ಚಾಮರಾಜನಗರ: ಬಟ್ಟೆ ತೊಳೆಯಲು ಹೋಗಿ ಮೂವರು ನೀರುಪಾಲಾದ (Drowned in water) ಘಟನೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದೂರು ಗ್ರಾಮದ ನಿವಾಸಿ ಮೀನಾ(33), ಪವಿತ್ರ (13), ಕೀರ್ತಿ(12) ಮೃತಪಟ್ಟ ದುರ್ದೈವಿಗಳು.
ಶುಕ್ರವಾರ ಮಧ್ಯಾಹ್ನ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಮೀನಾ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಕಂಡ ಮಕ್ಕಳು ಸಹಾಯಕ್ಕೆ ಧಾವಿಸಿದ್ದರು.
ತಾಯಿಯನ್ನು ರಕ್ಷಿಸಲು ತೆರಳಿದ್ದ ಪವಿತ್ರ, ಕೀರ್ತಿ ಇಬ್ಬರು ನೀರಿನ ಸೆಲೆಗೆ ಸಿಲುಕಿದ್ದರು. ಹೊರಬರಲು ಆಗದೇ ತಾಯಿ ಜತೆ ಮಕ್ಕಳಿಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹನೂರು ತಾಲೂಕಿನ ಗೋಪಿನಾಥಂನಲ್ಲಿ ತಾಯಿ-ಇಬ್ಬರು ಮಕ್ಕಳಿಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಪಾಟಿನಲ್ಲಿತ್ತು ಯುವತಿಯ ಶವ; ಲಿವ್ ಇನ್ ಸಂಬಂಧದಲ್ಲಿದ್ದ ಗೆಳೆಯ ನಾಪತ್ತೆ!
ಹೊಸದಿಲ್ಲಿ: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ (Leave in relationship) ಯುವತಿಯೊಬ್ಬಳು ಶವವಾಗಿ (Murder Case) ಮನೆಯ ಕಪಾಟಿನಲ್ಲಿ ಪತ್ತೆಯಾಗಿರುವ ಘಟನೆ ಹೊಸದಿಲ್ಲಿಯ (delhi News) ದ್ವಾರಕಾದಲ್ಲಿ (dwaraka) ನಡೆದಿದೆ. ದ್ವಾರಕಾದ ದಾಬ್ರಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ರುಖ್ಸರ್ ರಜಪೂತ್ (26) ಕೊಲೆಯಾದ ಯುವತಿ. ಗೆಳೆಯ ವಿಪಾಲ್ ಟೈಲರ್ ಆಕೆಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಮೀರತ್‌ನಲ್ಲಿ ವಾಸವಾಗಿರುವ ರುಖ್ಸರ್ ರಜಪೂತ್ ಳ ತಂದೆ ಮಗಳನ್ನು ಹುಡುಕಿಕೊಂಡು ಬುಧವಾರ ರಾತ್ರಿ ಬಂದಾಗ ಆಕೆ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಒಂದೂವರೆ ವರ್ಷಗಳ ಹಿಂದೆ ಭೇಟಿ
ರಜಪೂತ್ ಗುಜರಾತ್‌ನಲ್ಲಿ ಕರಕುಶಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಳು. ಒಂದೂವರೆ ವರ್ಷಗಳ ಹಿಂದೆ ಅಲ್ಲಿ ಆಕೆ ವಿಪಾಲ್‌ನನ್ನು ಭೇಟಿಯಾಗಿದ್ದಳು. ದೆಹಲಿಗೆ ಬಂದ ಬಳಿಕ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವ ವಿಷಯ ಆಕೆಯ ತಂದೆ ಮುಸ್ತಾಕಿನ್ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು.
ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!
ತಂದೆಗೆ ಕೊನೆಯ ಕರೆ
ರುಖ್ಸರ್ ರಜಪೂತ್ ಬುಧವಾರ ಮಧ್ಯಾಹ್ನ ತಂದೆ ಮೊಹಮ್ಮದ್ ಮುಸ್ತಾಕಿನ್ ಅವರಿಗೆ ಕರೆ ಮಾಡಿದ್ದರು. ಆಗ ಆಕೆ ತುಂಬಾ ಅಸಮಾಧಾನದಿಂದ ಇದ್ದಿದ್ದು ಕಂಡು ಬಂದಿತ್ತು. ಸಂಜೆ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತಂಕದಿಂದ ಮುಸ್ತಾಕಿನ್ ಅವರು ರಾತ್ರಿಯೇ ರುಖ್ಸಾರ್‌ನನ್ನು ಹುಡುಕಿಕೊಂಡು ತಮ್ಮ ಸಂಬಂಧಿಕರೊಂದಿಗೆ ದೆಹಲಿಗೆ ಬಂದಿದ್ದರು.
ಅವರು ರಜಪೂತ್ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಬಂದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅವರು ಬೀಗ ಎಲ್ಲಿ ಇಡುತ್ತಾರೆ ಎಂಬುದು ತಿಳಿದಿದ್ದ ಮುಸ್ತಾಕಿನ್ ಮನೆಯ ಬೀಗ ತೆರೆದು ಒಳಗೆ ಬಂದು ಹುಡುಕಿದಾಗ ಕಪಾಟಿನಲ್ಲಿ ರಜಪೂತ್ ಅವರ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೇಹದ 15ಕ್ಕೂ ಹೆಚ್ಚು ಕಡೆ ಗಾಯ
ರುಖ್ಸರ್ ರಜಪೂತ್ ನ ಮುಖದ ಮೇಲೆ ಆಳವಾದ ಗಾಯಗಳು ಸೇರಿ ದೇಹದಾದ್ಯಂತ 15ಕ್ಕೂ ಹೆಚ್ಚು ಗಾಯಗಳಿದ್ದವು. ಮೇಲ್ನೋಟಕ್ಕೆ, ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೆಳೆಯ ನಾಪತ್ತೆ
ರುಖ್ಸರ್ ರಜಪೂತ್ ನ ಗೆಳೆಯ ವಿಪಾಲ್ ಟೈಲರ್ ನಾಪತ್ತೆಯಾಗಿರುವುದರಿಂದ ಆತನೇ ಪ್ರಮುಖ ಆರೋಪಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿಪಾಲ್ ಟೈಲರ್ ಎಂಬಾತನೊಂದಿಗೆ ಸುಮಾರು ಒಂದೂವರೆ ತಿಂಗಳಿನಿಂದ ಈ ಅಪಾರ್ಟ್ ಮೆಂಟ್ ನಲ್ಲಿ ರುಖ್ಸರ್ ರಜಪೂತ್ ವಾಸವಾಗಿದ್ದಳು. ರುಖ್ಸರ್ ರಜಪೂತ್ ಮದುವೆಯಾಗಿರುವುದಾಗಿ ಹೇಳಲಾಗಿದ್ದು, ಈ ಕುರಿತು ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ದಾಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ ಎಂದು ಸಿಂಗ್ ಹೇಳಿದರು. ಮುಸ್ತಾಕಿಮ್ ಹೇಳಿಕೆಯನ್ನು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಪತ್ತೆ ಹಚ್ಚಲು ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