Site icon Vistara News

Cauvery water dispute : ಸರ್ಕಾರದ ನಿಲುವನ್ನು ಹೇಳುವವರೆಗೆ ಕಾಯುತ್ತೇನೆ: ಎಚ್.ಡಿ. ದೇವೇಗೌಡ

HD Devegowda infront of KRS Dam

ಹಾಸನ: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಸೋಮವಾರವಷ್ಟೇ (ಸೆಪ್ಟೆಂಬರ್‌ 25) ನಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದಿದ್ದೇನೆ. ಅಲ್ಲದೆ, ಕೆಆರ್‌ಎಸ್‌ ಡ್ಯಾಂ ಸ್ಥಿತಿಗತಿ ಏನಿದೆ ಎಂಬ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ, ವಿವರವನ್ನು ಪಡೆದು ಬಂದಿದ್ದರು. ಅವರ ವರದಿಯ ಆಧಾರದ ಮೇಲೆ ನಾನು ಪ್ರಧಾನಿಗೆ ಪತ್ರ (Letter To Prime Minister) ಬರೆದಿದ್ದೇನೆ. ನಾನೀಗ ಸರ್ಕಾರದ ನಿಲುವನ್ನು ಹೇಳುವವರೆಗೆ ಕಾಯುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD DeveGowda) ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ನಿಷ್ಪಕ್ಷಪಾತವಾಗಿ ಎರಡೂ ರಾಜ್ಯದ ಸ್ಥಿತಿ ಅರಿಯಲು ತಂಡವನ್ನು ಕಳುಹಿಸಿ ಎಂದು ಮನವಿ ಮಾಡಿದ್ದೆ. ನನ್ನ ಆರೋಗ್ಯ ಸಮಸ್ಯೆ ಇರುವ ಕಾರಣ ನಾನು ಖುದ್ದು ಸ್ಥಳಕ್ಕೆ ಹೋಗಲು ಆಗಿಲ್ಲ. ನಾನು ಪತ್ರ ಬರೆದ ಸಾರಾಂಶವಾಗಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ (Former Chief Minister BS Yediyurappa), ಬಸವರಾಜ ಬೊಮ್ಮಾಯಿ (Former Chief Minister Basavaraj Bommai) ಸೇರಿದಂತೆ ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Cauvery water dispute : ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಚ್ಚು; ಮೈತ್ರಿ ಬಳಿಕ ಮೊದಲ ಜಂಟಿ ಪ್ರತಿಭಟನೆ

ಈಗ ಕಾವೇರಿಗೆ ಸಂಬಂಧಪಟ್ಟ ಸಿಡಬ್ಲ್ಯುಆರ್‌ಸಿಯವರು ಇಂದು ನಿರ್ಧಾರ ಮಾಡಿ ಮತ್ತೆ ಮೂರು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ನಿರ್ಧಾರ‌ ಮಾಡಿದ್ದಾರೆ. 15-10-23ರವರೆಗೆ 60 ಟಿಎಂಸಿ ನೀರು ಬಿಡಲು ಆದೇಶ ನೀಡಲಾಗಿದೆ. ನಮ್ಮ ಸರ್ಕಾರವೇ 51 ಟಿಎಂಸಿ‌ ನೀರಿದೆ ಎಂದು ಹೇಳುತ್ತಿದೆ. ನಮ್ಮ ರಾಜ್ಯದ ಬೆಳೆಗೆ 70 ಟಿಎಂಸಿ ನೀರು ಬೇಕು. ಆ ಬೆಳೆಯನ್ನು ಉಳಿಸಲು ಇವರಿಗೆ ಆಗುವುದಿಲ್ಲ ಎಂದು ಎಚ್.ಡಿ. ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

ನಮ್ಮಲ್ಲಿ ಒಗ್ಗಟ್ಟು ಇಲ್ಲ

ನಾನು ಈ ಸಂಬಂಧ ವೈಯಕ್ತಿಕ ಅಭಿಪ್ರಾಯ ‌ನೀಡುವುದು ಸರಿಯಲ್ಲ. ಒಬ್ಬ ಹಿರಿಯ ರಾಜಕಾರಣಿಯಾಗಿ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಮಾತ್ರವೇ ನಾನು ಹೇಳಿದ್ದೇನೆ. ತಮಿಳುನಾಡಿನಲ್ಲಿ ಒಗ್ಗಟ್ಟಿದೆ. ಈಗ ಸರ್ಕಾರದ ನಿಲುವನ್ನು ಹೇಳುವವರೆಗೆ ನಾನು ಕಾಯುತ್ತೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಬಾಲಗಂಗಾಧರನಾಥ ಶ್ರೀಗಳನ್ನು ನೆನೆದು ಕಣ್ಣೀರಿಟ್ಟ ದೇವೇಗೌಡರು

ಭಾರತ ಮತ್ತು ಬಾಂಗ್ಲಾ ದೇಶದ ಮೂವತ್ತು ವರ್ಷಗಳ ನೀರಿನ ಸಮಸ್ಯೆ ಬಗೆಹರಿಸಿದೆ. ಹಿಂದಿನವರು ಹತ್ತು ವರ್ಷ, ಈಗಿನವರು ಹತ್ತು ವರ್ಷ ಆಡಳಿತ ಮಾಡಿದ್ದಾರೆ. ನನಗೆ ಸಿಕ್ಕಿದ್ದು ಹತ್ತೇ ಹತ್ತು ತಿಂಗಳು ಅಧಿಕಾರ. ಆ ಹತ್ತು ತಿಂಗಳಲ್ಲಿ ನಾನು ಮೂವತ್ತು ವರ್ಷದ ನೀರಿನ ವಿವಾದ ಬಗೆಹರಿಸಿದೆ ಎಂದು ಪರೋಕ್ಷವಾಗಿ ಕಾವೇರಿ ವಿವಾದ ಬಗೆಹರಿಸದ ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಸಮಾಧಾನ ಹೊರಹಾಕಿದರು.

ನಗರದಲ್ಲಿ ನಡೆದ ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಸಂಭ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬುವುದರ ಸೂಚ್ಯವಾಗಿ ಮಾಜಿ ಪ್ರಧಾನಿಗಳು ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ನೀರಿನ ವಿವಾದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: Cauvery water dispute : ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಶ್ರೀಗಳನ್ನು ನೆನೆದು ಕಣ್ಣೀರಿಟ್ಟ ಗೌಡರು, ಭೈರವೈಕ್ಯ ಶ್ರೀಗಳು ಈಗಲೂ ನಮ್ಮ ಮುಂದೆ ಇದ್ದಾರೆ. ಅವರ ಕಾರ್ಯ ಎಂದು ಮರೆಯಾಗುವುದಿಲ್ಲ ಎಂದು ಭಾವುಕರಾದರು.

Exit mobile version