ವಿಜಯನಗರ: ರಸ್ತೆ ಗುಂಡಿಗಳ ಸಮಸ್ಯೆ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿಲ್ಲ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ರಸ್ತೆ ಗುಂಡಿಗೆ ಬಿದ್ದ ಬಸ್ಸೊಂದರ ಆಕ್ಸಿಲ್ ಕಟ್ಟಾಗಿ (Bus accident) ಎರಡು ಚಕ್ರಗಳೇ ಪ್ರತ್ಯೇಕವಾಗಿವೆ!
ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ತೆಕ್ಕಲಕೋಟ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಈ ಬಸ್ ಹಗರಿಬೊಮ್ಮನಹಳ್ಳಿಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ರಸ್ತೆ ಗುಂಡಿಗೆ ಬಿತ್ತು. ಆಗ ವಾಹನದ ಹಿಂದಿನ ಆಕ್ಸಿಲ್ ತುಂಡಾಯಿತು. ಇದರ ಪರಿಣಾಮವಾಗಿ ವಾಹನದ ಹಿಂಬದಿಯ ಎರಡೂ ಚಕ್ರಗಳು ಬೇರ್ಪಟ್ಟವು!
ಸುಮಾರು ೫೦ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಾಗ ಘಟನೆ ನಡೆದಿದ್ದು, ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ವಾಹನ ನಿಲ್ಲಿಸಿದ್ದಾನೆ. ಬಸ್ ತುಂಬಾ ವೇಗವಾಗಿಯೇನೂ ಹೋಗುತ್ತಿರಲಿಲ್ಲ. ಒಂದೊಮ್ಮೆ ವೇಗವಾಗಿ ಸಾಗುತ್ತಿದ್ದರೆ ಕಳಚಿಕೊಂಡ ಚಕ್ರವಾಗಿ ವೇಗವಾಗಿ ಹೋಗಿ ಯಾವುದೋ ವಾಹನಕ್ಕೆ, ಪಾದಚಾರಿಗಳಿಗೆ ಬಡಿದು ದೊಡ್ಡ ಅನಾಹುತ ಸಂಭವಿಸುವ ಅಪಾಯವಿತ್ತು. ಅದೃಷ್ಟವಶಾತ್ ಅಂತ ಅವಘಡ ಸಂಭವಿಸಿಲ್ಲ. ಬಸ್ಸಿನ ಹಿಂಬದಿ ಒಮ್ಮೆಗೇ ನೆಲಕ್ಕೆ ಬಡಿದಿದ್ದರಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ | Bus accident | ಮೈಸೂರಿನ ಶಾಲಾ ಪ್ರವಾಸಿ ಬಸ್ ಸಾಗರದಲ್ಲಿ ಪಲ್ಟಿ: 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