ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಬಸ್ ಅಪಘಾತ (Bus Accident) ಸಂಭವಿಸಿದ್ದು, 13 ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ. ಕೊಟ್ಟಾಯಂ ಜಿಲ್ಲೆಯ ಎರುಮೇಲಿಯ ಕಣಮಲ ಎಂಬಲ್ಲಿ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದಾಗ ಕರ್ನಾಟಕ (Karnataka) ಮೂಲದ ಬಸ್ ಉರುಳಿದೆ. ಇದೇ ವೇಳೆ ಕೋಲಾರದ 13 ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕರ್ನಾಟಕದ ಮುಳಬಾಗಿಲಿನಿಂದ ಖಾಸಗಿ ಬಸ್‌ನಲ್ಲಿ ಸುಮಾರು 43 ಪ್ರಯಾಣಿಕರು ಪಥಣಂತಿಟ್ಟದಲ್ಲಿರುವ ಶಬರಿಮಲೆ ದೇವಾಲಯಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಉರುಳಿದೆ. ಗಾಯಗೊಂಡಿರುವ 13 ಕನ್ನಡಿಗರಲ್ಲಿ ಕೆಲವರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ವರಿಗೆ ಗಂಭೀರ ಗಾಯ
“ಶಬರಿಮಲೆಗೆ ತೆರಳುವಾಗ ಬಸ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಉರುಳಿದೆ. ಕೂಡಲೇ ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜ್‌ಗೆ ರವಾನಿಸಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ಮುಕ್ಕೂಟ್ಟುಥರ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bus Accident: ನಿಂತಿದ್ದ ಬಸ್‌ಗೆ ಗುದ್ದಿದ ಯಮರೂಪಿ ಟ್ರಕ್; ಸ್ಥಳದಲ್ಲೇ 11 ಜನ ಸಾವು
ಪೂಜೆಗೆ ಹೊರಟ್ಟಿದ್ದ ಇಬ್ಬರು ಮಹಿಳೆಯರ ಸಾವು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿಯಲ್ಲಿ ಭೀಕರ ಮಂಗಳವಾರ (ಅಕ್ಟೋಬರ್ 17) ಅಪಘಾತ ನಡೆದಿತ್ತು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ಎಲ್‌ಟಿ ನಿವಾಸಿಗಳಾದ ಸೀತಮ್ಮ ರಾಮಪ್ಪ (60), ಗಿರಿಯಮ್ಮ ರಾಠೋಡ(55) ಮೃತರು. ನವರಾತ್ರಿ ಹಿನ್ನೆಲೆ ಗುಳೇದಗುಡ್ಡಲ್ಲಿ ಪೂಜೆಗಾಗಿ ಟಾಟಾ ಏಸ್ ವಾಹನದಲ್ಲಿ 10ಕ್ಕೂ ಹೆಚ್ಚು ಮಂದಿ ಹೋಗುತ್ತಿದ್ದರು. ಈ ವೇಳೆ ಬಾಗಲಕೋಟೆಯಿಂದ ಕೊಪ್ಪಳಕ್ಕೆ ಹೊರಟಿದ್ದ ಕ್ರೆಟಾ ಕಾರು ನಡುವೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾಏಸ್ ವಾಹನವೇ ಛಿದ್ರಗೊಂಡಿದೆ. ಕಾರು ಮುಂಭಾಗವು ಸಂಪೂರ್ಣ ಹಾನಿಯಾಗಿದೆ.