ಬೆಂಗಳೂರು: ನಾಳೆ (ಸೆ.26) ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಆಗಿರುವ ಅನ್ಯಾಯ ಖಂಡಿಸಿ ನಡೆಯಲಿರುವ ಬೆಂಗಳೂರು ಬಂದ್ ಹಾಗೂ ಪ್ರತಿಭಟನೆಗಳಿಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಹಲವು ಅಗತ್ಯ ಸೇವೆಗಳು ಅಸ್ತವ್ಯಸ್ತವಾಗಲಿವೆ.
ನಾಳೆ ಏನಿಲ್ಲ?
- ಆಟೋ, ಕ್ಯಾಬ್
- ಗೂಡ್ಸ್ ವಾಹನಗಳು
- ಖಾಸಗಿ ಬಸ್ಗಳು
- ಥಿಯೇಟರ್
- ಸೂಪರ್ ಮಾರ್ಕೆಟ್
- ಪೆಟ್ರೋಲ್ ಬಂಕ್
- ಶಾಲಾ -ಕಾಲೇಜ್
- ಅಂಗಡಿಗಳು
- ಬೀದಿ ಬದಿ ಅಂಗಡಿಗಳು
- ಜ್ಯುವೆಲ್ಲರಿ ಶಾಪ್ಗಳು
- ಕೈಗಾರಿಕೆಗಳು
- ಹೋಟೆಲ್ಗಳು
- ಮಾಲ್ಗಳು
ಬಂದ್ ದಿನ ಏನಿರುತ್ತೆ?
- ಆಸ್ಪತ್ರೆ
- ಮೆಡಿಕಲ್ ಸ್ಟೋರ್
- ಹಾಲಿನ ಬೂತ್
- ಅಗತ್ಯ ವಸ್ತುಗಳು
- ಮೆಟ್ರೋ
- ಆ್ಯಂಬುಲೆನ್ಸ್
ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳು
- ರಾಜ್ಯ ರೈತ ಸಂಘಟನೆಗಳ ಒಕ್ಕೂಟ
- ರಾಜ್ಯ ಕಬ್ಬು ಬೆಳೆಗಾರರ ಸಂಘ.
- ಕಬಿನಿ ರೈತ ಹಿತರಕ್ಷಣಾ ಸಮಿತಿ
- ಆಮ್ ಆದ್ಮಿ ಪಕ್ಷ
- BBMP ಕಾರ್ಮಿಕರ ಸಂಘ
- KSRTC ಕನ್ನಡ ಕಾರ್ಮಿಕರ ಸಂಘ
- ಓಲಾ ಉಬರ್ ಮಾಲಿಕರ ಮತ್ತು ಚಾಲಕರ ಸಂಘ
- 32 ಚಾಲಕರು ಮತ್ತು ಮಾಲೀಕರ ಸಂಘಗಳು
- ಕರುನಾಡ ಸೇನೆ
- ಕನ್ನಡ ಸಾಹಿತ್ಯ ಪರಿಷತ್ತು
- ಕರ್ನಾಟಕ ಜನಪರ ವೇದಿಕೆ
- ಖಾಸಗೀ ಶಾಲೆಗಳ ಪೋಷಕರ ಸಮನ್ವಯ ಸಮಿತಿ.
- ಕರ್ನಾಟಕ ವಿಕಾಸ ರಂಗ
- ರುಪ್ಸಾ
ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ, ರಸ್ತೆ ತಡೆ
ಕಾವೇರಿ ನೀರಿಗಾಗಿ ಬೆಂಗಳೂರು ಮೈಸೂರು ರಸ್ತೆ ತಡೆ ನಾಳೆ ನಡೆಯಲಿದೆ. ಮೈಸೂರು ರೋಡ್‌ನ ಗಾಳಿ ಆಂಜನೇಯ ದೇವಾಲಯದ ಮುಂದೆ ಪ್ರತಿಭಟನೆ ಬೆಳಿಗ್ಗೆ 10ಕ್ಕೆ ಆರಂಭವಾಗಲಿದ್ದು, ರಸ್ತೆ ತಡೆ ನಡೆಸಲು ಉದ್ದೇಶಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ನಿಲೇಶ್ ಗೌಡ, ಕನ್ನಡ ಪ್ರಕಾಶ್, ಕರುನಾಡ ಸೇವಾಕರ ಸಂಘದ ಅಧ್ಯಕ್ಷ ಲೋಕೆಶ್ ಗೌಡ, ಕನ್ನಡಪರ ಹೋರಾಟಗಾರ ನರಸಿಂಹ ಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Cauvery Protest : ಕಾವೇರಿ ನೀರಿಗಾಗಿ ಬೆಂಗಳೂರು ಅಲ್ಲ ಕರ್ನಾಟಕವೇ ಬಂದ್! ಮತ್ತೊಂದು ಸುತ್ತಿನ ಸಭೆ