Site icon Vistara News

Panchamasali Reservation: ಮೀಸಲಾತಿ ಘೋಷಣೆ ಮಾಡದಿದ್ದರೆ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Campaign against BJP if reservation is not announced says Basava Jayamrityunjaya Swamiji Panchamasali Reservation updates Panchamasali Reservation

ಬೆಂಗಳೂರು: ನಮ್ಮ ಸಮಾಜವನ್ನು ಕಡೆಗಣಿಸಿ ಬಿಜೆಪಿಯವರು ಚುನಾವಣೆಗೆ ಹೋದರೆ, ನಮ್ಮ ಬೆಂಬಲ‌ ಇಲ್ಲ. ಇದು ಚುನಾವಣೆಯ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ (Panchamasali Reservation) ಆಗ್ರಹಿಸಿ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಸತ್ಯಾಗ್ರಹವು 61ನೇ ದಿನಕ್ಕೆ ಕಾಲಿಟ್ಟಿದ್ದು, ಮಾರ್ಚ್‌ 15ರೊಳಗೆ ಮೀಸಲಾತಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಸ್ವಾಮೀಜಿ ಈ ನಿರ್ಧಾರವನ್ನು ಪ್ರಕಟಿಸಿದರು. ಈ ಮೂಲಕ ಬಿಜೆಪಿಗೆ ವಿರುದ್ಧವಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ದೊಡ್ಡ ಸಮಾಜಕ್ಕೆ ಮೋಸ ಮಾಡಿದ್ದಾರೆ. ನಾವು ಚುನಾವಣೆಗೆ ಟಿಕೆಟ್ ಕೇಳಿಲ್ಲ, ನಮ್ಮ‌ ಸಮಾಜದ ಮಕ್ಕಳಿಗೆ ಮೀಸಲಾತಿ ಬೇಕಿದೆ. ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿದ್ದಾರೆ. ನಮ್ಮನ್ನು ಈ ರೀತಿ ಬಿಸಿಲಿನಲ್ಲಿ ಕೂರಿಸಿದ್ದಾರೆ. ನಮ್ಮ ಸಮಾಜದವರು ಈ ಸತ್ಯಾಗ್ರಹವನ್ನು ಮುಂದುವರಿಸಿ ಎಂದು ಹೇಳಿದ್ದಾರೆ. ಹೀಗಾಗಿ ಇದುವರೆಗೂ ಮೀಸಲಾತಿ ಅನುಷ್ಠಾನವಾಗದೇ ಇರುವುದನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಹಲಗೆ ಚಳವಳಿ ನಡೆಸುವುದಾಗಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Land For Job Case: ಲಾಲು ಪ್ರಸಾದ್ ಯಾದವ್‌ಗೆ ಜಾಮೀನು; ಬಿಜೆಪಿ, ಆರ್‌ಜೆಡಿ ಶಾಸಕರ ಮಧ್ಯೆ ಲಡ್ಡು ಜಗಳ

ನಮ್ಮ‌ ಬೇಡಿಕೆ ಈಡೇರದಿದ್ದರೆ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಪ್ರಕಾರ ಸಮುದಾಯದ ಜನರಿಗೆ ಮತದಾನದ ಜಾಗೃತಿ ಮಾಡುತ್ತೇವೆ. ಪಂಚಮಸಾಲಿಗೆ ಸರ್ಕಾರ 2ಎ ಮೀಸಲಾತಿ ನೀಡದ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಕ್ಷೇತ್ರಗಳಲ್ಲಿ ಹೋರಾಟಕ್ಕೆ ನಿರ್ಧಾರ ಮಾಡಿದ್ದೇವೆ. 224 ಕ್ಷೇತ್ರಗಳಿಗೂ ತೆರಳಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಲಿದ್ದೇವೆ ಎಂದು ಹೇಳಿದರು.

ಏಪ್ರಿಲ್‌ 10ರ ಗಡುವು

ಮೀಸಲಾತಿ ಕುರಿತು ಸರ್ಕಾರ ಏಪ್ರಿಲ್ 10ರೊಳಗೆ ಸರ್ಕಾರ ತನ್ನ ನಿಲುವು ಪ್ರಕಟ ಮಾಡಬೇಕು. ಇಲ್ಲವಾದಲ್ಲಿ ಎಲ್ಲ ಕ್ಷೇತ್ರಗಳಿಗೂ ತೆರಳಿ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಜನರಿಗೆ ಕರೆ ಕೊಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಂಬಿಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಗೆಲ್ಲುವುದಿಲ್ಲ. ಏಕೆಂದರೆ ನಮ್ಮ ಸಮುದಾಯವು ಬೊಮ್ಮಾಯಿ ಮೇಲೆ ಅಸಮಾಧಾನಗೊಂಡಿದೆ. ನಮ್ಮ ಹೋರಾಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಬೊಮ್ಮಾಯಿ ಸರಿಯಾಗಿ ಮನವರಿಕೆ ಮಾಡಿಕೊಟ್ಟಿಲ್ಲ. ಅವರಿಗೆ ನಿಜವಾಗಿಯೂ ಸಮುದಾಯದ ಮೇಲೆ ಕಾಳಜಿ ಇಲ್ಲ. ಹೀಗಾಗಿ ಕಾರ್ಯಕಾರಿಣಿ ಸಭೆ ಕರೆದು ಸರ್ಕಾರಕ್ಕೆ ನಿರ್ದೇಶನ ಕೊಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಇವರನ್ನು ನಂಬಿದರೆ ಬಿಜೆಪಿ ಗೆಲ್ಲಲ್ಲ

