ಬೆಂಗಳೂರು: ನಟ ಸುದೀಪ್‌ಗೆ ಬೆದರಿಕೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಸಿಸಿಬಿ ಹುಡುಕಾಟ ನಡೆಸುತ್ತಿತ್ತು. ಇದೀಗ ನಟ ಸುದೀಪ್ (Kiccha Sudeep) ಅವರಿಗೆ ಆಪ್ತನೇ ಬೆದರಿಕೆ ಹಾಕಿದ್ದಾನೆ ಎಂಬುವುದು ತಿಳಿದುಬಂದಿದೆ. ಪ್ರಕರಣ ಸಂಬಂಧ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಕಿಟ್ಟಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2 ಕೋಟಿ ರೂ. ವಾಪಸ್ ನೀಡಿಲ್ಲ ಎಂಬ ಕಾರಣಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಕಿಚ್ಚ ಚಾರಿಟಬಲ್ ಟ್ರಸ್ಟ್‌ಗೆ ಎರಡು ಕೋಟಿ ರೂ.ಗಳನ್ನು ಆರೋಪಿ ರಮೇಶ್ ಕಿಟ್ಟಿ ನೀಡಿದ್ದ. ಆದರೆ ಹಣ ವಾಪಸ್ ನೀಡದೆ ನಟ ಸುದೀಪ್ ಸತಾಯಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಸೇಡು ತೀರಿಸಿಕೊಳ್ಳಲು ರಮೇಶ್ ಕಿಟ್ಟಿ ಬೆದರಿಕೆ ಪತ್ರ ಬರೆದಿದ್ದ. ಸದ್ಯ ಆತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಹೆಚ್ಚಿನ ಮಾಹಿತಿ ಕಲೆ ಹಾಕಲು ವಿಚಾರಣೆ ನಡೆಸುತ್ತಿದ್ದಾರೆ.
ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ನಟ ಸುದೀಪ್‌ಗೆ ಇತ್ತೀಚೆಗೆ ಬೆದರಿಕೆ ಪತ್ರ ಬಂದಿತ್ತು. ಜತೆಗೆ ಕೆಲ ಅವಾಚ್ಯ ಶಬ್ದಗಳನ್ನು ಸಹ ಲೆಟರ್‌ನಲ್ಲಿ ಬರೆಯಲಾಗಿತ್ತು. ನಂತರ ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ನೀಡಿದ ದೂಡಿನ ಅನ್ವಯ ಐಪಿಸಿ 504 (ಬೆದರಿಕೆ), 506 (ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.
ಇದನ್ನೂ ಓದಿ | Murder case: ವಿಕೋಪಕ್ಕೆ ತಿರುಗಿದ ಕೌಟುಂಬಿಕ ಕಲಹ; ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಕೊಂದ ಪತಿ
ನಿರ್ದೇಶಕ, ನಿರ್ಮಾಪಕ ಜಿ.ಕೆ. ಮುದ್ದುರಾಜ್‌ಗೆ ವಂಚನೆ
ಬೆಂಗಳೂರು: ನಟಿಸಲು ಅವಕಾಶ ಕೊಟ್ಟ ಖ್ಯಾತ ನಿರ್ದೇಶಕ, ನಿರ್ಮಾಪಕ ಜಿ.ಕೆ. ಮುದ್ದುರಾಜ್ ಅವರಿಗೆ 11 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಆರೋಪದಲ್ಲಿ ರಾಜಶೇಖರ್ ಎಂಬಾತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಗೆ ಜಿ.ಕೆ. ಮುದ್ದುರಾಜ್ ದೂರು ನೀಡಿದ್ದಾರೆ.
