Site icon Vistara News

Chaitra Kundapura : ಈ ಡೀಲ್‌ ನನಗೆ ಮೊದಲೇ ಗೊತ್ತಿತ್ತು ಎಂದ ಚಕ್ರವರ್ತಿ ಸೂಲಿಬೆಲೆ, ಹಾಗಿದ್ರೆ ಅವರ‍್ಯಾಕೆ ತಡೆದಿಲ್ಲ?

Govinda Poojari Chakravarty Soolibele Chaitra Kundapura

ಬೆಂಗಳೂರು: ʻʻಹೌದು, ಈ ವಿಷಯ ನನಗೆ ಮೊದಲೇ ಗೊತ್ತಿತ್ತುʼʼ ಎಂದು ಗೋವಿಂದ ಪೂಜಾರಿ (Govinda Poojari) ವಂಚನೆ ಪ್ರಕರಣದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ (Chakravarty Soolibele). ನನಗೆ ಉದ್ಯಮಿ ಗೋವಿಂದ ಪೂಜಾರಿ ಅವರು ಚೆನ್ನಾಗಿ ಗೊತ್ತು, ನನ್ನ ಆತ್ಮೀಯರು ಅವರು. ಈ ರೀತಿಯ ವ್ಯವಹಾರ ಯಾಕೆ ಮಾಡಿದಿರಿ ಎಂದು ನಾನೇ ಅವರಿಗೆ ಬೈದಿದ್ದೆ ಎಂದು ಅವರು ಹೇಳಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ (Bynduru BJP Ticket) ಕೊಡಿಸುವುದಾಗಿ ಚೈತ್ರಾ ಕುಂದಾಪುರ (Chaitra Kundapura) ವಂಚನೆ ಮಾಡಿದ ಪ್ರಕರಣದ ವಿಚಾರಣೆಯ ವೇಳೆ ಚೈತ್ರಾ ಕುಂದಾಪುರ ಗೋವಿಂದ ಪೂಜಾರಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕಾಗಿ ಅವರ ಟಿಕೆಟ್‌ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಒಂದು ಪತ್ರವನ್ನು ((Letter to Income tax Department) ಬರೆದಿದ್ದರು. ಆ ಪತ್ರ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಅದರಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ (Vajradehi Matt Swamiji) ಅವರ ಹೆಸರು ಉಲ್ಲೇಖವಾಗಿತ್ತು. ಈ ಉಲ್ಲೇಖದ ಬಗ್ಗೆ ಸ್ವಾಮೀಜ ಮಾತನಾಡುವ ವೇಳೆ ತಾನು ಚಕ್ರವರ್ತಿ ಸೂಲಿಬೆಲೆಯವರಿಗೆ ಈ ವಿಷಯ ತಿಳಿಸಿದ್ದೆ ಎಂದಿದ್ದರು. ಚಕ್ರವರ್ತಿ ಸೂಲಿಬೆಲೆಯವರು ಇದರ ಬಗ್ಗೆ ಮೊದಲೇ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಜತೆಗೆ ಮಾತನಾಡಿದ್ದಾಗಿ ತಿಳಿಸಿದ್ದರು ಎಂದು ವಿವರಿಸಿದ್ದರು.

ಆದಾಯ ತೆರಿಗೆ ಇಲಾಖೆಗೆ ಬರೆದ ಪತ್ರ ಮತ್ತು ರಾಜಶೇಖರಾನಂದ ಸ್ವಾಮೀಜಿ ಅವರ ಮಾತಿನ ಬಳಿಕ ಸಿ.ಟಿ. ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ಇಬ್ಬರೂ ತಮಗೆ ಈ ಗೋಲ್‌ಮಾಲ್‌ ಬಗ್ಗೆ ಮೊದಲೇ ತಿಳಿದಿತ್ತು ಎಂಬ ಮಾಹಿತಿಯನ್ನು ನೀಡಿದ್ದಾರೆ.

