ಬೆಂಗಳೂರು: ನಗರ ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ (159781) ಜಯ ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ತಮ್ಮೇಶ್ ಗೌಡ (121531) ಅವರಿಗಿಂತ 38250 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ ಅವರು ಬಿಜೆಪಿಯ ಎ ರವಿ ಅವರ ವಿರುದ್ಧ 5671 ಮತಗಳಿಂದ ಜಯ ಸಾಧಿಸಿದ್ದರು. 2008 ಹಾಗೂ 2013ರಲ್ಲೂ ಕೃಷ್ಣ ಭೈರೇಗೌಡ ಅವರು ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಕ್ಷೇತ್ರದಲ್ಲಿ ಒಕ್ಕಲಿಗರು (1,40,000), ಪರಿಶಿಷ್ಟ ಜಾತಿ/ಪಂಗಡಗಳವರು (ಒಂದು ಲಕ್ಷ ) ಮತ್ತು ಮುಸ್ಲಿಂ (80,000), ಕ್ರಿಶ್ಚಿಯನ್ (40,000) ಮತಗಳಿವೆ.
ಇದನ್ನೂ ಓದಿ : Dasarahalli Election Results : ದಾಸರಹಳ್ಳಿಯನ್ನು ಮರಳಿ ತೆಕ್ಕೆಗೆ ತೆಗೆದುಕೊಂಡ ಬಿಜೆಪಿಯ ಮುನಿರಾಜು
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಮೀಪದಲ್ಲಿದೆ. ಬ್ಯಾಟರಾಯನಪುರ ಕ್ಷೇತ್ರವು ಬೃಹತ್ ಬಿಬಿಎಂಪಿಯ ಏಳು ವಾರ್ಡ್‌ಗಳು, ಐದು ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಿದೆ. 2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಈ ಕ್ಷೇತ್ರ ರೂಪುಗೊಂಡಿತು. ಅಂದಿನಿಂದಲೂ ಇದು ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಇದುವರೆಗೆ ಮೂರು ಬಾರಿ ಚುನಾವಣೆಗಳು ನಡೆದದ್ದು ಮೂರೂ ಬಾರಿ ಕೃಷ್ಣಭೈರೇಗೌಡ ಅವರೇ ಗೆದಿದ್ದಾರೆ.