ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯ ಸರ್ಕಾರ ನಡೆಸಿದ್ದ ಸಿಇಟಿ ಫಲಿತಾಂಶ (CET Result) ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶ ನೋಡುವುದಾದರೆ ಭಿ ಫಾರ್ಮ್ ವಿಭಾಗದಲ್ಲಿ 82.80% ವಿದ್ಯಾರ್ಥಿಗಳು ಅರ್ಹತೆ ಪಡೆದು ಮೊದಲ ಸ್ಥಾನ ಪಡೆದಿದೆ. ಇಂಜಿನಿಯರಿಂಗ್ 81.42% ಪಡೆದು ದ್ವಿತೀಯ ಸ್ಥಾನ ಪಡೆದರೆ, ಬಿಎನ್‌ವೈಎಸ್ 67.71 % ಪಡೆದು ತೃತೀಯ ಸ್ಥಾನ ಪಡೆದುಕೊಂಡಿದೆ. ಬಿಎಸ್‌ಸಿ (ಅಗ್ರಿ) 66.39% ಪಡೆದು ಕೊನೆಯ ಸ್ಥಾನದಲ್ಲಿದೆ.
ಬಿಎನ್‌ವೈಎಸ್ ವಿಜಯಪುರ 83.69% ಅಹರ್ತೆ ಪಡೆದು ಮೊದಲ ಸ್ಥಾನ ಪಡೆದರೆ, ಬೆಂಗಳೂರು ನಗರ 48.53% ಪಡೆದು ಕೊನೆಯ ಸ್ಥಾನ ಪಡೆದುಕೊಂಡಿದೆ. ಇಂಜಿನಿಯರ್ ವಿಭಾಗದಲ್ಲಿ ಉಡುಪಿ 91.33% ಪಡೆದು ಮೊದಲ ಸ್ಥಾನ ಪಡೆದುಕೊಂಡರೆ, ವಿಜಯಪುರ 87.17% ದ್ವಿತೀಯ ಹಾಗೂ ಚಿತ್ರದುರ್ಗ 72.01% ಪಡೆದು ಕೊನೆಯ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ | CET Result | ಬೆಂಗಳೂರಿನ ವಿದ್ಯಾರ್ಥಿಗಳ ಮೇಲುಗೈ; ಬಾಗಲಕೋಟೆ ಜಿಲ್ಲೆ ಪ್ರಥಮ
ಬಿಎಸ್‌ಸಿ (ಅಗ್ರಿ) ವಿಜಯಪುರ 83.11% ಅರ್ಹತೆಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಯಾದಗಿರಿ 80.82% ಪಡೆದು ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ನಗರ 45.50% ಕೊನೆಯ ಥಾನ ಪಡೆದುಕೊಂಡಿದೆ. ಬಿವಿಎಸ್‌ಸಿ ಅಲ್ಲಿ ವಿಜಯಪುರ 83.70% ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ 81.40% ದ್ವಿತಿಯ ಸ್ಥಾನ ಪಡೆದಿದೆ. ಬೆಂಗಳೂರು ನಗರ 48.59% ಪಡೆದು ಕೊನೆಯ ಸ್ಥಾನ ಪಡೆದುಕೊಂಡಿದೆ.
ಬಿ ಫಾರ್ಮ್‌ನಲ್ಲಿ ದಕ್ಷಿಣ ಕನ್ನಡ 92.89% ಪಡೆದು ಮೊದಲ ಸ್ಥಾನ ಪಡೆದುಕೊಂಡರೆ, ಉಡುಪಿ 92.32% ದ್ವಿತೀಯ ಸ್ಥಾನದಲ್ಲಿದೆ. ಚಿತ್ರದುರ್ಗ 72.33% ಪಡೆದು ಕೊನೆಯ ಸ್ಥಾನ ಪಡೆದುಕೊಂಡಿದೆ.
ಫಾರ್ಮಾ ಡಿ ಅಲ್ಲಿ ದಕ್ಷಿಣ ಕನ್ನಡ 92.89% ಪಡೆದು ಮೊದಲ ಸ್ಥಾನ ಪಡೆದರೆ, ಉಡುಪಿ 92.32% ಪಡೆದು ದ್ವಿತಿಯ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ 72.33% ಪಡೆದು ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶ ತೆಗೆದುಕೊಂಡಾಗ ವಿಜಯಪುರ ಹಾಗೂ ಯಾದಗಿರಿ ಉತ್ತಮ ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಮತ್ತು ಬಾಗಲಕೊಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ ಸಾಮಾನ್ಯ ಫಲಿತಾಂಶವಿದೆ. ಬೆಂಗಳೂರು ನಗರ ಕೊನೆಯ ಸ್ಥಾನ ಪಡೆದುಕೊಂಡಿದೆ.
ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಜೂನ್ 16ರಿಂದ 18ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) (CET Result) ಪರೀಕ್ಷೆ ನಡೆದಿತ್ತು. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ 2,16,525 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು.
ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಫಲಿತಾಂಶ ಪ್ರಕಟಿಸಿದರು. ಕೆಇಎ ವೆಬ್‌ಸೈಟ್ kea.kar.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಿದೆ.
ಇದನ್ನೂ ಓದಿ | CET Result | ಸ್ವಲ್ಪ ಹೊತ್ತಿನಲ್ಲೇ ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್ ವಿವರ ಕೊಡ್ತಾರೆ ಸಚಿವ ಅಶ್ವಥ್ ನಾರಾಯಣ