ಇದನ್ನೂ ಓದಿ: Naatu Naatu: ನಾಟು ನಾಟು ಹಾಡನ್ನು ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆಯಲ್ಲಿ ಶೇ.1105 ಏರಿಕೆ!

ಸರ್ಕಾರದ ಈ ಧೋರಣೆಯಿಂದ ನಮ್ಮ‌ ಸಮಾಜದವರು ನೊಂದು ಹೋಗಿದ್ದಾರೆ. ಹೀಗಾಗಿ ನಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ನಮ್ಮ‌ ಸಮುದಾಯದವರು ಹೇಳುತ್ತಿದ್ದಾರೆ. ಆದರೆ, ನಾವು ರಾಜಕಾರಣ ಮಾಡುವುದಿಲ್ಲ. ಕೆಲವರನ್ನು ಚುನಾವಣಾ ಸಮಿತಿಗೆ ಸೇರಿಸಿದ್ದೇವೆ ಎಂದು ಹೇಳಿದರು.

52 ಕ್ಷೇತ್ರಗಳಲ್ಲಿ ನಿಲ್ಲುತ್ತೇವೆ ಎಂದು ನಮ್ಮ ಸಮಾಜದವರು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಇದರ ಬಗ್ಗೆ ಯೋಚನೆ ಮಾಡಿಲ್ಲ. ಗುರುವಾರ (ಮಾ. 16) ಚರ್ಚಿಸಿ ತೀರ್ಮಾನ ಮಾಡಲಾಗುವುದು. ನಡ್ಡಾ ಹಾಗೂ ಆರ್‌ಎಸ್ಎಸ್‌ನವರು ಮೀಸಲಾತಿ ಕೊಡಿ ಎಂದು ಹೇಳಿದ್ದರೂ ಸರ್ಕಾರದವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಲಿದ್ದಾರೆ ಎಂದು ಹೇಳಿದರು.

ಸಿಎಂಗೆ ಪಂಚಮಸಾಲಿ ಸಮುದಾಯದವರ ಎಚ್ಚರಿಕೆ

ಬೇಡಿಕೆ ಈಡೇರುವವರೆಗೂ, ಈ ಸರ್ಕಾರ ಇರುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಇರುವ ನಂಬಿಕೆಯನ್ನೂ ನಾವು ಕಳೆದುಕೊಂಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೇನೆ. ಆದರೆ, ಇನ್ನೂ ಬೇಡಿಕೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Border Dispute: ರಾಜ್ಯದ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ: ಸಿಎಂ ರಾಜೀನಾಮೆಗೆ ಡಿ.ಕೆ. ಶಿವಕುಮಾರ್ ಆಗ್ರಹ

ಬಿಜೆಪಿ ವಿರುದ್ಧ ಪ್ರಚಾರ ಮಾಡುವ ಎಚ್ಚರಿಕೆ; ವಿಡಿಯೊದಲ್ಲೇನಿದೆ?

ಸರ್ಕಾರ ನಿರ್ಧಾರ ಮಾಡುವವರೆಗೂ ನಮ್ಮ ಚಳವಳಿ ಮುಂದುವರಿಯುತ್ತದೆ. ಎರಡೂ ಪಕ್ಷದಲ್ಲಿ ಇರುವ ಮುಖಂಡರು ಬೆಂಬಲ ಕೊಟ್ಟರು. ಆದರೆ, ಎಲ್ಲರೂ ಮೋಸ ಮಾಡಿದರು. ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಮೋಸ ಮಾಡಿದವರಿಗೆ ಏನು ಪಾಠ ಕಲಿಸಬೇಕೋ ಕಲಿಸುತ್ತೇನೆ. ಮೀಸಲಾತಿ ಕೊಟ್ಟರೆ ವಿಜಯೋತ್ಸವ ಮಾಡುತ್ತೇವೆ. ಇಲ್ಲದಿದ್ದರೆ ಜನರ ಬಳಿ ಹೋಗಿ, ಜನಜಾಗೃತಿ ಯಾತ್ರೆ ಮಾಡುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Exit mobile version