ಹಾಗಿದ್ದರೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಗೋವಿಂದ ಪೂಜಾರಿಯವರು ನನಗೆ ತುಂಬಾ ಆತ್ಮೀಯರು

ನನಗೆ ಚೈತ್ರಾ ಕುಂದಾಪುರ ಎಷ್ಟು ಪರಿಚಯವೋ ಅದಕ್ಕಿಂತಲೂ ಹೆಚ್ಚು ಗೋವಿಂದ ಪೂಜಾರಿಯವರು ಆತ್ಮೀಯರು. ಈ ತರ ಮೋಸ ಆಗೋದು ತುಂಬ ದುರಂತಕಾರಿ ವಿಷಯ. ತುಂಬ ಒಳ್ಳೆಯ ಮನುಷ್ಯ ಅವರು. ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದರು. ಅವರಿಗೆ ಸಂಘಟನೆ ವಿಚಾರದಲ್ಲೇ ಮೋಸ ಆಗಿರುವುದು ನೋವಿನ ಸಂಗತಿ. ನಿಜವೆಂದರೆ ಅವರು ಮೊದಲ ಬಾರಿ ನನಗೆ ನಾನು ಮೋಸ ಹೋದೆ ಎಂದು ಹೇಳಿದಾಗ ನಾನು ಅವರಿಗೆ ಬೈದೆ. ನೀವು ಇಷ್ಟು ಆತ್ಮೀಯರಾಗಿದ್ದು ನನ್ನಲ್ಲಿ ಒಂದು ಮಾತು ಯಾಕೆ ಹೇಳಿಲ್ಲ ಎಂದು ಗದರಿದೆ.

ಬಿಜೆಪಿಯಲ್ಲಿ ಈ ರೀತಿ ದುಡ್ಡು ಕೊಟ್ಟು ಟಿಕೆಟ್‌ ಪಡೆಯುವುದು ಸಾಧ್ಯವೇ ಇಲ್ಲ ಎನ್ನುವುದು ನನಗೆ ಗೊತ್ತಿತ್ತು. ಅದರಲ್ಲೂ ಈ ಬಾರಿ ದೊಡ್ಡ ದೊಡ್ಡ ಮಟ್ಟದ ನಾಯಕರೆಲ್ಲ ಇನ್‌ವಾಲ್ವ್‌ ಆಗಿದ್ದರಿಂದ ಈ ರೀತಿ ಟಿಕೆಟ್‌ ಪಡೆಯವುದು ಸಾಧ್ಯವೇ ಇಲ್ಲ ಎಂದು ನಾನು ಹೇಳಿರ್ತಿದ್ದೆ ಎಂದು ಹೇಳಲು ಹೋದೆ. ಆದರೆ, ಅಷ್ಟು ಹೊತ್ತಿಗೆ ಆಗಬಾರದ್ದೆಲ್ಲ ಆಗಿ ಹೋಗಿತ್ತಲ್ಲ. ಹೀಗಾಗಿ ಇದನ್ನು ಸರಿ ಮಾಡಿಕೊಳ್ಳಿ, ಕುಳಿತುಕೊಂಡು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದೆ. ಅಷ್ಟು ನಾನು ಮಾತಾಡಿದ್ದೆ. ವ್ಯಕ್ತಿಗಳು ಈ ತರದ ಕಾರಣಕ್ಕೋಸ್ಕರ ಮೋಸ ಹೋಗುವುದು ತುಂಬಾ ಬೇಜಾರು ಅನಿಸ್ತದೆ.

ನಂಗೆ ಈ ಬಗ್ಗೆ ತನಿಖೆ ನಡೆಯೋದೇ ಒಳ್ಳೆಯದು ಅನಿಸುತ್ತದೆ. ಯಾಕೆ ಹೀಗಾಗುತ್ತದೆ, ಯಾರಿಂದ ಹೀಗಾಗುತ್ತದೆ ಎನ್ನುವುದು ಸಮಾಜಕ್ಕೆ ಗೊತ್ತಾಗಿಬಿಡ್ಲಿ. ಇದರಿಂದ ಈ ರೀತಿಯ ವಂಚನೆಗಳ ಸಂಖ್ಯೆ ಕಡಿಮೆಯಾಗಲಿ ಎಂದು ನನಗೆ ಅನಿಸುತ್ತದೆ. ಅದಕ್ಕಾಗಿ ಪೂರ್ಣ ಪ್ರಮಾಣದಲ್ಲಿ, ಸ್ಪಷ್ಟವಾಗಲಿ ತನಿಖೆ ನಡೆಯಲಿ ಎನ್ನುವುದು ನನ್ನ ಅಭಿಪ್ರಾಯ.

