Site icon Vistara News

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Vistara Editorial, Government should conduct exam without any lapse

ಬೆಂಗಳೂರು: ಬಿಜೆಪಿ ಸರ್ಕಾರ ಸಮಯದಲ್ಲಿ ಜಾರಿಗೆ ತರಲಾಗಿದ್ದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಾಸ್ ಪಡೆಯಲು ರಾಜ್ಯ ಸಚಿವ ಸಂಪುಟದಲ್ಲಿ (Karnataka Cabinet meeting) ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಮೊದಲು ಕೃಷಿ ಭೂಮಿ‌ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022ರಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ತಂದು, ಆ ಮೂಲಕ ಯಾರು ಬೇಕಾದರೂ ಭೂಮಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯ ಈ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಾಸ್ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಗಳೊಂದಿಗೆ ನೂತನ ವಿಧೇಯಕವನ್ನು ಈ ಬಾರಿಯ ಅಧೀವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಗಿದೆ.

ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದೆನ್ನುವ ಕಾನೂನು ಈ ಮೂಲಕ ರದ್ದಾಗಲಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಈ ಕಾನೂನಿಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೋರಾಟಕ್ಕೆ ಬಿಜೆಪಿ ಸರ್ಕಾರ ಮಣಿಯದೆ ಕಾಯ್ದೆ ಜಾರಿ‌ ಮಾಡಿತ್ತು. ಈ ಮೂಲಕ ನಗರವಾಸಿ ಶ್ರೀಮಂತರು ರೈತರಿಂದ ಕೃಷಿ ಭೂಮಿ ಖರೀದಿ ಮಾಡುವುದು ಸುಲಭವಾಗಿತ್ತು. ಇದನ್ನು ತಡೆಗಟ್ಟಲು ಹೊಸ ವಿಧೇಯಕ ತರಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಕೆಲವು ಕಾನೂನುಗಳನ್ನು ರದ್ದುಗೊಳಿಸುವ ತೀರ್ಮಾನಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಈಗಾಗಲೇ ಕೈಗೊಂಡಿದೆ. ಇದನ್ನು ಬಿಜೆಪಿ ವಿರೋಧಿಸಿದೆ.

ಇದನ್ನೂ ಓದಿ: Cabinet Meeting: ಸಮವಸ್ತ್ರ ಪೂರೈಕೆಗೆ ತಡೆಹಿಡಿದಿದ್ದ ಹಣ ಬಿಡುಗಡೆಗೆ ಸಚಿವ ಸಂಪುಟ ಸಮ್ಮತಿ

Exit mobile version