ಬೆಂಗಳೂರು: ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಇಂಡಿ ಮತ್ತು ವಿಜಯಪುರ ತಾಲೂಕುಗಳ 28,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 3 ಹಂತಗಳ 2,638.00 ಕೋಟಿ ರೂಪಾಯಿ ಅಂದಾಜು ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯಡಿ ಪ್ರಸ್ತುತ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರತ್ಯೇಕವಾಗಿ 3,245 ಟಿಎಂಸಿ ನೀರನ್ನು ಲಿಫ್ಟ್ ಮಾಡಿ (ಆರ್.ಎಲ್. 504.75 ಮೀಟರ್‌ನಿಂದ ಆರ್.ಎಲ್. 660.00 ಮೀಟರ್‌ವರೆಗೆ) ಪೈoಪ್ ಲೈನ್ ಅಳವಡಿಕೆಯೊಂoದಿಗೆ ಯೋಜನೆ ಜಾರಿಗೊಳ್ಳಲಿದೆ.
ವಿಜಯಪುರ ಜಿಲ್ಲೆಯ ಇಂಡಿ ಮತ್ತು ವಿಜಯಪುರ ತಾಲೂಕುಗಳಲ್ಲಿನ ನೀರಾವರಿ ವಂಚಿತ ಸುಮಾರು 64,000 ಹೆಕ್ಟೇರ್ ಪ್ರದೇಶವು ಕೃಷ್ಣಾ ಮೇಲ್ದಂಡೆ ಯೋಜನೆಯ ಯಾವುದೇ ಕಾರ್ಯಯೋಜನೆಯಲ್ಲಿಯೂ ಸೇರ್ಪಡೆಗೊಂಡಿರಲಿಲ್ಲ. ಈ ಕೊರತೆ ನೀಗಿಸಲು ಈ ಯೋಜನೆಯನ್ನು 3 ಹಂತಗಳಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
ಸರ್ಕಾರವು 2019-20ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ 250.00 ಕೋಟಿ ರೂ. ವೆಚ್ಚದಲ್ಲಿ ಇಂಡಿ ಹಾಗೂ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 28,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.
ಯೋಜನೆಯನ್ನು 3 ಹಂತಗಳಲ್ಲಿ ಅಂದರೆ, ಮೊದಲನೇ ಹಂತದಲ್ಲಿ 760.00 ಕೋಟಿ ರೂ., 2ನೇ ಹಂತದಲ್ಲಿ 939.00 ಕೋಟಿ ರೂ. ಮತ್ತು 3ನೇ ಹಂತದಲ್ಲಿ 939.00 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಇದನ್ನೂ ಓದಿ | ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ವಿವಿಗಳ ಸ್ಥಾಪನೆಗೆ ಹಾದಿ ಸುಗಮ, ಎಲ್ಲೆಲ್ಲಿ ಬರಲಿದೆ ಹೊಸ ವಿವಿ?