Site icon Vistara News

Bus accident | ಖಾಸಗಿ ಬಸ್‌ ಪಲ್ಟಿಯಾಗಿ ಇಬ್ಬರು ಸಾವು, 15 ಮಂದಿಗೆ ಗಾಯ

bus

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ರ ವಿರುಪಾಕ್ಷಿ ಗೇಟ್ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ ಇಬ್ಬರು ಸತ್ತಿದ್ದಾರೆ. 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಆಂದ್ರದ ಗುಂಟೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿದ್ದು, ಅಪಘಾತದ ನಂತರ ಡ್ರೈವರ್ ಹಾಗೂ ಕಂಡಕ್ಟರ್ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬಸ್ಸಿನಲ್ಲಿ 30 ಜನರಿದ್ದರು. ಮೃತಪಟ್ಟ ಇಬ್ಬರು ಪ್ರಯಾಣಿಕರನ್ನು ಆಂಧ್ರಪ್ರದೇಶ ಮೂಲದ ದಂಪತಿ, ವಿಜಯವಾಡ ಮೂಲದ ಷರೀಫ್ ಹಾಗೂ ಮೈಮುನ್ನಿಸಾ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಬಸ್ಸು ಆಂಧ್ರದ ನಲ್ಲೂರಿನ ವೇಮೂರಿ- ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಎಂದು ತಿಳಿದುಬಂದಿದೆ.

Exit mobile version