Site icon Vistara News

ಶಿಕ್ಷಣ ಇಲಾಖೆಯ ಆದೇಶಕ್ಕೆ ಸರಕಾರಿ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರು ಶಾಕ್‌

teacher transfer

teacher

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಸಾಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಸಿಬ್ಬಂದಿ ಸ್ಟಾಫ್‌ ಪ್ಯಾರ್ಟನ್‌ಗೆ ಅನುಗುಣವಾಗಿ ಶಿಕ್ಷಕರನ್ನು ಒದಗಿಸಲು ತಯಾರಿ ನಡೆಸಿದೆ. ಹೆಚ್ಚುವರಿಯಾಗಿರುವ ಖಾಲಿ ಹುದ್ದೆಗಳನ್ನು ಅಗತ್ಯವಿರುವ ಶಾಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಿ ಸರಿದೂಗಿಸಲು ಮಾರ್ಗಸೂಚಿ ಹೊರಡಿಸಿದೆ.

ಇದನ್ನೂ ಓದಿ | ಬರಗೂರು ಸಮಿತಿ ಎಡವಟ್ಟು‌ ಸರಿಪಡಿಸಲು ಮುಂದಾದ ಶಿಕ್ಷಣ ಇಲಾಖೆ?

ಆದರೆ ಈ ಮಾರ್ಗಸೂಚಿ ಸಂಸ್ಕೃತ ಶಿಕ್ಷಕರ ನಿದ್ದೆಗೆಡಿಸಿದೆ. ಕಾರಣ ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಸಂಸ್ಕೃತ ಹುದ್ದೆ ಇರುವುದೇ ಒಂದೊಂದೆ. ಹೀಗಿರುವಾಗ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಶಿಕ್ಷಕರು ಸ್ಥಳಾಂತರದ ಭೀತಿ ಜತೆಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೂ ಇದು ತೊಂದರೆ ಆಗುವುದೆಂದು ದೂರಿದ್ದಾರೆ. ಇಲಾಖೆಯು ವಿದ್ಯಾರ್ಥಿಗಳ ಅನುಪಾತದ ಆಧಾರದ ಮೇಲೆ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಆದರೆ ಖಾಲಿ ಇರುವ ಹುದ್ದೆಗಳ ನೇಮಕ ಮಾಡದೇ, ಇರುವ ಹುದ್ದೆಗೆ ಕಂಟಕ ಎದುರಾಗುವ ಆತಂಕವನ್ನು ಶಿಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ಸಂಸ್ಕೃತ ಶಿಕ್ಷಕರನ್ನು ಹೆಚ್ಚುವರಿ ಎಂದು ತೋರಿಸಬಾರದು ಎಂಬ ಸ್ಪಷ್ಟ ಸೂಚನೆ ಇದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಪಟ್ಟಿಯಲ್ಲಿ ಸಂಸ್ಕೃತ ಶಿಕ್ಷಕರನ್ನು ಸೇರಿಸಿದೆ. ಹೆಚ್ಚುವರಿ ಮಾನದಂಡವನ್ನು ಸಂಸ್ಕೃತ ಶಿಕ್ಷಕರಿಗೆ ಅಳವಡಿಸುವಂತಿಲ್ಲ ಎಂಬುದು ನೊಂದ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರ ವಾದ.

ಆದೇಶದಲ್ಲಿ ಏನಿದೆ?

ಸಂಸ್ಕೃತ ಪ್ರಥಮ ಅಥವಾ ತೃತೀಯ ಭಾಷೆ ಇರುವ ಶಾಲೆಗಳಲ್ಲಿ ಸಂಸ್ಕೃತ ಭಾಷೆ ಕಲಿಯುವ ʼಮಕ್ಕಳ ಸಂಖ್ಯೆ ಇದ್ದಲ್ಲಿʼ, ಇತರೆ ಮೂರು ಭಾಷಾ ಶಿಕ್ಷಕರ ಹುದ್ದೆಯ ಜೊತೆಗೆ ಸಂಸ್ಕೃತ ಭಾಷೆ ಶಿಕ್ಷಕರು ಇರತಕ್ಕದ್ದು ಎಂದು ಆದೇಶಿಸಲಾಗಿದೆ.

ರಾಜ್ಯದಲ್ಲಿ ಎಷ್ಟಿವೆ ಸಂಸ್ಕೃತ ಕಲಿಕೆ ಶಾಲೆಗಳು?

ರಾಜ್ಯದಲ್ಲಿ ಖಾಸಗಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳು ಸೇರಿ ಒಟ್ಟು 3 ಸಾವಿರ ಸಂಸ್ಕೃತ ಕಲಿಕೆ ಶಾಲೆಗಳಿವೆ. 8, 9 ಹಾಗೂ 10ನೇ ತರಗತಿ ಸೇರಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಕ್ರತವನ್ನು ಮೊದಲ ಹಾಗೂ ತೃತೀಯ ಭಾಷೆಯನ್ನಾಗಿ ಅಭ್ಯಸಿಸುತ್ತಿದ್ದಾರೆ. ಈ ಮೂರು ಹಂತಕ್ಕೆ ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಸೇರಿ 1,500 ಶಿಕ್ಷಕರು ಇದ್ದಾರೆ. ಸರ್ಕಾರಿ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರು ಇರುವುದೇ ಬೆರಳಣಿಕೆಯಷ್ಟು. ಹೀಗಿರುವಾಗ ಇರುವ ಶಿಕ್ಷಕರನ್ನು ಸ್ಥಳಾಂತರ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ | ಸಂಸ್ಕೃತ, ಕೊಂಕಣಿಯೂ ಆಗಲಿದೆ Google ಅನುವಾದ

Exit mobile version