Site icon Vistara News

Buffalo attack: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಟ್ಟಾಡಿಸಿ ಇರಿದು ಕೊಂದ ದೇವರ ಕೋಣ

Buffalo attack

#image_title

ದಾವಣಗೆರೆ: ದೇವರ ಹೆಸರಿನಲ್ಲಿ ಬೀಡಾಡಿಯಾಗಿ ಬಿಡಲಾದ ಕೋಣವೊಂದು (Buffalo left to god) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಟ್ಟಾಡಿಸಿ ಇರಿದು ಕೊಂದು (Farmer killed) ಹಾಕಿದ ಭಯಾನಕ ಘಟನೆಯೊಂದು ದಾವಣಗೆರೆ ಜಿಲ್ಲೆಯ (Davanagere News) ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ (Crime News) ಗ್ರಾಮದಲ್ಲಿ ನಡೆದಿದೆ.

ಲಿಂಗದಹಳ್ಳಿ ಗ್ರಾಮದ ಉಡಸಲಾಂಭಾ ದೇವರ ಕೋಣದ ಕ್ರೌರ್ಯಕ್ಕೆ ಬಲಿಯಾದ ಬಲಿಯಾದ ವ್ಯಕ್ತಿಯನ್ನು ಎನ್ ಬಸವನಹಳ್ಳಿಯ ಜಯಣ್ಣ(48) ಎಂದು ಗುರುತಿಸಲಾಗಿದೆ.

ಇವರು ತಮ್ಮದೇ ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ನಡೆಸಿದ ದೇವರ ಕೋಣ ಅವರನ್ನು ಅಟ್ಟಾಡಿಸಿ ಇರಿದಿದೆ. ದಾಳಿಯಲ್ಲಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಜಯಣ್ಣ.

ಭಯವಿಲ್ಲದೆ ಓಡಾಡುತ್ತಿದ್ದ ಪುಂಡ ಕೋಣ

ಸಾಮಾನ್ಯವಾಗಿ ದೇವರಿಗೆ ಬಿಟ್ಟ ಕೋಣವೆಂದರೆ ದೇವಸ್ಥಾನದ ಪರಿಸರದಲ್ಲಿ ಓಡಾಡುತ್ತಾ ಎಲ್ಲ ಜತೆಗೆ ಯಾವುದೇ ಸಮಸ್ಯೆ ಇಲ್ಲದೆ ಒಡನಾಡಿಕೊಂಡಿರುತ್ತದೆ. ಆದರೆ, ಕೆಲವು ಕಡೆ ದೇವರ ಕೋಣಗಳು ಎಂದರೆ ತಿಂದು ಕೊಬ್ಬಿ ಜನರನ್ನು ಬೆದರಿಸುವುದೂ ಇದೆ. ಇಲ್ಲಿನ ಈ ಕೋಣ ಎರಡನೇ ವರ್ಗಕ್ಕೆ ಸೇರಿದ್ದಾಗಿದ್ದು, ಸಾರ್ವಜನಿಕರು ಈ ಕೋಣ ಬಂದು ಎಂದರೆ ಹೆದರಿ ದೂರ ಓಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜನರ ಮೇಲೆ ಪದೇಪದೆ ದಾಳಿ ನಡೆಸುತ್ತಿದ್ದ ದೇವರ ಕೋಣದ ಬಗ್ಗೆ ಲಿಂಗದಹಳ್ಳಿ ಗ್ರಾಮಸ್ಥರು ದೇವಸ್ಥಾನ ಸೇರಿದಂತೆ ಹಲವರಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿತ್ತು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೋಲೀಸರು ದಾಖಲು‌ ಮಾಡಿಕೊಳ್ಳುತ್ತಿಲ್ಲ ಎಂದು ಸ್ಥಳೀಯರ ಆರೋಪ ಮಾಡಿದ್ದರು.

ಈ ರೀತಿ ಉಂಡಾಡಿಯಾಗಿ ಅಲೆಯುತ್ತಾ ಜನರಿಗೆ ಹಿಂಸೆ ಕೊಡುತ್ತಿದ್ದ ಈ ಕೋಣ ಈಗ ಒಬ್ಬ ವ್ಯಕ್ತಿಯನ್ನೇ ಬಲಿ ಪಡೆದಿರುವುದು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಪೊಲೀಸರು ಹಾಗೂ ದೇವಸ್ಥಾನದ ಅಡಳಿತ ಮಂಡಳಿ ವಿರುದ್ಧ ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೋಣವನ್ನು ಸಾರ್ವಜನಿಕವಾಗಿ ಓಡಾಡಲು ಬಿಡಬಾರದು, ಎಲ್ಲಾದರೂ ಕಟ್ಟಿಹಾಕಬೇಕು ಎಂದು ಆಗ್ರಹಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಅನಾರೋಗ್ಯದಿಂದ ನೊಂದ ಸರ್ಕಾರಿ ಡಾಕ್ಟರ್‌ ಬಾವಿಗೆ ಹಾರಿ ಆತ್ಮಹತ್ಯೆ

ಗದಗ: ಸರ್ಕಾರಿ ವೈದ್ಯರೊಬ್ಬರು (Government doctor) ಬಾವಿಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಕುಮಾರ್ ಸ್ವಾಮಿ ಚಿದಾನಂದಯ್ಯ ಬರದೂರಮಠ (45) ಮೃತ ವೈದ್ಯ.ರು.

ಹಿರಿಯ ಆರೋಗ್ಯ ನಿರೀಕ್ಷಣಾ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ಮೀಟಿಂಗ್‌ ಇದೆ ಎಂದು ಹೇಳಿ ಹೋಗಿದ್ದ ಅವರು ಮರಳಿ ಬರಲೇ ಇಲ್ಲ. ಇದೀಗ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ.

ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅವರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಯುತ್ತಿತ್ತು. ಪತ್ನಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು. ಭಾನುವಾರ ತಡರಾತ್ರಿ ತಮ್ಮ ಸ್ವಂತ ಜಮೀನಿನ ಬಾವಿಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ.

ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ.ರಾಗಿದ್ದ ಇವರು ಜನಾನುರಾಗಿದ್ದರು. ಆದರೆ, ಅವರು ಪಾರ್ಸಿ ರೋಗದಿಂದ ಬಳಲುತ್ತಿದ್ದರೆಂಬ ಮಾಹಿತಿ ಇದೆ. ಹೀಗಾಗಿ ಮಾನಸಿಕವಾಗಿ ನೊಂದು ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ಇದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road accident: ಅಪಘಾತ ಸರಮಾಲೆ; ಎಳನೀರು ವ್ಯಾಪಾರಿಗಳು ಸೇರಿ ಮೂವರು ಬೈಕ್‌ ಸವಾರರ ದಾರುಣ ಸಾವು

Exit mobile version