Site icon Vistara News

Chamaraja Election Results : ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹರೀಶ್​​ ಗೌಡಗೆ ಜಯ

Hunsur Election Results Harish Gowda Winner

#image_title

ಮೈಸೂರು: . ನಗರದ ಹಳೆಯ ಹಾಗೂ ಸುಶಿಕ್ಷಿತರ ಕ್ಷೇತ್ರ ಎಂದೇ ಕರೆಯಿಸಿಕೊಳ್ಳುವ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಕೆ. ಹರೀಶ್ ಗೌಡ್ (72931) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಲ್.ನಾಗೇಂದ್ರ (68837) ವಿರುದ್ಧ 4094 ಮತಗಳ ಅಂತರದಿಂದ ಜಯ ಸಾಧಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ ನಾಗೇಂದ್ರ ಅವರು 51,683 ಮತಗಳನ್ನು ಗಳಿಸಿ ಕಾಂಗ್ರೆಸ್‌ನ ವಾಸು (36,747) ವಿರುದ್ಧ ಜಯ ಸಾಧಿಸಿದ್ದರು.

1978ರಲ್ಲಿ ರಚನೆಯಾದ ಕ್ಷೇತ್ರ ಚಾಮರಾಜ. ಅಲ್ಲಿಂದ ಇಲ್ಲಿಯವರೆಗೆ 8 ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮೂರು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಜಯಗಳಿದ್ದಾರೆ. ಐದು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು, 1989 ಹಾಗೂ 2013ರಲ್ಲಿ ಅವಧಿಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.

ಇದನ್ನೂ ಓದಿ : Hunsur Election Results : ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್​ನ ಹರೀಶ್​ ಗೌಡಗೆ ಗೆಲುವು

ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,28,508 ಮತದಾರರಿದ್ದು, ಈ ಪೈಕಿ 1,14,639 ಪುರುಷರು ಹಾಗೂ 1,13,820 ಮಹಿಳೆಯರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಇವರನ್ನು ವರ್ಗೀಕರಿಸುವುದಾದರೆ, ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಶಿಕ್ಷಿತರ ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒಕ್ಕಲಿಗರಿಗೇ ಟಿಕೆಟ್‌ ನೀಡುತ್ತ ಬಂದಿದ್ದು, ಇಲ್ಲಿ ಗೆದ್ದವರೆಲ್ಲರು ಒಕ್ಕಲಿಗರೇ.

Exit mobile version