Site icon Vistara News

Brims hospital | ಹೆರಿಗೆ ನೋವಿನಲ್ಲಿದ್ದ ತುಂಬು ಗರ್ಭಿಣಿಯನ್ನು 2 ಗಂಟೆ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿಸಿದರು!

Brims hospital pregnant woman

ಬೀದರ್: ಹೆರಿಗೆ ನೋವಿನಲ್ಲಿ ಆಸ್ಪತ್ರೆಗೆ ಬಂದಿದ್ದ ತುಂಬು ಗರ್ಭಿಣಿಯೊಬ್ಬರನ್ನು ಎರಡು ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿಸಿದ ಘಟನೆ ಬೀದರ್‌ನಲ್ಲಿ (Brims hospital) ನಡೆದಿದೆ. ಇತ್ತೀಚೆಗೆ ತುಮಕೂರು ಮತ್ತು ಇತರ ಕಡೆಗಳಲ್ಲಿ ಗರ್ಭಿಣಿಯರನ್ನು ಅಮಾನವೀಯವಾಗಿ ನಡೆಸಿಕೊಂಡು ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾದರೂ ಸರ್ಕಾರಿ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ.

ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಗರ್ಭಿಣಿ ಪ್ರೇಮಾ ಅವರಿಗೆ ಸೋಮವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಅವರನ್ನು ರಾಜಗೀರಾ ಗ್ರಾಮದಿಂದ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆ ತರಲಾಗಿತ್ತು.

ಮೊದಲು ಅವರನ್ನು ಬೆಳಗ್ಗೆ ೫ ಗಂಟೆಗೆ ಬ್ರಿಮ್ಸ್‌ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ, ಅಲ್ಲಿ ಅವರನ್ನು ಸೇರಿಸಿಕೊಳ್ಳಲಿಲ್ಲ. ಓಲ್ಡ್‌ ಸಿಟಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಯಿತು. ಆದರೆ, ಅಲ್ಲಿಗೆ ಹೋದಾಗ ಅಲ್ಲಿಯೂ ಸೇರಿಸಿಕೊಳ್ಳದೆ ಮತ್ತೆ ಬ್ರಿಮ್ಸ್‌ಗೆ ಹೋಗುವಂತೆ ಸೂಚಿಸಲಾಗಿದೆ. ಅಲ್ಲಿಂದ ಅದೇ ಆಂಬ್ಯುಲೆನ್ಸ್‌ನಲ್ಲಿ ಬ್ರಿಮ್ಸ್‌ಗೆ ಕರೆತಲಾಯಿತು.

ಇಲ್ಲಿ ಮತ್ತೆ ಸಿಬ್ಬಂದಿಗಳ ಕಿರಿಕಿರಿ ನಡೆಯಿತು. ಆ ಮಹಿಳೆ ಅಷ್ಟೊಂದು ನೋವು ಅನುಭವಿಸುತ್ತಿದ್ದರೂ ಅವರನ್ನು ಆಂಬ್ಯುಲೆನ್ಸ್‌ನಿಂದ ಆಸ್ಪತ್ರೆಯ ಒಳಗೆ ಕರೆತರಲು ಕನಿಷ್ಠ ಸ್ಟ್ರೆಚರ್‌ ವ್ಯವಸ್ಥೆಯನ್ನೂ ಮಾಡಲಿಲ್ಲ. ಅವರು ನಡೆದುಕೊಂಡೇ ಆಸ್ಪತ್ರೆಯ ಒಳಗೆ ಬಂದರು. ಬಳಿಕವೂ ಹೆರಿಗೆ ವಾರ್ಡ್‌ಗೆ ನಡೆದುಕೊಂಡೇ ಹೋಗಬೇಕಾಯಿತು.

ಬೆಳಗ್ಗೆ ಒಂಬತ್ತು ಗಂಟೆಗೆ ಆಸ್ಪತ್ರೆಗೆ ಬಂದವರು ಎರಡು ಗಂಟೆ ಕಾಲ ಅಲೆದು ಬಳಿಕ ಹೆರಿಗೆ ವಾರ್ಡ್‌ಗೆ ಸೇರಿದರು. ಈ ಬಗ್ಗೆ ಮನೆಯವರು ತೀವ್ರ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ | Negligence at Hospital | ಮಧ್ಯಾಹ್ನವಾದರೂ ಆಸ್ಪತ್ರೆಗೆ ಬಾರದ ವೈದ್ಯ, ಸಿಬ್ಬಂದಿ: ಗರ್ಭಿಣಿ ಪರದಾಟ

Exit mobile version