ಚಿಕ್ಕೋಡಿ: ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠದಲ್ಲಿ ಕಳೆದ ಫೆಬ್ರವರಿ ೨೦ರಿಂದ ಅತಿ ವಿಶಿಷ್ಟವಾದ ಪಂಚ ಮಹಾಭೂತ ಲೋಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದರ ನಡುವೆಯೇ ಇಲ್ಲಿನ ಗೋಶಾಲೆಯ ಸುಮಾರು ೫೨ ಗೋವುಗಳು ನಿಗೂಢವಾಗಿ ಸಾವನ್ನಪ್ಪಿದ್ದು (Cattle death ಬೇಸರ ಮತ್ತು ಆತಂಕ ಮೂಡಿಸಿದೆ.
ಫೆಬ್ರವರಿ 20ರಿಂದ ಆರಂಭಗೊಂಡ ಪಂಚ ಮಹಾಭೂತ ಲೋಕೋತ್ಸವ ಫೆಬ್ರವರಿ ೨೭ರವರೆಗೆ ನಡೆಯುತ್ತಿದೆ. ಆಕಾಶ, ಭೂಮಿ, ಗಾಳಿ ಸೇರಿದಂತೆ ಪ್ರಕೃತಿಯನ್ನು ರೂಪಿಸಿರುವ ಪಂಚಭೂತಗಳ ಮಹತ್ವ ಸಾರುವ ಉತ್ಸವ ಇದಾಗಿದೆ. ಇದರಲ್ಲಿ ಪರಿಸರ, ಪ್ರಾಣಿಗಳ ಮಹತ್ವ ಸಾರುವ ವಸ್ತು ಪ್ರದರ್ಶನವಿದ್ದು, ವಿವಿಧ ಆಹಾರ ಮಳಿಗೆಗಳನ್ನೂ ಸ್ಥಾಪಿಸಲಾಗಿದೆ. ಪ್ರಾಣಿಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಇದರ ನಡುವೆಯೇ ಗೋವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ. ಈಗಾಗಲೇ ೫೨ ಹಸುಗಳು ಪ್ರಾಣ ಕಳೆದುಕೊಂಡಿದ್ದರೆ, ಅಸ್ವಸ್ಥವಾಗಿರುವ ೩೨ ಹಸುಗಳ ಆರೋಗ್ಯ ತಪಾಸಣೆ ನಡೆಯುತ್ತಿದೆ. ಪಶುವೈದ್ಯರು ಇವುಗಳ ಮೇಲೆ ನಿಗಾ ವಹಿಸಿದ್ದಾರೆ.
ಹಳಸಿದ ಆಹಾರ ಮುಳುವಾಯಿತೇ?
ಕನ್ಹೇರಿ ಮಠದಲ್ಲಿ ಬೃಹತ್ ಗೋ ಶಾಲೆಯಿದ್ದು, ಇಲ್ಲಿ ಸಾವಿರಾರು ಹಸುಗಳನ್ನು ಸಾಕಲಾಗುತ್ತಿದೆ. ಪ್ರಸ್ತುತ ಲೋಕೋತ್ಸವಕ್ಕೆ ಆಗಮಿಸುವ ಜನರಿಗಾಗಿ ದೊಡ್ಡ ಮಟ್ಟದಲ್ಲಿ ರೊಟ್ಟಿ, ಚಪಾತಿ ಸೇರಿ ಆಹಾರ ವಿವಿಧ ರೀತಿಯ ಆಹಾರ ತಯಾರಿಸಲಾಗುತ್ತಿದೆ. ಹೀಗೆ ತಯಾರಿಸಿದ ಆಹಾರ ವಸ್ತುಗಳಲ್ಲಿ ಉಳಿದುದನ್ನು ಹಸುಗಳಿಗೆ ಹಾಕಿದ್ದರಿಂದ ಅವುಗಳ ಆರೋಗ್ಯ ಕೆಡುವಂತಾಯಿತೇ ಎಂಬ ಪ್ರಶ್ನೆ ಎದ್ದಿದೆ.
ಗೋವುಗಳ ಸಾವು ಮತ್ತು ಅನಾರೋಗ್ಯದ ವಿಷಯ ತಿಳಿದ ಕೊಲ್ಹಾಪುರದ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಮೃತಪಟ್ಟ ಹಸುಗಳ ನಿಖರ ಸಂಖ್ಯೆಯನ್ನು ಅಧಿಕೃತವಾಗಿ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಪುಣ್ಯಕೋಟಿ ಎಂಬ ಗೋವು, ಹುಲಿ ಮತ್ತು ಮುಗ್ಧತೆ! ಆ ಹಸಿದ ಹೆಬ್ಬುಲಿ ಬೆಟ್ಟದಿಂದ ಹಾರಿ ಸತ್ತಿದ್ದು ಸರೀನಾ?