ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಬ್ಬರು ಮೃತಪಟ್ಟಿದ್ದಾರೆ.
ಮಸ್ಕಿ ನಾಲಾ ಬಳಿ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರು ಉರುಳಿದೆ. ಇಂಡಿಕಾ ಕಾರು ನೀರಿನಲ್ಲಿ ಬಹು ದೂರ ತೇಲಿ ಹೋಗಿ ಒಂದು ಬದಿಯಲ್ಲಿ ಸಿಕ್ಕಿ ಹಾಕಿಕೊಂಡಂತೆ ಕಾಣುತ್ತಿದೆ. ಚಾಲಕ ನೀರಿನಲ್ಲಿ ತೇಲಿ ಹೋಗಿ ನಾಪತ್ತೆಯಾಗಿದ್ದಾನೋ ಅಥವಾ ಕಾರು ಉರುಳುವ ಹೊತ್ತಿನಲ್ಲಿ ಹಾರಿ ಪರಾರಿಯಾಗಿದ್ದಾನೋ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇದೆ. ನೀರಿನಲ್ಲಿ ಮುಳುಗಿದ್ದಾನೆ ಎನ್ನುವ ಲೆಕ್ಕಾಚಾರದಲ್ಲಿ ಹುಡುಕಾಟ ನಡೆಯುತ್ತಿದೆ.
ಕಾರಿನಲ್ಲಿದ್ದವರು ಅಮರೇಶ್ವರ ಬಳಿಯ ಗೊನವಾಟ್ಲದಿಂದ ಸಿಂಧನೂರು ಕಡೆಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಕಾರಿನ ನಂಬರ್ ಆಧರಿಸಿ ದಾಖಲೆಗಳನ್ನು ನೋಡಿದಾಗ ಇದು ಹೈದರಾಬಾದ್‌ನ ನೆಕ್ಕಂಟಿ ಶ್ರೀನಿವಾಸ್ ಅವರ ಹೆಸರಿನಲ್ಲಿರುವುದು ಕಂಡುಬಂದಿದೆ.
ಮೃತರಿಬ್ಬರೂ ಹಿರಿಯರಾಗಿದ್ದು, ಅವರ ಪರಿಚಯ ತಿಳಿದಿಲ್ಲ. ಅವರು ರಾಯಚೂರಿನ ಯಾರದೋ ಮನೆಗೆ ಬಂದು ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ರಾತ್ರಿ ಯಾವುದೋ ಹೊತ್ತಿನಲ್ಲಿ ಘಟನೆ ನಡೆದಿರುವ ಸಾಧ್ಯತೆ ಇದ್ದು, ಬೆಳಗ್ಗೆ ಜನರು ಗಮನಿಸಿದ್ದಾರೆ. ಕಾರಿನೊಳಗೆ ಸಿಕ್ಕಿದ್ದ ಒಬ್ಬ ಪುರುಷ ಮತ್ತು ಮಹಿಳೆಯ ಶವವನ್ನು ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ| ಮುಂದುವರಿದ ಮಳೆ ಆರ್ಭಟ, ಭೂಕುಸಿತ; ಉಕ್ಕಿದ ನದಿಗಳು, ಕೊಚ್ಚಿ ಹೋದ ವಾಹನಗಳು