Site icon Vistara News

Car Accident | ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಅಣ್ಣ-ತಂಗಿ ಸ್ಥಳದಲ್ಲಿಯೇ ಸಾವು

ಚಿಕ್ಕೋಡಿ: ಇಲ್ಲಿನ ಗುರ್ಲಾಪುರ ಗ್ರಾಮದ ಬಳಿ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ಬಳಿ ಬೆಳಗಿನ ಜಾವ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ (Car Accident) ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಒಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಅಣ್ಣ-ತಂಗಿ ಮೃತಪಟ್ಟಿದ್ದು, ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ನಿವಾಸಿ ದುಂಡಪ್ಪ ಬಡಿಗೇರ (೩೪) ಹಾಗೂ ಭಾಗ್ಯಶ್ರೀ ಕಂಬಾರ (೨೨) ಎಂದು ಗುರುತಿಸಲಾಗಿದೆ.

ಅಣ್ಣ-ತಂಗಿ ಧಾರವಾಡದಿಂದ ಸ್ವಗ್ರಾಮ ಕಪ್ಪಲಗುದ್ದಿಗೆ ವಾಪಸಾಗುತ್ತಿದ್ದಾಗ, ಲೋಕಾಪುರದಿಂದ ಪುಣೆಗೆ ತೆರಳುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಆಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ದುಂಡಪ್ಪ ಬಡಿಗೇರ ಹಾಗೂ ಭಾಗ್ಯಶ್ರೀ ಮೃತಪಟ್ಟಿದ್ದಾರೆ.

ಇತ್ತ ಮತ್ತೊಂದು ಕಾರಿನಲ್ಲಿದ್ದ ಆರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ?

Exit mobile version