Site icon Vistara News

Kidnap Case: ಭಿಕ್ಷೆ ಬೇಡುತ್ತಿದ್ದ ಬಾಲಕಿ ಅಪಹರಣ;‌ ಸಿನಿಮೀಯವಾಗಿ ಸಿಕ್ಕಿಬಿದ್ದ ಮುಸ್ಲಿಂ ಯುವಕರು

Kollegala kidnap Case3

ಚಾಮರಾಜನಗರ: ನಾಲ್ವರು ಕಾಮಾಂಧ ಮುಸ್ಲಿಂ ಯುವಕರು (Muslim Youths) ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳನ್ನು (Beggar Girl) ಅಪಹರಿಸಿ ಕೊನೆಗೆ (Kidnap Case) ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಭಯಾನಕ ಘಟನೆಯೊಂದು ಕೊಳ್ಳೇಗಾಲ ನಗರದಲ್ಲಿ ನಡೆದಿದೆ. ಈ ಕಿರಾತಕರು ಕೇರಳದ ಮಲಪ್ಪುರಂ ಜಿಲ್ಲೆಯವರೆಂದು ತಿಳಿದುಬಂದಿದ್ದು, ಮಾರ್ಗ ಮಧ್ಯೆ ಸ್ಥಳೀಯರು ತಡೆದು ಚೆನ್ನಾಗಿ ಥಳಿಸಿ ಪೊಲೀಸರ ವಶಕ್ಕೆ (publics beat kidnappers) ಒಪ್ಪಿಸಿದ್ದಾರೆ.

ಕೇರಳದ ಮಲಪ್ಪುರಂನ ಈ ದುಷ್ಟರು ಪ್ರವಾಸಕ್ಕೆಂದು ಚಾಮರಾಜ ನಗರದಿಂದ ತಮಿಳುನಾಡಿಗೆ ಹೊರಟಿದ್ದರು. ದಾರಿ ಮಧ್ಯೆ ಅವರಿಗೆ ಕೊಳ್ಳೇಗಾಲದಲ್ಲಿ ಅಮಾಯಕಿಯಂತಿದ್ದ, ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳು ಕಂಡಿದ್ದಾಳೆ. ಆಕೆಯ ಮೇಲೆ ಮೇಲೆ ಕಣ್ಣು ಹಾಕಿದ ದುಷ್ಟರು ಆಕೆಯನ್ನು ಯಾರಿಗೂ ಗೊತ್ತಾಗದಂತೆ ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.

ಮಧುವನಹಳ್ಳಿಯಲ್ಲಿ ಕಾರು ಡಿಕ್ಕಿಯಾಗಿ ಸಿಕ್ಕಿಬಿದ್ದರು

ನಾಲ್ವರು ಮುಸ್ಲಿಂ ಯುವಕರು ಹೀಗೆ ಬಾಲಕಿಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕವೂ ಕಾರು ಪರಾರಿ ಆಗಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಬಾಲಕಿ ಇರುವುದು ಪತ್ತೆಯಾಗಿದೆ. ವಿಚಾರಿಸಿದಾಗ ಬಾಲಕಿಯನ್ನು ಅಪಹರಿಸಿರುವುದು ಗೊತ್ತಾಗಿದೆ. ಆಗ ಊರಿನವರು ಸೇರಿ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: Kidnap Case : ಅಪ್ಪ-ಅಮ್ಮನ ಮರುಳು ಮಾಡಿ 12ರ ಬಾಲಕಿ ಜತೆ ಊರು ಬಿಟ್ಟ ಕೇಡಿ ದಿಲ್ಲಿಯಲ್ಲಿ ಅರೆಸ್ಟ್‌

ಬಾಲಕಿ ನರಸೀಪುರ ಮೂಲದವಳಾಗಿದ್ದು, ಕೊಳ್ಳೇಗಾಲದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದಳು. ಇದೀಗ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ರಿಮ್ಯಾಂಡ್‌ ಹೋಮ್‌ಗೆ ಕಳಹಿಸಿದ್ದಾರೆ.

ಅಪಹರಣಕ್ಕೆ ಬಳಸಿದ ಕಾರು

ಅಪಹರಣಕ್ಕೆ ಯತ್ನಿಸಿದ ಕೇರಳದ ಮಲಪ್ಪುರಂ ಜಿಲ್ಲೆಯ ಈ ಕಿರಾತಕ ಯುವಕರನ್ನು ಆದಿಲ್. ಅಯೂಬ್ ಸಾದಿಕ್. ಉಮರ್ ಎಂದು ಗುರುತಿಸಲಾಗಿದೆ. ಇವರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಅಪರಹಣಕ್ಕೆ ಬಳಸಿದ್ದ ಕೆ ಎಲ್ 54 ಎಂ 6962 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version