Site icon Vistara News

Video Viral | ವ್ಯಾಘ್ರ ಕಂಡು ಹೋರಿ ವ್ಯಗ್ರ; ಹೆದರಿ ಓಡಿದ ಹುಲಿ ದೃಶ್ಯ ಹೀಗಿತ್ತು!

VIDEO VIRAL

ಮೈಸೂರು: ಇಲ್ಲಿನ ಎಚ್.ಡಿ.ಕೋಟೆ ಮಾನಂದವಾಡಿ ನಾಗರಹೊಳೆ ಅಭಯಾರಣ್ಯದಲ್ಲಿ ಹೋರಿಯೊಂದು ಹುಲಿಯನ್ನೇ ಹಿಮ್ಮೆಟ್ಟಿಸಿರುವ (Video Viral) ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೇವು ಹುಡುಕುತ್ತಾ ಬರುತ್ತಿದ್ದ ಹೋರಿ ಎದುರಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿಗೆ ತನ್ನ ಆಹಾರ ಸಿಕ್ಕ ಖುಷಿ. ಆದರೆ, ಹೋರಿಗೆ ತನ್ನ ಜೀವ ಉಳಿಸಿಕೊಳ್ಳುವ ತವಕ. ಇನ್ನೇನು ತನ್ನ ಬೇಟೆಯನ್ನು ಪಡೆದುಕೊಳ್ಳಬೇಕು ಎಂದು ಹೋರಿ ಮೇಲೆ ದಾಳಿ ಮಾಡಲು ಸಿದ್ಧವಾಗಿ ಹುಲಿ ಮುನ್ನುಗ್ಗಿತು. ಆದರೆ..?

ಹುಲಿ ದಾಳಿ ಮಾಡುತ್ತಿದೆ ಎಂದು ತಿಳಿದ ಹೋರಿ ಒಂದು ಕ್ಷಣ ವಿಚಲಿತವಾದರೂ ಮಾಡು ಇಲ್ಲವೇ ಮಡಿ ಎಂಬಂತೆ ಹುಲಿ ಮೇಲೆಯೇ ಎಗರಿಬಿದ್ದಿದೆ. ಹೋರಿ ದಾಳಿಯನ್ನು ನಿರೀಕ್ಷೆ ಮಾಡಿರದ ಹುಲಿ ಬೆದರಿದೆ. ಅಲ್ಲದೆ, ಸ್ಥಳದಿಂದ ಹಿಂದಕ್ಕೆ ಸರಿದಿದೆ. ಆದರೂ ಹೋರಿ ಬಹಳ ದೂರ ಅಟ್ಟಿಸಿಕೊಂಡು ಹೋಗಿದೆ.

ಹೀಗೆ ಹುಲಿಯನ್ನು ಹೋರಿಯೊಂದು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ಪ್ರವಾಸಿಗರ ಮೊಬೈಲ್‌ನಲ್ಲಿ ದೃಶ್ಯ ಸೆರೆ‌ಯಾಗಿದೆ. ಹುಲಿಯನ್ನು ಹಿಮ್ಮೆಟ್ಟಿಸಿ ಹೋರಿ ಜೀವ ಉಳಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | Tiger Kirana | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಹುಲಿ ಸಾವು

Exit mobile version