣಾಳಿಕೆ
ಈ ಪ್ರಣಾಳಿಕೆಯಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕೃಷಿ ಸಮ್ಮಾನ್‌ನಿಂದ ರೈತ ವಿಧ್ಯಾನಿಧಿವರೆಗೂ ಕೃಷಿಕರಿಗೆ ಮಹತ್ವ ನೀಡಲಾಗಿದೆ. ಬಜೆಟ್‌ನಲ್ಲಿ ಕೂಡ ಅನೇಕ ಯೋಜನೆ ಘೋಷಣೆ ಮಾಡಿದ್ದೇವೆ. ಇದಲ್ಲದೇ ಮುಂದಿನ 5 ವರ್ಷದಲ್ಲಿ 1 ಸಾವಿರ ಕೃಷಿ ಉತ್ಪಾದನೆ ಕೇಂದ್ರ ತೆರಯೋದು. ನೀರಾವರಿ ಯೋಜನೆ ಸಂಪೂರ್ಣ ಮಾಡುವ ಸಂಕಲ್ಪ ಹೊಂದಿದ್ದೇಗೆ. ಆಪತ್ಕಾಲದ ನಿಧಿಯನ್ನು ಮಾಡುವಂಥದ್ದು. ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಗಳಿಗೆ ಬಿಜೆಪಿ ತಿರುಗೇಟು
ಐದು ಕೆಜಿ ಅಕ್ಕಿ.ಗೆ ಐದು ಕೆಜಿ ಸಿರಿ ಧಾನ್ಯ. ರೈತರಿಗೆ ಐದರಿಂದ ಹತ್ತು ಲಕ್ಷ ರೂಪಾಯಿವರೆಗೂ ಇನ್ಶುರೆನ್ಸ್. ನಂದಿನಿ ವರ್ಸಸ್ ಅಮೂಲ್ ವಿವಾದಕ್ಕೆ ತೆರೆ ಎಳೆಯುವ ಕಸರತ್ತನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ಮಾಡಿದೆ. ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಉಚಿತ ನಂದಿನಿ ಹಾಲು ನೀಡಲಿದೆ. ಇಂದಿರಾ ಕ್ಯಾಂಟಿನ್ ಗೆ ಬದಲಾಗಿ ಪ್ರತಿ ವಾರ್ಡ್ ಗೆ ಅಟಲ್ ಕ್ಯಾಂಟಿನ್ ಜಾರಿ ಮಾಡುವ ಭರವಸೆ ನೀಡಿದೆ. ವರ್ಷಕ್ಕೆ ಮೂರು ಸಿಲಿಂಡರ್ ಫ್ರೀ – ಸಿಲಿಂಡರ್ ದರ ಏರಿಕೆ ಕಾಂಗ್ರೆಸ್ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಬಳಸಿದೆ. ಯುವಕರು, ರೈತರು, ಮಹಿಳೆಯರ ಪರ ಪ್ರಣಾಳಿಕೆಯನ್ನು ಬಿಜೆಪಿ ಮಾಡಿದೆ.