Site icon Vistara News

Rain News| ನೀರಿನ ರಭಸಕ್ಕೆ ಮುರಿದು ಬಿದ್ದ ಸೇತುವೆ, ಕಳೆದ ವರ್ಷವಷ್ಟೇ ಕಟ್ಟಿದ್ದರು!

bridge

ರಾಮನಗರ: ಜಿಲ್ಲೆಯಲ್ಲಿ ಒಂದೆರಡು ದಿನಗಳಿಂದ ಅಷ್ಟೇನೂ ಜೋರಾಗಿ ಮಳೆಯಿಲ್ಲ. ಆದರೆ, ಅದಕ್ಕಿಂತ ಮೊದಲು ಸುರಿದ ಮಳೆಯ ಅವಾಂತರಗಳು ಇನ್ನೂ ನಿಂತಿಲ್ಲ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ನೀರಿನ ರಭಸಕ್ಕೆ ಸೇತುವೆಯೊಂದು ಮುರಿದುಬಿದ್ದಿದೆ. ಇದರಿಂದಾಗಿ ಕೊಂಡಾಪುರ-ಬಾಣಗಹಳ್ಳಿ ಗ್ರಾಮಗಳ ಸಂಪರ್ಕವೇ ಕಡಿದುಹೋಗಿದೆ.

ಕಣ್ವ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ರಭಸದಿಂದ ಹರಿದ ನೀರು ಸೇತುವೆಯ ಒಂದು ಭಾಗವನ್ನೇ ಅಲ್ಲಾಡಿಸಿ ಉರುಳಿಸಿದೆ.

ಕಳೆದ ವರ್ಷವಷ್ಟೇ ನಿರ್ಮಾಣವಾಗಿದ್ದ ಸೇತುವೆ
ಅಚ್ಚರಿ ಎಂದರೆ ಈ ಸೇತುವೆಯನ್ನು ಕಟ್ಟಿ ಈಗಷ್ಟೇ ಒಂದು ವರ್ಷವಾಗಿದೆ. ಮೂಲದಲ್ಲೇ ಇದರ ಕಳಪೆ ಕಾಮಗಾರಿ ಬಗ್ಗೆ ಆಕ್ಷೇಪಗಳು ಇದ್ದವು. ಆಗ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಈಗ ನೀರಿನ ರಭಸವನ್ನು ತಡೆದುಕೊಳ್ಳಲಾಗದೆ ಅದು ಮುರಿದುಬಿದ್ದಿದೆ.

ಈಗ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು ಹತ್ತಾರು ಕಿ.ಮೀ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಡಳಿತದ ಜನರ ಆಕ್ರೋಶ ಇನ್ನಷ್ಟು ಹೆಚ್ಚಿದೆ.

Exit mobile version