Site icon Vistara News

Chaitra Kundapura : ಆತ್ಮಹತ್ಯೆಗೆ ಯತ್ನಿಸಿದ ಚೈತ್ರಾ ಕುಂದಾಪುರ; ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು, CCBಗೆ Tension

Chaitra kundapura suicide attempt

ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ನಂಬರ್‌ ಒನ್‌ ಆರೋಪಿಯಾಗಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಆತ್ಮಹತ್ಯೆಗೆ ಯತ್ನಿಸಿದ್ದಾರೆ (Suicide attempt). ಅಸ್ವಸ್ಥರಾಗಿರುವ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೈತ್ರಾ ಕುಂದಾಪುರಗೆ ಮುಂದುವರಿದ ಚಿಕಿತ್ಸೆ | Chaitra Kundapura Exclusive | Vistara News

ಸೆಪ್ಟೆಂಬರ್‌ 12ರಂದು ರಾತ್ರಿ ಉಡುಪಿಯಲ್ಲಿ ಬಂಧಿತಳಾಗಿದ್ದ ಚೈತ್ರಾ ಮತ್ತು ಇತರ ನಾಲ್ವರನ್ನು ಕೋರ್ಟ್‌ 10 ದಿನಗಳ ಅವಧಿಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ. ಚೈತ್ರಾಳನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿಟ್ಟು ಬೆಳಗ್ಗೆ ಸಿಸಿಬಿ ಕಚೇರಿಗೆ ತಂದು ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಆಕೆ ಸಿಸಿಬಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ಬಯಲಿಗೆ ಬಂದಿದೆ. ಹಿಂದುತ್ವದ ಪ್ರಖರ ಪ್ರತಿಪಾದಕಿಯಾಗಿದ್ದು, ಈಗ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಕೆ ಈಗ ಭಾರಿ ಅಪಮಾನಕ್ಕೆ ಗುರಿಯಾಗಿರುವುದರಿಂದ ತಾನು ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಆಕೆ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ ಎಂದು ನಂಬಲಾಗಿದೆ.

ಚೈತ್ರಾ ಕುಂದಾಪುರಗೆ ಮುಂದುವರಿದ ಚಿಕಿತ್ಸೆ | Chaitra Kundapura Exclusive | Vistara News

ಬೆಳಗ್ಗೆ ಆಕೆಯನ್ನು ಸಾಂತ್ವನ ಕೇಂದ್ರದಿಂದ ಕರೆತರಲಾಗಿದ್ದು, ಆಕೆ ಈ ನಡುವೆ ವಿಷ ಸೇವಿಸಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಒಯ್ಯುವ ವೇಳೆ ಆಕೆಯ ಬಾಯಿಯಿಂದ ನೊರೆ ಬರುತ್ತಿದ್ದು, ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ಕೊರಳಿಗೆ ವೇಲನ್ನು ಬಿಗಿಯಾಗಿ ಸುತ್ತಲಾಗಿದೆ. ಇದನ್ನು ಗಮನಿಸಿದರೆ ಆಕೆ ವೇಲನ್ನೇ ಬಿಗಿಯಾಗಿ ಸುತ್ತಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದಳೇ ಎಂಬ ಸಂಶಯವೂ ಕಂಡುಬಂದಿದೆ.

ಚೈತ್ರಾ ಕುಂದಾಪುರಗೆ ಮುಂದುವರಿದ ಚಿಕಿತ್ಸೆ | Chaitra Kundapura Exclusive | Vistara News

ಮೊನ್ನೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು

ಸೆ. 12ರಂದು ಉಡುಪಿಯಲ್ಲಿ ಬಂಧನಕ್ಕೆ ಒಳಗಾದಾಗಲೂ ಚೈತ್ರಾ ಕುಂದಾಪುರ ಇಂಥಹುದೇ ಪ್ರಯತ್ನವನ್ನು ನಡೆಸಿದ್ದಳು. ಆವತ್ತು ಬಂಗಾರದ ಉಂಗುರ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ಆಕೆಯನ್ನು ರಕ್ಷಿಸಲಾಗಿತ್ತು. ಇದೀಗ ಎರಡನೇ ಬಾರಿ ಆಕೆ ಸಾವಿನ ಪ್ರಯತ್ನ ನಡೆಸಿದ್ದಾಳೆ.

ಏನಿದು ಬೈಂದೂರು ಬಿಜೆಪಿ ಟಿಕೆಟ್‌ ಹೆಸರಲ್ಲಿ 5 ಕೋಟಿ ರೂ. ವಂಚನೆ ಪ್ರಕರಣ?

ಬೆಂಗಳೂರಿನ ಉದ್ಯಮಿ ಗೋವಿಂದ ಪೂಜಾರಿ ಅವರು ಸಮಾಜ ಸೇವಕರಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತರಾಗಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಅವರು ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದ್ದರು.