ಇದನ್ನೂ ಓದಿ: Chaitra Kundapura : ಚೈತ್ರಾ ವಂಚನೆ ಸಿ.ಟಿ. ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಹೇಳಿದಾಗ ಪ್ರತಿಕ್ರಿಯೆ ಏನಿತ್ತು?

ದೂರಿನ ಪ್ರತಿಯನ್ನೇ ನನಗೆ ಕಳುಹಿಸಿಕೊಟ್ಟಿದ್ದರು, ಸಿನಿಮೀಯ ಅನಿಸ್ತು

ಚುನಾವಣೆಗಳು ಮುಗಿದು ಕೆಲವು ತಿಂಗಳ ಬಳಿಕ ಗೋವಿಂದ ಬಾಬು ಪೂಜಾರಿಯವರು ನನಗೆ ಒಂದು ನಾಲ್ಕು ಪುಟಗಳ ದೂರನ್ನು ಸೆಂಡ್‌ ಮಾಡಿ ಇದನ್ನು ಓದಿ, ನಂತ್ರ ಕಾಲ್‌ ಮಾಡುತ್ತೀನಿ ಎಂದರು ಹೇಳಿದರು. ಅದನ್ನು ಓದಿದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ತುಂಬ ಸಿನಿಮ್ಯಾಟಿಕ್‌ ಅನಿಸಿತು, ಹೀಗೆಲ್ಲ ಆಗೋದು ಸಾಧ್ಯಾವಾಂತ ಅನಿಸಿತು. ನಂತರ ಫೋನ್‌ ಮಾಡಿದಾಗ ನಾನು ಸಣ್ಣದಾಗಿ ಜಗಳ ಮಾಡಿದೆ. ಇಷ್ಟು ಕ್ಲೋಸ್‌ ಆಗಿದ್ದರೂ ಯಾಕೆ ನನ್ನಲ್ಲಿ ಒಂದು ಮಾತು ಹೇಳಿಲ್ಲ ಅಂತ. ಅಷ್ಟು ಹೊತ್ತಿಗೆ ಎಲ್ಲ ಹಂತಗಳು ದಾಟಿ ಹೋಗಿದ್ದವು. ಇದಾಗಿ ಸ್ವಲ್ಪ ಸಮಯದ ನಂತ್ರ ರಾಜಶೇಖರಾನಂದ ಸ್ವಾಮೀಜಿ ಕಾಲ್‌ ಮಾಡಿದರು. ನಾನು ಇದೆಲ್ಲ ವಿಷಯ ಮೊದಲೇ ಗೊತ್ತಿದೆ ಅಂದೆ. ಏನಾದರೂ ಮಾಡಬೇಕಲ್ಲ ಚಕ್ರವರ್ತಿ ಅಂದ್ರು. ಸಂಬಂಧಪಟ್ಟವರಲ್ಲಿ ಮಾತನಾಡುತ್ತೇನೆ ಎಂದು ಹೇಳಿದೆ.

ಬೆಂಗಳೂರು: ʻʻಹೌದು, ಈ ವಿಷಯ ನನಗೆ ಮೊದಲೇ ಗೊತ್ತಿತ್ತುʼʼ ಎಂದು ಗೋವಿಂದ ಪೂಜಾರಿ (Govinda Poojari) ವಂಚನೆ ಪ್ರಕರಣದ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಚಕ್ರವರ್ತಿ ಸೂಲಿಬೆಲೆ (Chakravarty Soolibele). ನನಗೆ ಉದ್ಯಮಿ ಗೋವಿಂದ ಪೂಜಾರಿ ಅವರು ಚೆನ್ನಾಗಿ ಗೊತ್ತು, ನನ್ನ ಆತ್ಮೀಯರು ಅವರು. ಈ ರೀತಿಯ ವ್ಯವಹಾರ ಯಾಕೆ ಮಾಡಿದಿರಿ ಎಂದು ನಾನೇ ಅವರಿಗೆ ಬೈದಿದ್ದೆ ಎಂದು ಅವರು ಹೇಳಿದ್ದಾರೆ.

Exit mobile version