Site icon Vistara News

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

HD Devegowda Press meet

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಈಗ ಏನು ವಾಸ್ತವಾಂಶ ಇದೆಯೋ ಅದರ ಆಧಾರದ ಮೇಲೆ ಕೇಂದ್ರ ಜಲ ಶಕ್ತಿ ಇಲಾಖೆಯಿಂದ (Water Resources Department) ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಹಾಕಬೇಕು. ಅರ್ಜಿ ಹಾಕಲು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮಧ್ಯ ಪ್ರವೇಶ ಮಾಡಬೇಕು. ನೀರು ಸಂಗ್ರಹಣಾ ಸಾಮರ್ಥ್ಯ ಸಹಿತ ಎಲ್ಲ ಸ್ಥಿತಿಗತಿಗಳನ್ನು ಅರಿತು ಅರ್ಜಿ ಹಾಕಲು ತಜ್ಞರನ್ನು ನೇಮಿಸಲು ಪ್ರಧಾನಿ ಮೋದಿ ಮುಂದಾಗಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಈಗ ಸುಪ್ರೀಂ ‌ಕೋರ್ಟ್‌ ಅನ್ನು ದೂಷಣೆ ಮಾಡುವುದಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯ ಆಗಿದೆ. ಈ ಬಗ್ಗೆ ಆಗಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಲಹೆ ಕೊಟ್ಟಿದ್ದರು. ಆದರೆ, ಸರ್ಕಾರದವರು ಇದಕ್ಕೆ ‌ಎಷ್ಟು‌ ಮಾನ್ಯತೆಯನ್ನು ಕೊಟ್ಟಿದ್ದರು? ನಾ‌ನು ಈಗ ಈ ಬಗ್ಗೆ ಮಧ್ಯ ಪ್ರವೇಶ ಮಾಡುವಂತೆ ವಿನಮ್ರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ದೇವೇಗೌಡ

ಕಾವೇರಿ ಜಲವಿವಾದ ಸಂಬಂಧ ರಾಜ್ಯದ ಸ್ಥಿತಿಗತಿಗಳು ಸೇರಿದಂತೆ ಇಲ್ಲಿನ ವಾಸ್ತವತೆಯನ್ನು ವಿವರಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಅವರು ಬರೆದ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಅಲ್ಲದೆ, ಇದೇ ವೇಳೆ ಕೆಆರ್‌ಎಸ್‌ ಡ್ಯಾಂನಲ್ಲಿ (KRS Dam) ಈಗಿನ ಸ್ಥಿತಿಗತಿ ಏನಿದೆ? ಎಂಬುದರ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ತಂದಿರುವ ಫೋಟೊ ಸಹಿತ ವರದಿ ಚಿತ್ರಣವನ್ನೂ ಸಹ ದೇವೇಗೌಡ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಎಚ್.ಡಿ. ದೇವೇಗೌಡ, ಈಗ ಬಿಡುಗಡೆ ಮಾಡುತ್ತಿರುವ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಲಾಗಿದೆ. ನಾಳೆ ಬಂದ್ ನಡೆಸಲಾಗುತ್ತಿದೆ. ಇಂದು ನಾನು ಕಾಂಗ್ರೆಸ್, ಬಿಜೆಪಿ ಯಾವುದೇ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಇಂದು ಕಾವೇರಿ ವಿಚಾರದ ಬಗ್ಗೆ ಮಾತ್ರವೇ ಮಾತನಾಡುತ್ತೇನೆ. ಜನರಿಗೆ ಆಗುತ್ತಿರುವ ತೊಂದರೆಗಳ ಮಾಹಿತಿಯನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಲೆಹಾಕಿದ್ದಾರೆ.‌ ನನಗೆ ಹೋಗುವ ಶಕ್ತಿಯಿಲ್ಲ.‌ ಅದಕ್ಕಾಗಿ ಕುಮಾರಸ್ವಾಮಿ ಹೋಗಿದ್ದಾರೆ ಎಂದು ಹೇಳಿದರು.

ಜನರ ಹಿತ ಕಾಯುವುದು ಮುಖ್ಯ

ಬೇರೆ ರಾಜ್ಯದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕು. ನಮ್ಮ ಜಲಾಶಯಗಳಿಗೆ ಆ ತಂಡ ಭೇಟಿ ನೀಡಬೇಕು. ಎಲ್ಲವನ್ನೂ ಪರಿಶೀಲನೆ ನಡೆಸಬೇಕು. ನಾಳೆ ಬಂದ್ ವಿಷಯವಾಗಿ ಯಾರು ಏನು ಮಾತನಾಡುತ್ತಾರೆ ಅನ್ನೋದು ಮುಖ್ಯವಲ್ಲ. ಇಲ್ಲಿ ರಾಜ್ಯದ ಜನರ ಹಿತ ಕಾಯುವುದು ಮುಖ್ಯ ಎಂದು ಎಚ್.ಡಿ. ದೇವೇಗೌಡ ಕಿವಿಮಾತು ಹೇಳಿದರು.

ಬೇರೆ ರಾಜ್ಯಗಳ ತಜ್ಞರನ್ನು ಕರೆಸಿ

ಕುಮಾರಸ್ವಾಮಿ ಅವರು ಕೆಆರ್‌ಎಸ್‌ ಡ್ಯಾಮ್‌ಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಅಲ್ಲಿಂದ ಮಾಹಿತಿ ಸಂಗ್ರಹಣೆ ಮಾಡಿ ನನಗೆ ತಿಳಿಸಿದ್ದಾರೆ. ಪ್ರಧಾನಿಗೆ ಈ ಸಂಬಂಧ ಪತ್ರವನ್ನು ‌ಕಳುಹಿಸಿದ್ದೇನೆ. ಮಂಡ್ಯ – ಮೈಸೂರು ಸೇರಿ ಹಲವು ಕಡೆ ಪ್ರತಿಭಟನೆ ‌ಮಾಡುತ್ತಿದ್ದಾರೆ. ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ಇನ್ನು ಬೇರೆ ರಾಜ್ಯಗಳ ಐವರು ತಜ್ಞರನ್ನು ಕೇಂದ್ರದಿಂದ ಕಳುಹಿಸಿಕೊಡಬೇಕು. ಅಚ್ಚುಕಟ್ಟು ಪ್ರದೇಶಕ್ಕೆ ಅವರು ಭೇಟಿ ನೀಡಿ ವರದಿ ಕೊಡಲಿ ಎಂದು ಉಪ ರಾಷ್ಟ್ರಪತಿಗೆ ಮನವಿ ಮಾಡಿದ್ದೆ. ಇದಕ್ಕೆ ತಮಿಳರು ವಿರೋಧಿಸಿದ್ದರು ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.

ಇದನ್ನೂ ಓದಿ: Operation Hasta : ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಜೋರಾಯ್ತು ಆಪರೇಷನ್ ಹಸ್ತ! ಸಿಎಂ ಬಳಿ ಚರ್ಚಿಸುವೆನೆಂದ ಡಿಕೆಶಿ

ನಾನು ಕಾಂಗ್ರೆಸ್ – ಬಿಜೆಪಿ ವಿಚಾರವನ್ನು ಈಗ ಮಾತನಾಡುವುದಿಲ್ಲ. ರಾಜಕೀಯ ‌ನಿರ್ಣಯದ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡಲಾರೆ. ಅದಕ್ಕೆ ಬುಧವಾರ ಸುದ್ದಿಗೋಷ್ಠಿ ಕರೆಯುತ್ತೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

Exit mobile version