Site icon Vistara News

Chakravarti Sulibele: ಜನವರಿಯಲ್ಲಿ ರಾಮನ ಉತ್ಸವ; ಮೇಯಲ್ಲಿ ಮೋದಿ ಪ್ರಮಾಣ: ಚಕ್ರವರ್ತಿ ಸೂಲಿಬೆಲೆ ಸಂದರ್ಶನ

ಬೆಂಗಳೂರು: ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯಾಗಿಸುವ ಸಲುವಾಗಿ ಕರ್ನಾಟಕದಲ್ಲಿ ನಮೋ 2.0 ಗೆ ಚಾಲನೆ ನೀಡಲಾಗಿದ್ದು, 2024ರ ಮೇಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ತಿಳಿಸಿದ್ದಾರೆ. ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.

ನಮೋ 2.0 ಕುರಿತು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಜುಲೈ-ಆಗಸ್ಟ್‌ನಲ್ಲಿ ಜಿಲ್ಲಾ ಕೇಂದ್ರಗಳಿಗೆ ಹೋಗುತ್ತಿದ್ದೇನೆ. ಜಿಲ್ಲೆ ಹಾಗೂ ತಾಲೂಕಿನ ನಂತರದಲ್ಲಿ ಪ್ರತಿ ಹಳ್ಳಿಗೆ ವಿಸ್ತಾರ ಮಾಡುತ್ತೇವೆ. ನಂತರ ಚಿಂತಕರ ಸಭೆ ನಡೆಸುತ್ತೇವೆ. ನವೆಂಬರ್‌-ಡಿಸೆಂಬರ್‌ ವೇಳೆಗೆ ಹಳ್ಳಿಗಳಿಗೆ ಒಯ್ಯುತ್ತೇವೆ. ಜನವರಿ ವೇಳೆಗೆ ಹಳ್ಳಿ ಹಳ್ಳಿಯಲ್ಲೂ ರಾಮ ಮಂದಿರ ವಿಚಾರವನ್ನು ಸಂಭ್ರಮಿಸುತ್ತೇವೆ. ನಂತರ ಮೇಯಲ್ಲಿ ಮತ್ತೆ ನರೇಂದ್ರಮೋದಿಯವರು ಪ್ರಧಾನಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಆತ್ಮವಿಶ್ವಾಸದಲ್ಲಿ ನುಡಿದರು.

ನಾವು ನೈತಿಕ ಪೊಲೀಸ್‌ಗಿರಿ ಮಾಡಿಲ್ಲ
ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಸರ್ಕಾರ ಪಡೆಯನ್ನು ರಚಿಸಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿ, ನಾವು ಯಾವತ್ತೂ ನೈತಿಕ ಪೊಲೀಸ್‌ಗಿರಿ ಮಾಡಿಲ್ಲ. ಸಮಾಜ ಕಲ್ಯಾಣ ಸಚಿವರು ಮಾಧ್ಯಮ ಸಲಹೆಗಾರರಾಗಿ ನೇಮಿಸಿಕೊಂಡಿರುವವರು ದೇವೇಗೌಡರು, ಕುಮಾರಸ್ವಾಮಿ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಮಾತನಾಡುತ್ತಾರೆ. ಇವರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ? ಎಂದರು.

ಸರ್ಕಾರದ ವೈಫಲ್ವದಿಂದ ವಿಫಲ
ಯಮಕನಮರಡಿಯಲ್ಲಿ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಬೃಹತ್‌ ಕಾರ್ಯಕ್ರಮ ಮಾಡಿದರೂ ಚುನಾವಣೆಯಲ್ಲಿ ಫಲ ಸಿಗಲಿಲ್ಲವಲ್ಲ ಎಂಬ ಕುರಿತು ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಹಿಂದುತ್ವವನ್ನೇ ಪ್ರದರ್ಶಿಸಲು ಅಲ್ಲಿ ಮುಂದಾದೆವು, ಆದರೆ ಇಲ್ಲಿನ ರಾಜ್ಯ ಬಿಜೆಪಿಯ ಕಾರಣಕ್ಕೆ ಅದು ಪರಿಣಾಮ ಬೀರಲಿಲ್ಲ. ರಾಜ್ಯದ ಮತದಾರರು ಪ್ರಬುದ್ಧರಿದ್ದಾರೆ. ಜನರು ರಾಷ್ಟ್ರೀಯ ವಿಚಾರ ಬಂದಾಗ ಮೋದಿಯವರನ್ನು ಆಯ್ಕೆ ಮಾಡುತ್ತಾರೆ. ಪರಿಚ್ಛೇದ 370, ಕಾಶೀ ಕಾರಿಡಾರ್‌, ದೇಶವಿರೋಧಿ ಖಲಿಸ್ತಾನಿಗಳ ಹತ್ಯೆ ಮಾಡುವುದಿರಬಹುದು, ಪ್ರತಿಯೊಬ್ಬರಲ್ಲಿ ವಿಶ್ವಾಸ ಮೂಡಿಸಿದೆ. ಇದು ಮೋದಿ ಪರವಾಗಿ ಕೆಲಸ ಮಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ

ಸಾಲುಸಾಲು ಹಿಂದುತ್ವ ಕಾರ್ಯಕರ್ತರ ಹತ್ಯೆಯಾಯಿತು ಎಂದು ಸಿದ್ದರಾಮಯ್ಯ 2018ರಲ್ಲಿ ಅಧಿಕಾರ ಕಳೆದುಕೊಂಡರು. ಆದರೆ ನಂತರ ಬಂದ ಬಿಜೆಪಿ ಅವಧಿಯಲ್ಲೂ ಇದು ಮುಂದುವರಿಯಿತು ಎಂಬ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಕಡಿಮೆಯಲ್ಲಿ ಸ್ವಲ್ಪ ಕಡಿಮೆಯಾಯಿತು. ಆದರೆ ಕಾಂಗ್ರೆಸ್‌ ಸಮಯದಲ್ಲಿ ಕಾನೂನು ಇಲ್ಲದಂತಹ ಸ್ಥಿತಿ ಇರುತ್ತಿತ್ತು. ಮೈಸೂರು, ಮಂಗಳೂರು, ಬಂಟ್ವಾಳ, ಉತ್ತರ ಕನ್ನಡದಲ್ಲಿದ್ದಂತಹ ಸ್ವೇಚ್ಛೆಯ ಪ್ರವೃತ್ತಿ ಬಿಜೆಪಿ ಅವಧಿಯಲ್ಲಿ ಇರಲಿಲ್ಲ. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ದನಿ ಎತ್ತಿದ್ದಕ್ಕೆ ನನ್ನ ವಿರುದ್ಧವೇ ಪ್ರಕರಣ ದಾಖಲಾಗಿದೆ. ಆದರೆ ಕಾಂಗ್ರೆಸ್‌ ಅವಧಿಯಲ್ಲಿ ಅದರ ಸಮರ್ಥಕರು ತಮ್ಮ ಸರ್ಕಾರವನ್ನು ಯಾವುದೇ ಸ್ಥಿತಿಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

Exit mobile version