ಬೆಂಗಳೂರು: ನಗರ ಜಿಲ್ಲೆಯ ವಿಶೇಷ ವಿಧಾನಸಭಾ ಕ್ಷೇತ್ರ ಎನಿಸಿಕೊಂಡಿರುವ ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಕೆ. ಆರ್ ಶ್ರೀಧರ ರೆಡ್ಡಿ ವಿರುದ್ಧ ಜಯ ಗಳಿಸಿದರು. 68557 ಮತಗಳನ್ನು ಪಡೆದಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಅವರು 46,805 ಮತಗಳನ್ನು ಪಡೆದು ಬಿಜೆಪಿಯ ಜಿ ಪ್ರಸಾದ್ ರೆಡ್ಡಿ ವಿರುದ್ಧ ಜಯ ಸಾಧಿಸಿದ್ದರು.
ಸ್ವತಂತ್ರ ಕ್ಷೇತ್ರವಾಗಿ ಮೂರು ಚುನಾವಣೆಗಳನ್ನು ಎದುರಿಸಿರುವ ಬಿಟಿಎಂ ಲೇಔಟ್‌ನಲ್ಲಿ ಮೂರಕ್ಕೆ ಮೂರು ಚುನಾವಣೆಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು ರಾಮಲಿಂಗಾರೆಡ್ಡಿ. ಅವರು 2008, 2013, 2018ರ ಮೂರು ಚುನಾವಣೆಗಳಲ್ಲೂ ಜಯ ಸಾಧಿಸಿದ್ದರು.
ಇದನ್ನೂ ಓದಿ : Hebbal Election Results : ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ಭೈರತಿ ಸುರೇಶ್ಗೆ ಜಯ
ಬಿಟಿಎಂ ವಿಧಾನಸಭಾ ಕ್ಷೇತ್ರ 2.63 ಲಕ್ಷ ಮತದಾರರನ್ನು ಹೊಂದಿದೆ. ಇದರಲ್ಲಿ ಉತ್ತರ ಭಾರತದವರು, ಮಲಯಾಳಿಗಳು ಸೇರಿದಂತೆ ಹೊರಗಿನವರೇ ಅಧಿಕ. ಒಕ್ಕಲಿಗರು-55 ಸಾವಿರ, ಲಿಂಗಾಯತರು-5,000, ಬ್ರಾಹ್ಮಣರು-23,000, ಒಬಿಸಿ-28,000, ಎಸ್ಸಿ-ಎಸ್ಟಿ-52,000, ಮುಸ್ಲಿಂ-12,000 ಹಾಗೂ ಇತರೆ-1,08,000 ಮತದಾರರಿದ್ದಾರೆ.