Site icon Vistara News

Cabinet Meeting: ಕುಡಿಯುವ ನೀರಿನ ತೆರಿಗೆ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ! ಗ್ಯಾರಂಟಿಗೆ ಹಣ ಹೊಂದಿಸಲು ಯತ್ನ?

Monsoon session

ಬೆಂಗಳೂರು: ಸಿಎಂ ಸಿದ್ದರಾಮಯ್ಯ(CM Siddaramaiah) ಅವರ ನೇತೃತ್ವದಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ (Cabinet Meeting) ಸಭೆ ನಡೆದಿದ್ದು, ಒಟ್ಟು 21 ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ (Covid Cases) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚೆ ಮಾಡಿ, ಸರ್ಕಾರಕ್ಕೆ ಸಲಹೆ ನೀಡಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿಲು ನಿರ್ಧರಿಸಲಾಗಿದೆ(Cabinet Sub Committee). ಹಾಗೆಯೇ, ನಿರ್ಮಾಣ ಹಂತದಲ್ಲಿ ಇರೋ 48760 ಮನೆಗಳನ್ನ ನಿರ್ಮಿಸಿ ಬಡವರಿಗೆ ಹಂಚಲು 500 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕುಡಿಯುವ ನೀರಿನ (Tax on Drinking Water) ತೆರಿಗೆ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಎಂಸಿಎಫ್ ಟಿಗೆ 320₹ ಹೆಚ್ಚಳ ಮಾಡಲು ಸಚಿವ ಸಂಪುಟ ತೀರ್ಮಾನ. ಮೂಲಕ ಬರಗಾಲದಲ್ಲೂ ಜನತೆಗೆ ಸರ್ಕಾರವು ಬರೆ ಹಾಕಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲು ಜನರ ಕುಡಿಯುವ ನೀರಿಗೆ ತೆರಿಗೆ ವಿಧಿಸಿದೆ.

ರಾಜ್ಯ ಸಚಿವ ಸಂಪುಟ ಕೈಗೊಂಡ ನಿರ್ಧಾರಗಳ ಪಟ್ಟಿ ಇಲ್ಲಿದೆ

ವಿಶ್ವೇಶ್ವರಯ್ಯ ಜಲ ನಿಗಮವನ್ನು ಕರ್ನಾಟಕ ನೀರಾವರಿ ಇಲಾಖೆ ಗೆ ವರ್ಗಾವಣೆ ಮಾಡುವ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ತೆರಿಗೆ ಪಾವತಿಸದ ಆಸ್ತಿ ತೆರಿಗೆ ಕಟ್ಟಲು ಒನ್ ಟೈಮ್ ಸೆಟ್ಲ್ಮೆಂಟ್ ಕಟ್ಟಲು ಒಪ್ಪಿಗೆ ಸೂಚಿಸಲಾಗಿದೆ. ತೆರಿಗೆ ಸಂಗ್ರಹ ಏರಿಕೆ ಮಾಡಲು ವಿವಿಧ 448 ಸ್ವತ್ತುಗಳಿಂದ ತೆರಿಗೆ ಕಟ್ಟಿಸಿಕೊಂಡು ಸುಮಾರು 234 ಕೋಟಿ ಗೆ ಗುರಿ ಇಟ್ಟುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಇಂದಿರಾ ಕ್ಯಾಂಟನ್ ತೆರೆಯಲು ಒಪ್ಪಿಗೆ ನೀಡಲಾಗಿದೆ. ಫೆಬ್ರವರಿಯಲ್ಲಿ ಜಂಟಿ ಅಧಿವೇಶನ ಜತೆಗೆ ಬಜೆಟ್ ಅಧಿವೇಶನ ನಡೆಸಲು ಇಂದಿನ ಕ್ಯಾಬಿನೆಟ್ ಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಹಣ ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿರುವುದನ್ನ ವಾಪಸು ಪಡೆಯಲು ತೀರ್ಮಾನ ತೆಗೆದುಕೊಳ್ಳಲಾಯಿತು. 300 ಇಲೆಕ್ಟ್ರಾನಿಕ್ ಬಸ್ ಗಳ ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. 450 ನಾನ್ ಎಸಿ ಬಸ್ ಖರೀದಿ ಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಸರ್ಕಾರದ ಹಣ ವಾಪಸ್ಸಿಗೆ ನಿರ್ಧಾರ

ಸರ್ಕಾರದ ಹಣ ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿಯಾಗಿ ಉಳಿದಿದ್ದು, ಅಂಥ ಹಣವನ್ನು ಗುರುತಿಸಿ ವಾಪಸ್ ಪಡೆಯುವ ಬಗ್ಗೆ ಸಂಪುಟವು ತನ್ನ ಒಪ್ಪಿಗೆಯನ್ನು ನೀಡಿದೆ. ಹಣ ವಾಪಸ್ ತರಲು ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಲಾಗುತ್ತದೆ. ಕೋಟ್ಯಾಂತರ ಹಣವನ್ನ ಅಧಿಕಾರಿಗಳು ದುರುಪಯೋಗ ಮಾಡಿರೋ ಮಾಹಿತಿ ಇದೆ.ಹಿಂದೆ 680 ಕೋಟಿ ಇದೇ ರೀತಿ ಪತ್ತೆ ಹಚ್ಚಲಾಗಿತ್ತು. ಈಗ ಮತ್ತೆ ಅಂತಹ ಪ್ರಕರಣ ತನಿಖೆ ಮಾಡಲಾಗುವುದು ಎಂದು ಹೇಳಲಾಗಿದೆ.

ಒನ್‌ಟೈಮ್ ಸೆಟ್ಲಮೆಂಟ್

ಬಿಬಿಎಂಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಆಸ್ತಿಯ ತೆರಿಗೆ ಸಂಗ್ರಹಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಒನ್ ಟೈಮ್ ಸೆಟ್ಲಮೆಂಟ್ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಎಚ್ಎಎಲ್ ಸಂಸ್ಥೆ 91.59 ಕೋಟಿ ರೂ., ಎಚ್‌ಎಂಟಿ 3.79 ಕೋಟಿ ರೂ ಬಾಕಿ ಉಳಿಸಿಕೊಂಡಿವೆ. ಅದೇ ರೀತಿ, 448 ಸ್ವತ್ತುಗಳಿಂದ 234 ಕೋಟಿ ರೂ. ಸಂಗ್ರಹದ ಗುರಿ ಇದೆ. ಒಟ್ಟಾರೆ ಬಾಕಿ ಕಟ್ಟಿಸಿಕೊಳ್ಳಲು ಸಂಪುಟ ನಿರ್ಧರಿಸಿದೆ.

ಈ ಸುದ್ದಿಯನ್ನೂ ಓದಿ: Cabinet meeting : ಒಂದೇ ಲಕ್ಷ ಕೊಟ್ರೆ ಸಾಕು, ಬಡವರಿಗೆ ಮನೆ; ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ

Exit mobile version