ಚಾಮರಾಜನಗರ: ಕಬ್ಬು ತುಂಬಿದ ಲಾರಿಗೆ (Lorry Carrying Sugarcane) ವಿದ್ಯುತ್ ತಂತಿ ತಗುಲಿ (Electric Shock) ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ಚಾಮರಾಜನಗರ ಜಿಲ್ಲೆ (Chamarajanagar News) ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಸಮೀಪ ನಡೆದಿದೆ. ಶನಿವಾರ ಮುಂಜಾನೆ ಈ ದುರಂತ ನಡೆದಿದ್ದು, ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ (Driver and Cleaner dead).
ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಕಬ್ಬಿನ ಭಾಗಕ್ಕೆ ವಿದ್ಯುತ್ ತಂತಿ ತಗುಲಿದೆ. ಅದು ಹಸಿ ಕಬ್ಬು ಆಗಿರುವುದರಿಂದ ಇಡೀ ಲಾರಿಗೆ ವಿದ್ಯುತ್ ಪ್ರವಹಿಸಿದೆ. ಆಗ ಡ್ರೈವರ್ ಮತ್ತು ಕ್ಲೀನರ್ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಲಾರಿಯಿಂದ ಹೊರಗೆ ಜಿಗಿಯುವ ಪ್ರಯತ್ನ ಮಾಡಿದ್ದರೂ ಅಷ್ಟು ಹೊತ್ತಿಗೆ ಶಾಕ್ ಆಗಿತ್ತು.
ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಅವಘಡಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಅದೇ ವೇಳೆಗೆ ಲಾರಿಯಲ್ಲಿ ಅತ್ಯಂತ ಎತ್ತರಕ್ಕೆ ಕಬ್ಬು ಕಟ್ಟಿಕೊಂಡು ಸಾಗಲಾಗುತ್ತಿದ್ದು, ಆ ಕಾರಣಕ್ಕಾಗಿ ಅದು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ ಎಂದೂ ಹೇಳಲಾಗುತ್ತಿದೆ. ಇಲ್ಲಿರುವ ವಿದ್ಯುತ್ ತಂತಿಗಳ ಎತ್ತರವನ್ನು ಲೆಕ್ಕಿಸದೆ ಕಬ್ಬು ಲೋಡ್ ಮಾಡಿದ್ದೂ ಒಂದು ಕಾರಣ ಎಂಬ ಆಪಾದನೆ ಇದೆ.
ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದಾರೆ.
ಬೆಳಗಾವಿಯಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ದುರ್ಮರಣ
ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ತಂದೆ- ಮಗ ದುರ್ಮರಣ (Electric shock) ಹೊಂದಿದ್ದಾರೆ. ಪ್ರಭಾಕರ್ ಹುಂಡಿ (75), ಮಂಜುನಾಥ ಹುಂಡಿ (32) ಮೃತ ದುರ್ದೈವಿಗಳು. ವಿದ್ಯುತ್ ಕಂಬಕ್ಕೆ ಬೆಂಬಲ ಆಗಿ ವೈಯರ್ ಕಟ್ಟಲಾಗಿತ್ತು. ಪ್ರಭಾಕರ್ ಹುಂಡಿ ಅವರು ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿದ್ದಿದ್ದ ವೈಯರ್ ಹಿಡಿದುಕೊಂಡಿದ್ದಾರೆ. ಈ ವೇಳೆ ಒಮ್ಮೆಲೆ ವಿದ್ಯುತ್ ಪ್ರವಹಿಸಿದೆ. ತಂದೆ ಒದ್ದಾಡುವುದನ್ನು ಕಂಡ ಮಗ ಮಂಜುನಾಥ ರಕ್ಷಣೆಗಾಗಿ ಹೋಗಿದ್ದು ಈ ವೇಳೆ ಆತನಿಗೂ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ.
ಇದನ್ನೂ ಓದಿ: Electric Shock : ವಿದ್ಯುತ್ ದುರಂತಕ್ಕೆ ಒಂದೇ ಕುಟುಂಬದ ಮೂವರು ಬಲಿ; ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ಬಳ್ಳಾರಿಯ ಕುರುಗೋಡಿನಲ್ಲಿ ಕರೆಂಟ್ ಶಾಕ್‌ಗೆ ದೇಹ ಪೀಸ್ ಪೀಸ್ ಆಗಿತ್ತು
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಹತ್ತಿ ತಂತಿಗಳನ್ನು ಜೋಡಿಸಲು ಮುಂದಾದ ಬದ್ರಿ ಎಂಬವರು ರುಂಡ ಮುಂಡ ಕತ್ತರಿಸಿ ಪ್ರಾಣ ಕಳೆದುಕೊಂಡಿದ್ದರು. ಬದ್ರಿ ಅವರು ಇತ್ತೀಚೆಗೆ ಬೆಳಗ್ಗೆ 6 ಗಂಟೆ ಹೊತ್ತಿಗೆ ಹೊಲಕ್ಕೆ ಹೋಗಿದ್ದರು. ಆಗ ವಿದ್ಯುತ್ ಇರಲಿಲ್ಲ ಎಂದು ತಾನೇ ವಿದ್ಯುತ್ ಕಂಬ ಹತ್ತಿ ಸರಿ ಮಾಡಲು ತೆರಳಿದ್ದರು. ವಿದ್ಯುತ್ ತಂತಿ ಬೇರ್ಪಟ್ಟಿದ್ದರಿಂದ ಸಮಸ್ಯೆಯಾಗಿದೆ ಎನ್ನುವುದು ಅವರಿಗೆ ಗೊತ್ತಾಗಿತ್ತು. ಇನ್ನು ಲೈನ್ ಮ್ಯಾನ್‌ಗಳಿಗೆ ಹೇಳಿದರೆ ತಕ್ಷಣ ಬರಲಿಕ್ಕಿಲ್ಲ ಅಂದುಕೊಂಡು ಅವರು ತಾನೇ ಅದನ್ನ ಸರಿ ಮಾಡಲು ಹೋಗಿದ್ದರು. ವಿದ್ಯುತ್ ವಯರ್‌ಗಳನ್ನು ಜೋಡಿಸುವಾಗ ವಿದ್ಯುತ್ ಶಾಕ್ ಹೊಡೆದಿದ್ದು ಮಾತ್ರವಲ್ಲ ದೇಹವೇ ಎರಡು ತುಂಡಾಗಿತ್ತು. ತಲೆಯ ಭಾಗ ಕತ್ತರಿಸಿ ಕೆಳಗೆ ಬಿದ್ದಿದ್ದರೆ ದೇಹ ಮೇಲೆ ನೇತಾಡುತ್ತಿತ್ತು.