Site icon Vistara News

Bull attack | ಸೈಕಲ್‌ನಲ್ಲಿ ಹೋಗುತ್ತಿದ್ದ 7ರ ಬಾಲಕನ ಮೇಲೆ ಗೂಳಿ ದಾಳಿ: ಕೊಂಬಿನಿಂದ ಎತ್ತಿ ಎಸೆದ ಬೀಡಾಡಿಗಳು

Gooli dali

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಬೀಡಾಡಿ ಜಾನುವಾರು, ಗೂಳಿಗಳ ಅಬ್ಬರ ಜೋರಾಗುತ್ತಿದೆ. ಇಲ್ಲಿನ ಗೋಪಿಶೆಟ್ಟಿ ಕೊಪ್ಪದಲ್ಲಿ ನಡೆದ ಒಂದು ಘಟನೆ ಭಯಾನಕವಾಗಿದ್ದು, ಏಳು ವರ್ಷದ ಪುಟ್ಟ ಬಾಲಕ ಜೀವ ಉಳಿಸಿಕೊಂಡಿದ್ದೇ ಪವಾಡ ಎಂಬಂತಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಎರಡು ಗೂಳಿಗಳು (Bull attack) ದಾಳಿ ನಡೆಸಿದ್ದವು. ಬಾಲಕ ಹೇಗೋ ತಪ್ಪಿಸಿಕೊಂಡು ಬಚಾವಾಗಿದ್ದಾನೆ.

ಗೋಪಿಶೆಟ್ಟಿ ಕೊಪ್ಪದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ಸನತ್ (7) ಎಂಬ ಬಾಲಕನ ಎರಡು ಗೂಳಿಗಳು ಏಕಾಏಕಿ ದಾಳಿ ಮಾಡಿವೆ. ಮನೆ ಸಮೀಪದ ಅಂಗಡಿಯಿಂದ ಹಾಲು ತರುವಾಗ ಈ ಘಟನೆ ನಡೆದಿದೆ. ಮೊದಲು ಒಂದು ಗೂಳಿ ಬಾಲಕನನ್ನು ಕೊಂಬಿನಿಂದ ಎತ್ತಿ ಎಸೆದು ತಿವಿದರೆ, ಬಳಿಕ ಇನ್ನೊಂದು ಧಾವಿಸುತ್ತದೆ.

ದಾಳಿಯ ಬಳಿಕ ಬಾಲಕನನ್ನು ಕರೆದೊಯ್ಯುತ್ತಿರುವುದು.

ಆಗ ಅಕ್ಕಪಕ್ಕದ ಮನೆಯವರು ಬೊಬ್ಬೆ ಹೊಡೆದುಕೊಂಡು ಓಡಿ ಬಂದಿದ್ದರಿಂದ ಬಾಲಕ ಬಚಾವಾಗುತ್ತಾನೆ. ಗೂಳಿ ದಾಳಿಯಲ್ಲಿ ಬಾಲಕನಿಗೆ ತಲೆ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಲಕನಿಗೆ ಗೂಳಿ ದಾಳಿ ಮಾಡಿದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಶಿವಮೊಗ್ಗ ಬೀಡಾಡಿ ಜಾನುವಾರಗಳ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ | Street dog attack | ಮಲಗಿದ್ದ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿನಾಯಿಗಳು

Exit mobile version