ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ವಿವಿಧ ಜಾತಿ, ಸಮುದಾಯಗಳನ್ನು ಸೆಳೆಯಲು ಕಸರತ್ತು ನಡೆಯುತ್ತಿದ್ದು, ತಿಗಳ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ತಿಗಳ ಸಮುದಾಯ ಅಭಿವೃದ್ಧಿ ನಿಗಮವನ್ನು ಬಿಜೆಪಿ ಸರ್ಕಾರ ರಚಿಸಿ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ, ತಿಗಲ, ಅಗ್ನಿವಂಶ, ಅಗ್ನಿವನ್ನಿ, ಅಗ್ನಿಕುಲ ಕ್ಷತ್ರಿಯ, ಧರ್ಮರಾಜ ಕಾಪು, ಪಳ್ಳಿ, ಶಂಭುಕುಲ ಕ್ಷತ್ರಿಯ, ತಿಗಳ, ವನ್ನಿಯರ್, ವನ್ನಿಕುಲ ಕ್ಷತ್ರಿಯ, ತಿಗ್ಲರ್, ಕುರೋವನ್ ಜಾತಿಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶಿಸಲಾಗಿದೆ ಎಂದು ತಿಳಿಸಿದೆ.
ಕಳೆದ ತಿಂಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕ್ಷತ್ರಿಯ ಸಮಾಜದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಭಾಗವಹಿಸಿತ್ತು. ಇದೀಗ ಮಂಗಳವಾರ ಬರಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ತಿಗಳ ಕ್ಷತ್ರಿಯ ಸಮಾವೇಶನವ್ನನು ಆಯೋಜಿಸಲಾಗಿತ್ತು.
ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸೇರಿ ಅನೇಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಕ್ಷೇತ್ರದಲ್ಲಿ ಈ ಸಮಾಜದ ಜೊತೆ ಪ್ರತಿ ದಿನ ಒಡನಾಟ ಇದೆ. ಚುನಾವಣೆ ಸಂದರ್ಭದಲ್ಲಿ ಅಪವಾದ ತರ್ತಾರೆ. ನನ್ನ ಬಗ್ಗೆ ಬೇಡದ ವಿಡಿಯೋ ಹಾಕಿ ಅಪಪ್ರಚಾರ ಮಾಡಿದ್ರು. ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ತಿಗಳ ಸಮುದಾಯಕ್ಕೆ ಯಾವುದೇ ಅಪಮಾನ ಮಾಡಿಲ್ಲ. ಈ ಸಮುದಾಯಕ್ಕೆ ಒಂದು ನಿಗಮ ಮಂಡಳಿ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: D.K. Shivakumar: ಭಾರತ ಹಿಂದು ರಾಷ್ಟ್ರ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್