ರಾಮನಗರ: ವಿದ್ಯಾರ್ಥಿನಿಯೊಬ್ಬರು ಹತ್ತುವ ವೇಳೆ ಬಸ್ ಮುಂದಕ್ಕೆ ಚಲಿಸಿದ ಹಿನ್ನೆಲೆಯಲ್ಲಿ ಆಕೆಯ ಕಾಲು ಚಕ್ರಕ್ಕೆ ಸಿಲುಕಿ ಜರ್ಜರಿತಗೊಂಡ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲ ಕ್ರಾಸ್ ನಲ್ಲಿ ನಡೆದಿದೆ.
ಬಿಡದಿಯ ಜ್ಞಾನವಿಕಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ (19) ಗಾಯಗೊಂಡ ವಿದ್ಯಾರ್ಥಿನಿ. ಆಕೆ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಬಸ್ ಮುಂದಕ್ಕೆ ಚಲಿಸಿತ್ತು. ಏಕಾಏಕಿ ಮುಂದೆ ಹೋಗಿದ್ದರಿಂದ ಆಕೆ ಆಯತಪ್ಪಿ ಕೆಳಗೆ ಕುಸಿದಳು. ಅಷ್ಟು ಹೊತ್ತಿಗೆ ಚಾಚಿಕೊಂಡಿದ್ದ ಆಕೆಯ ಕಾಲುಗಳ ಮೇಲೆಯೇ ಚಕ್ರ ಹಾದು ಹೋಗಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿ ಜೀವಾಪಾಯದಿಂದ ಪಾರಾಗಿದ್ದಾಳೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮತ್ತು ಪರಿಸರದಲ್ಲಿ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳ ಧಾವಂತ ಜೋರಾಗಿದ್ದೇ ಇಂಥ ಘಟನೆಗಳಿಗೆ ಕಾರಣ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | Bus accident | ಬೈಕ್‌ಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್, ಸವಾರ ಸ್ಥಳದಲ್ಲೇ ಸಾವು