Site icon Vistara News

CET Result | ಸ್ವಲ್ಪ ಹೊತ್ತಿನಲ್ಲೇ ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್​ ವಿವರ ಕೊಡ್ತಾರೆ ಸಚಿವ ಅಶ್ವಥ್​ ನಾರಾಯಣ

CET Result

ಬೆಂಗಳೂರು : ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) (CET Result) ಫಲಿತಾಂಶ ಇಂದು (ಜು.30) ಪ್ರಕಟಗೊಳ್ಳಲಿದೆ. ಶನಿವಾರ ಬೆಳಗ್ಗೆ 9:45ಕ್ಕೆ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಫಲಿತಾಂಶ ಪ್ರಕಟಿಸಲಿದ್ದಾರೆ.

ಸುದ್ದಿಗೋಷ್ಠಿ ಬಳಿಕ ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. kea.kar.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಜೂನ್ 16 ರಿಂದ 18ರವರೆಗೆ ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ | CET Result | ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ

ಈ ಬಾರಿ 2,16,525 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದು, ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ | Teacher Recruitment 2022 | ಅರ್ಹ ಅಭ್ಯರ್ಥಿಗಳ ಕೊರತೆ ಎದುರಾದರೆ ಮತ್ತೊಮ್ಮೆ ಸಿಇಟಿ

Exit mobile version