ಚಾಮರಾಜನಗರ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು (Lorry carrying Sugarcane Overturns) ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ (Road Accident). ಇದರಿಂದಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ (Three dead in Accident) ಮೃತಪಟ್ಟಿದ್ದಾರೆ.
ತಾಳವಾಡಿಯಿಂದ ಸತ್ಯಮಂಗಲದ ಕಡೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿ ಇದಾಗಿದ್ದು, ಚಾಮರಾಜನಗರ (Chamarajanagar News) ಸಮೀಪದ ದಿಂಬಂನ 27ನೇ ತಿರುವಿನಲ್ಲಿ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.
ಕಬ್ಬು ತುಂಬಿದ ಲಾರಿ ಉರುಳಿಬೀಳುತ್ತಿದ್ದ ಹೊತ್ತಿನಲ್ಲೇ ಕಾರು ಆ ಭಾಗದಿಂದ ದಾಟಿ ಹೋಗಿದೆ. ಎರಡೂ ವಾಹನಗಳು ಇಡೀ ರಸ್ತೆಯನ್ನು ಆವರಿಸಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಸ್ಥಳಕ್ಕೆ ಆಸನೂರು ಪೊಲೀಸರ ಭೇಟಿ ನೀಡಿದ್ದಾರೆ.
ಮೃತ ದೇಹಗಳನ್ನು ಸತ್ಯಮಂಗಲ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತರು ಯಾರು ಎನ್ನುವುದನ್ನು ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಆಸನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಸ್ತೆ ತೆರವು ಮಾಡುವ ಕೆಲಸವೂ ನಡೆಯುತ್ತಿದೆ.
ಇದನ್ನೂ ಓದಿ : Murder Case : ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ; ಕಾರಲ್ಲಿ ಶವ ಪತ್ತೆ
ವಿಸಿ ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸಾವು
ಮಂಡ್ಯ: ಮಂಡ್ಯದಲ್ಲಿ ಮತ್ತೊಂದು ಕಾಲುವೆ ದುರಂತ (Channel Tragedy) ಸಂಭವಿಸಿದೆ. ವಾಹನಿಗರ ಪಾಲಿಗೆ ಮರಣ ಗುಂಡಿಯಂತಾಗಿರುವ ವಿ.ಸಿ ನಾಲೆಗೆ ಉರುಳಿ ಬಿದ್ದ ಕಾರು ಚಾಲಕ ಸೇರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ (Mandya accident).
ಮಂಡ್ಯ ತಾಲೂಕಿನ (Mandya News) ಅವ್ವೇರಹಳ್ಳಿ ಗ್ರಾಮದ ಬಳಿ ನೀರಿಲ್ಲದೆ ಕಾಲುವೆಗೆ ಕಾರು ನಿಯಂತ್ರಣ ತಪ್ಪಿ ಸೇತುವೆ (Car falls into Channel) ಮೇಲಿಂದ ಉರುಳಿ ಬಿದ್ದಿದೆ. ಮೃತರ ವಿಳಾಸ ಯಾವುದು ತಿಳಿದುಬಂದಿಲ್ಲ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭಾಗದಲ್ಲಿ ನಾಲೆಗೆ ತಡೆಗೋಡೆ ಇಲ್ಲದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. 2023ರಲ್ಲಿ ವಿಸಿ ನಾಲೆಗೆ ವಾಹನಗಳು ಉರುಳಿ ಬಿದ್ದು ಸುಮಾರು 11 ಮಂದಿ ಪ್ರಾಣ ಕಳೆದುಕೊಂಡಿದ್ದರು.