ವೀರಶೈವ ಬ್ಯಾಂಕ್ ಮ್ಯಾನೇಜರ್ ಅಂದು ಹೇಳಿ ಸ್ಯಾಂಡಲ್‌ವುಡ್ ನಿರ್ದೇಶಕ, ನಿರ್ಮಾಪಕ ಜಿ.ಕೆ. ಮುದ್ದುರಾಜ್ ಅವರ ಬಳಿ ನಟನೆಗೆ ಅವಕಾಶ ಕೇಳಿ ಆರೋಪಿ ಬಂದಿದ್ದ. ಹೀಗಾಗಿ ಯಂಗ್ ಇಂಡಿಯಾ ಎಂಬ ಕಿರುಚಿತ್ರಕ್ಕೆ ನಿರ್ದೇಶಕ ಅವಕಾಶ ನೀಡಿದ್ದರು. ನಾಲ್ಕು ದಿನ ನಟಿಸಿದಕ್ಕೆ 16 ಸಾವಿರ ರೂ. ನೀಡಿದ್ದರು.
ನಂತರ ಸ್ವಲ್ಪ ದಿನದವರೆಗೂ ಮುದ್ದುರಾಜ್ ಅವರಿಗೆ ಆತ್ಮೀಯನಾಗಿ ವರ್ತಿಸಿದ್ದ ರಾಜಶೇಖರ್, ಅದೇ ಸಲುಗೆಯಲ್ಲಿ ತಾನು ಮನೆ ಕಟ್ಟಿಸುತ್ತಿದ್ದೇನೆ, 15 ಲಕ್ಷ ರೂಪಾಯಿ ಕೊಡಿ ಎಂದು ಕೇಳಿದ್ದ. ಕಡೆಗೆ ಮೂರು ತಿಂಗಳಿನಲ್ಲಿ ಹಣ ತೀರಿಸುತ್ತೇನೆಂದು ನಂಬಿಸಿ ಹಂತ ಹಂತವಾಗಿ 11 ಲಕ್ಷ ಪಡೆದಿದ್ದ. ನಂತರ ಹಣ ವಾಪಸ್ ಕೇಳಿದಾಗ ಹಣ ನೀಡದೆ ರಾಜಶೇಖರ್ ಸತಾಯಿಸಿದ್ದಾನೆ. ಹೀಗಾಗಿ
ನಂತರ ಸ್ವಲ್ಪ ದಿನದವರೆಗೂ ಮುದ್ದುರಾಜ್ ಅವರಿಗೆ ಆತ್ಮೀಯನಾಗಿ ವರ್ತಿಸಿದ್ದ ರಾಜಶೇಖರ್, ಅದೇ ಸಲುಗೆಯಲ್ಲಿ ತಾನು ಮನೆ ಕಟ್ಟಿಸುತ್ತಿದ್ದೇನೆ, 15 ಲಕ್ಷ ರೂಪಾಯಿ ಕೊಡಿ ಎಂದು ಕೇಳಿದ್ದ. ಕಡೆಗೆ ಮೂರು ತಿಂಗಳಿನಲ್ಲಿ ಹಣ ತೀರಿಸುತ್ತೇನೆಂದು ನಂಬಿಸಿ ಹಂತ ಹಂತವಾಗಿ 11 ಲಕ್ಷ ಪಡೆದಿದ್ದ. ನಂತರ ಹಣ ವಾಪಸ್ ಕೇಳಿದಾಗ ಹಣ ನೀಡದೆ ರಾಜಶೇಖರ್ ಸತಾಯಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ನಿರ್ದೇಶಕ ಜಿ.ಕೆ. ಮುದ್ದುರಾಜ್ ದೂರು ನೀಡಿದ್ದಾರೆ.
ಇದನ್ನೂ ಓದಿ | Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೊಂದು ಚಾರ್ಜ್‌ಶೀಟ್ ಸಲ್ಲಿಕೆ
ಜಿಕೆ ಮುದ್ದುರಾಜ್ ಅವರು ಸ್ನೇಹ ಪರ್ವ, ಅರಿಶಿಣ ಕುಂಕುಮ, ಕಮಿಷನರ್ ನರಸಿಂಹ ಸೇರಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.