ಬೆಂಗಳೂರು: ಹಲವರ ಬೆಳಗಿನ ದಿನಚರಿ ಶುರುವಾಗುವುದೇ ಬೆಡ್ ಕಾಫಿಯೊಂದಿಗೆ. ಖುಷಿಯೇ ಇರಲಿ, ಬೇಸರವೇ ಆಗಿರಲಿ ಕಾಫಿಯಂತೂ ಬೇಕೇಬೇಕು. ಟೆನ್ಷನ್ ಫ್ರೀ ಕಾಫಿಯನ್ನು ಒಂದೇ ಫ್ಲೇವರ್‌ನಲ್ಲಿ ಕುಡಿದು ಬೇಜಾರಾಗಿರುವವರಿಗಾಗಿ “ಕಾಲ್ ಕಾಫಿ ವಾಲಾ”ದಲ್ಲಿ (Call Kappi wala) ವಿಭಿನ್ನ ಬಗೆಯ ಕಾಫಿ ಫ್ಲೇವರ್ ಸಿಗಲಿದೆ.
ಕಾಲ್ ಕಾಫಿ ವಾಲಾ ತಮ್ಮ ವಿಭಿನ್ನ ಟ್ಯಾಗ್ ಮೂಲಕ ಜನರನ್ನು ಸೆಳೆಯುತ್ತಿದೆ. ಕಾಫಿ ಪಿಯೋ, ಬಿಸ್ಕಟ್ ಕಾವೋ ಎಂಬ ಟ್ಯಾಗ್‌ಲೈನ್‌ನೊಂದಿಗೆ ಹೊಸ ಫ್ಲೇವರ್ ಕಾಫಿಯನ್ನು ಲಾಂಚ್ ಮಾಡಿದೆ. ಕಾಫಿ, ಫಿಲ್ಟರ್ ಕಾಫಿಯನ್ನಷ್ಟೇ ಸವಿದಿರುವವರಿಗೆ ವೆನಿಲ್ಲಾ ಫ್ಲೇವರ್ ಫಿಲ್ಟರ್ ಕಾಫಿ ಡಿಕಾಕ್ಷನ್, ನ್ಯಾಚುರಲ್ ಐರಿಷ್ ಫ್ಲೇವರ್ಡ್ ಕಾಫಿ, ವೆನಿಲ್ಲಾ ಫ್ಲೇವರ್ಡ್ ಕಾಫಿ, ಹ್ಯಾಝೆಲ್ನಟ್ ಫ್ಲೇವರ್ ಫಿಲ್ಟರ್ ಕಾಫಿ, ಪ್ಲೇನ್ ಫ್ಲೇವರ್ ಫಿಲ್ಟರ್ ಕಾಫಿ, ಕ್ಯಾರಮೆಲ್ ಫ್ಲೇವರ್ ಫಿಲ್ಟರ್ ಕಾಫಿ ಪ್ರಾಡಕ್ಟ್ ಲಾಂಚ್ ಮಾಡಲಾಗಿದೆ.
ಈ ಹೊಸ ಪ್ರಾಡೆಕ್ಟ್ ಬಗ್ಗೆ ಮಾತನಾಡಿದ ಕಾಲ್ ಕಾಫಿ ವಾಲಾ ಸಂಸ್ಥೆಯ ಮಾಲೀಕ ರಾಮ್‌ಬಾಬು, ಕಾಲ್ ಕಾಫಿ ವಾಲಾ ಪ್ರಾಡೆಕ್ಟ್ ಅನ್ನು ಉಚಿತವಾಗಿ ಜನರಿಗೆ ನೀಡಿ, ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮಾರುಕಟ್ಟೆಗೆ ಲೋಕಾರ್ಪಣೆ ಮಾಡಲಾಗಿದೆ. ಸುಮಾರು 7 ಫ್ಲೇವರ್‌ನ ಡಿಕಾಕ್ಷನ್ ಲಭ್ಯ ಇರಲಿದ್ದು, ಸಣ್ಣ ಸಣ್ಣ ಪ್ಯಾಕೆಟ್‌ನಲ್ಲೂ ಡಿಕಾಕ್ಷನ್ ಇರಲಿದೆ. ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡಲಾಗಿದೆ ಎಂದರು. ೧೦೦ ಎಂಎಲ್ ಹಾಲಿಗೆ ೨೦ ಎಂಎಲ್ ಕಾಫಿ ಡಿಕಾಕ್ಷನ್ ಹಾಕಿ ಕುಡಿಯಬಹುದಾಗಿದ್ದು, 4 ತಿಂಗಳ ಕಾಲಾವಧಿ (ಎಕ್ಸ್‌ಪೈರಿ ಡೇಟ್) ಇರಲಿದೆ ಎಂದು ಮಾಹಿತಿ ನೀಡಿದರು. ಸ್ಟಾರ್ಟ್‌ಅಪ್ ಮೂಲಕ “ಕಾಲ್ ಕಾಫಿ ವಾಲಾ” ಶುರುವಾಗಿದ್ದು, ಆಸಕ್ತರು ಫ್ರಾಂಚೈಸಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಇದನ್ನೂ ಓದಿ | ರೈತರಿಗೆ ಉಪಯೋಗವಿಲ್ಲದ ಕಾಫಿ ಮಂಡಳಿ ರದ್ದುಪಡಿಸಿ: ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