Site icon Vistara News

Fake Marks Card: ದೇಶದ ವಿವಿಗಳ ನಕಲಿ ಮಾರ್ಕ್ಸ್‌ ಕಾರ್ಡ್‌ ಜಾಲ ಭೇದಿಸಿದ ಸಿಸಿಬಿ; 30 ಸಾವಿರಕ್ಕೆ ಸಿಗುತ್ತಿತ್ತು ವಿವಿ ಪದವಿ!

Fake Marks Card vikas

ಬೆಂಗಳೂರು: ದೇಶದ‌ ಪ್ರತಿಷ್ಠಿತ ವಿವಿಗಳ ನಕಲಿ ಮಾರ್ಕ್ಸ್ ಕಾರ್ಡ್‌ಗಳ (Fake Marks Card) ಮಾರಾಟ ಜಾಲದ‌ ಮೇಲೆ‌ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೇಶದ ೧೨ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 6,800ಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, 25ರಿಂದ 30 ಸಾವಿರಕ್ಕೆ ಈ ಜಾಲದವರು ಪದವಿ ಪ್ರಮಾಣ ಪತ್ರವನ್ನು ನೀಡುತ್ತಿದ್ದರು ಎಂಬ ಸಂಗತಿಯೂ ಬಯಲಾಗಿದೆ.

ನಗರದ ಐದು ಕಡೆ ದಾಳಿ‌ ನಡೆಸಿ ಹಲವು ವಿವಿಗಳ ಮಾರ್ಕ್ಸ್ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ವಿಕಾಸ್ ಸಿಸಿಬಿಯಿಂದ ಬಂಧಿತನಾದ ಆರೋಪಿಯಾಗಿದ್ದಾನೆ.

ನಗರದ ಜೆಪಿ‌ ನಗರ, ರಾಜಾಜಿನಗರ, ಭದ್ರಪ್ಪ ಲೇಔಟ್, ದಾಸರಹಳ್ಳಿ, ವಿಜಯನಗರದಲ್ಲಿ ದಾಳಿ ನಡೆಸಲಾಗಿದೆ. ಬಂಧಿತ ಆರೋಪಿಯಿಂದ ಒಟ್ಟು 13 ಮೊಬೈಲ್‌ಗಳು, ಹಲವು ಲ್ಯಾಪ್‌ಟ್ಯಾಪ್‌ಗಳು, ಪ್ರಿಂಟರ್, ಸಿಪಿಯುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯಾವ ಯಾವ ವಿವಿ ನಕಲಿ ಮಾರ್ಕ್ಸ್‌ ಕಾರ್ಡ್‌

ಬೆಂಗಳೂರು ವಿವಿ, ಮಂಗಳೂರು‌ ವಿವಿ, ರಾಜಸ್ಥಾನ ವಿವಿ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಭಾರತ್ ಇನ್ಸ್ಟಿ ಟ್ಯೂಟ್ ಆಫ್‌ ಸ್ಕೂಲಿಂಗ್ ಎಜುಕೇಷನ್‌, ವೆಂಕಟೇಶ್ವರ್ ಓಪನ್ ವಿವಿ, ಕುವೆಂಪು ವಿವಿ, ಅಣ್ಣಮಲೈ ವಿವಿ, ಸಿಂಗಾನಿಯ ವಿವಿ ರಾಜಸ್ಥಾನ, ಸಿಕ್ಕಿಂ ಮಣಿಪಾಲ‌ ವಿವಿ, ಗಾಂಧಿ ಇನ್ಸ್ಟಿ ಟ್ಯೂಟ್ ಆಫ್‌ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್, ಜೆಆರ್‌ಎನ್‌ ರಾಜಸ್ಥಾನ ವಿವಿಗಳ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಈತ ನೀಡುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: Karnataka Election: ಕಳೆದ ಬಾರಿ ಕೊನೇ ಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿತ್ತು; ಈ ಬಾರಿ ಹಾಗಾಗಲ್ಲ, ಪಕ್ಷ ಹೇಳಿದ ಕಡೆ ಸ್ಪರ್ಧಿಸುವೆ: ವಿಜಯೇಂದ್ರ

ಆರೋಪಿ ವಿಕಾಸ್‌ ಎಂಬ ನ್ಯೂ ಕ್ವೆಸ್ಟ್‌ ಟೆಕ್ನಾಲಜಿ (new quest technology) ಎಂಬ ಹೆಸರಿನ‌ಲ್ಲಿ ಕಚೇರಿ ತೆರೆದಿದ್ದ. ಇದನ್ನು ಹೊರಗಿನಿಂದ ನೋಡುವುದಕ್ಕೆ ಸಾಫ್ಟ್‌ವೇರ್ ಕಂಪನಿಯಂತೆ ಇತ್ತು. ಆದರೆ, ಒಳಗಡೆ ಮಾರ್ಕ್ಸ್ ಕಾರ್ಡ್ ದಂಧೆ ನಡೆಸಲಾಗುತ್ತಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಜೆ ಪಿ ನಗರ ಮತ್ತು ರಾಜಾಜಿನಗರದಲ್ಲಿ ಎರಡು ಕಚೇರಿಯನ್ನು ಈತ ತೆರೆದಿದ್ದ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

25 ರಿಂದ 30 ಸಾವಿರಕ್ಕೆ ಒಂದು ಡಿಗ್ರಿ ಸಿಗಲಿದೆ

ಕಳೆದ‌ ಮೂರು ದಿನದಿಂದ‌ ಕಾರ್ಯಾಚರಣೆ ನಡೆಸಲಾಗಿದ್ದು, ಐದು ಸಂಸ್ಥೆಗಳ ವಿರುದ್ಧ ಸಿಸಿಬಿ ದಾಳಿ ನಡೆಸಿದೆ. ಇಲ್ಲಿ 25ರಿಂದ 30 ಸಾವಿರಕ್ಕೆ ಒಂದು ಪದವಿ ಪ್ರಮಾಣ ಪತ್ರ ಸಿಗುತ್ತಿತ್ತು. ಒಂದೂವರೆ ತಿಂಗಳ ಹಿಂದೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಮಾಡುತ್ತಿದ್ದವರ ಬಂಧನ ಮಾಡಲಾಗಿತ್ತು. ಈಗ ಮತ್ತಷ್ಟು ಕಡೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Viral News : ಮಗನ ಹೆಂಡತಿಯನ್ನೇ ಕದ್ದುಮುಚ್ಚಿ ಮದುವೆಯಾದ 70ರ ಮುದುಕ!

ಒಟ್ಟು 5 ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ‌. ಮೂರು ದಿನದಿಂದ ದಾಳಿ ಹಾಗೂ ಪರಿಶೀಲನೆ ನಡೆಸಿದ್ದೇವೆ. 6800 ವಿವಿಧ ಮಾರ್ಕ್ಸ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 15 ಯೂನಿವರ್ಸಿಟಿಯ ನಕಲಿ ಮಾರ್ಕ್ಸ್‌ ಕಾರ್ಡ್‌ಗಳು ಲಭ್ಯವಾಗಿವೆ. 22 ಕಂಪ್ಯೂಟರ್ ಸಿಸ್ಟಮ್ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಮಾರ್ಕ್ಸ್‌ ಕಾರ್ಡ್‌ ಪಡೆದವರ ಮೇಲೂ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.

Exit mobile version