Site icon Vistara News

Highway Projects: ಕರ್ನಾಟಕದ 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹3,582 ಕೋಟಿ ನೀಡಿದ ಕೇಂದ್ರ ಸರ್ಕಾರ: ನಿತಿನ್‌ ಗಡ್ಕರಿ ಘೋಷಣೆ

Nitin Gadkari

ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧೆಡೆ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಅಗಲೀಕರಣದ ಸಲುವಾಗಿ ₹3,582 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಣೆ ಮಾಡಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 166Eಯ ಕನಮಡಿ-ಬಿಜ್ಜರಗಿ-ತಿಕೋಟ ಭಾಗದ 2 ಲೇನ್‌ ರಸ್ತೆಯನ್ನು ಅಗಲೀಕರಣ ಮಾಡಲು 196.05 ಕೋಟಿ ರೂ. ಮಂಜೂರು ಮಾಡಲಾಗಿದೆ.

ಮಹಾರಾಷ್ಟ್ರ ಗಡಿಯಲ್ಲಿ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗ ನಡುವಿನ ಮುರ್ರಮ್‌ನಿಂದ ವಿಜಯಪುರ ಸರ್ಕಲ್‌ ಐಬಿವರೆಗಿನ ರಾಷ್ಟ್ರೀಯ ಹೆದ್ದಾರಿ 548B 2 ಲೇನ್‌ ರಸ್ತೆಯ ಅಗಲೀಕರಣಕ್ಕೆ 957.09 ಕೋಟಿ ರೂ. ಮಂಜೂರಾಗಿದೆ.

ಕೊಪ್ಪಳ ಮತ್ತು ಗದಗ ಜಿಲ್ಲೆಯ ನಡುವಿನ ಕುಕನೂರು, ಯಲಬುರ್ಗಾ, ಭಾನಾಪುರದ ಗಜೇಂದ್ರಗಡ- ಗದ್ದನಕೇರಿ ಭಾಗದ ರಾಷ್ಟ್ರೀಯ ಹೆದ್ದಾರಿ 367ರ ನಿರ್ಮಾಣಕ್ಕೆ ಲ್ಲಿ ಎನ್‌ಎಚ್‌(ಒ) ಅಡಿಯಲ್ಲಿ 333.96 ಕೋಟಿ ರೂ. ನೀಡಲು ಒಪ್ಪಲಾಗಿದೆ.

ಸರ್ಜಾಪುರದಿಂದ ಭಾನಾಪುರದ ಪಟ್ಟದಕಲ್ಲು ಹಾಗೂ ಗದ್ದನಕೇರಿವರೆಗಿನ ಬಾಗಲಕೋಟೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 367ರ 2ಲೇನ್‌ EPC ಮಾದರಿಯಲ್ಲಿ ಅಗಲೀಕರಣ ಕಾಮಗಾರಿಗೆ 445.62 ಕೋಟಿ ರೂ. ಒಪ್ಪಿಗೆ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು-ಕುಶಾಲನಗರದವರೆಗೆ, ಮೈಸೂರು ಜಿಲ್ಲೆಯಲ್ಲಿ ಕುಶಾಲನಗರ ಬೈಪಾಸ್‌ನ ಗುಡ್ಡೆಹೊಸೂರು ಆರಂಭದವರೆಗಿನ ರಾಷ್ಟ್ರೀಯ ಹೆದ್ದಾರಿ 275ರ 4 ಲೇನ್‌ ಆಕ್ಸಿಸ್‌ ಕಂಟ್ರೋಲ್ಡ್‌ ರಸ್ತೆ ನಿರ್ಮಾಣಕ್ಕೆ 909.86 ಕೋಟಿ ರೂ. ಮಂಜೂರು ಮಾಡಲಾಗಿದೆ.

ಮೈಸೂರಿನಿಂದ ಕುಶಾಲನಗರವರೆಗೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಇಲವಾಲಬಳಿಯ ಯೆಲಚೇನಹಳ್ಳಿಯಿಂದ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದ ಕೆ.ಆರ್.‌ ನಗರ ರಸ್ತೆ ಜಂಕ್ಷನ್‌ವರೆಗೆ 4 ಲೇನ್‌ ಆಕ್ಸಿಸ್‌ ಕಂಟ್ರೋಲ್ಡ್‌ ರಸ್ತೆ ನಿರ್ಮಾಣಕ್ಕೆ 739.39 ಕೋಟಿ ರೂ. ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

Exit mobile version