ತನಗೆ ಬಿಜೆಪಿ, ಆರೆಸ್ಸೆಸ್‌ನ ಉನ್ನತ ಮಟ್ಟದ ನಾಯಕರ ಸಂಪರ್ಕ ಇರುವುದಾಗಿ ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಮತ್ತು ತಂಡದವರು ಈ ಮನವಿಯನ್ನು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಲು ಪ್ಲ್ಯಾನ್‌ ಮಾಡಿಕೊಂಡರು. ಈ ರೀತಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಆರೆಸ್ಸೆಸ್‌ನ ಉನ್ನತ ನಾಯಕರು, ಬಿಜೆಪಿ ಉನ್ನತ ನಾಯಕರು ಸ್ವಾಮೀಜಿಗಳ ಶಿಫಾರಸು ಬೇಕು ಎಂಬ ಸಬೂಬು ನೀಡಿದರು. ಚಿಕ್ಕಮಗಳೂರಿನಲ್ಲಿ ಒಬ್ಬ ನಕಲಿ ಆರ್‌ಎಸ್‌ಎಸ್‌ ಪ್ರಚಾರಕನನ್ನು ಸೃಷ್ಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆ ನಾಟಕ ಸೃಷ್ಟಿ ಮಾಡಿದರು. ಅವರು ಐವತ್ತು ಲಕ್ಷ ರೂ. ಕೇಳಿದರು.

ಬೆಂಗಳೂರಿನಲ್ಲಿ ಕಬಾಬ್‌ ವ್ಯಾಪಾರಿಯೊಬ್ಬನನ್ನು ಬಿಜೆಪಿಯ ಉನ್ನತ ನಾಯಕರೆಂದು ಬಿಂಬಿಸಿ ಟಿಕೆಟ್‌ ಪಕ್ಕಾ ಎಂದು ಹೇಳಿಸಿದರು. ಅವರು ಮೂರು ಕೋಟಿ ನೀಡುವಂತೆ ಸೂಚನೆ ನೀಡಿದರು. ಇನ್ನೊಂದು ಕಡೆ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಹಿರೇಹಡಗಲಿ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರಲ್ಲೂ ಶಿಫಾರಸು ಮಾಡಿಸಿದರು. ಅವರು ಕೇಳಿದ್ದು 1.5 ಕೋಟಿ. ಹೀಗೆ ಮೂವರು ವ್ಯಕ್ತಿಗಳು ಕೇಳಿದ ಒಟ್ಟು 5 ಕೋಟಿ ರೂ. ಹಣವನ್ನು ಚೈತ್ರಾ ಕುಂದಾಪುರ ಮತ್ತು ತಂಡ ಕಬ್ಜಾ ಮಾಡಿಕೊಂಡಿತ್ತು. ಕೊನೆಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದೆ ಇದ್ದಾಗ ಗೋವಿಂದ ಪೂಜಾರಿ ಸಿಟ್ಟಿಗೆದ್ದರು.

ಆಗ ಹೊಸದೊಂದು ನಾಟಕ ಶುರು ಮಾಡಿದ ಚೈತ್ರಾ ಮತ್ತು ಟೀಮ್‌ ತಮ್ಮಿಂದ ಟಿಕೆಟ್‌ ಕೊಡಿಸುವುದಾಗಿ ಹಣ ಪಡೆದ ಚಿಕ್ಕಮಗಳೂರಿನ ಆರೆಸ್ಸೆಸ್‌ ಪ್ರಚಾರಕ ವಿಶ್ವನಾಥ್‌ಜೀ ಅವರು ತೀರಿಕೊಂಡಿದ್ದಾರೆ ಎಂದು ಹೇಳಿತು. ಆದರೆ, ಈ ಹಂತದಲ್ಲಿ ಗೋವಿಂದ ಪೂಜಾರಿ ಅವರಿಗೆ ಸಂಶಯ ಬಂದು ವಿಚಾರಣೆ ಶುರು ಮಾಡಿದರು. ಆಗ ಇಡೀ ಟೀಮ್‌ನ ಎಲ್ಲ ನಾಟಕಗಳು ಬಯಲಾದವು.

ಇದನ್ನೂ ಓದಿ: Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ವಿಶ್ವನಾಥ್‌ಜೀ ಎಂಬ ವ್ಯಕ್ತಿಯೇ ಸುಳ್ಳು, ಬಿಜೆಪಿ ನಾಯಕನೆಂಬ ಹೆಸರಿನಲ್ಲಿ ಬಂದವನು ಸುಳ್ಳು ಎನ್ನುವುದನ್ನು ತಮ್ಮದೇ ತನಿಖೆಯಲ್ಲಿ ಕಂಡುಕೊಂಡ ಗೋವಿಂದ ಪೂಜಾರಿ ಅವರು ಇದೆಲ್ಲವೂ ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ಮಾಡಿದ ಪ್ಲ್ಯಾನ್‌ ಎಂಬುದಕ್ಕೆ ಎಲ್ಲ ದಾಖಲೆಗಳನ್ನು ಇಟ್ಟು ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ, ಗಗನ್‌ ಕಡೂರು, ಧನರಾಜ್‌, ರಮೇಶ್‌, ಪ್ರಜ್ವಲ್‌ ಮತ್ತು ಬಿ.ಎಲ್‌. ಚನ್ನಾನಾಯಕ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Exit mobile version