Site icon Vistara News

Bus Accident | ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದ ಸಾರಿಗೆ ಬಸ್; 25 ಮಂದಿ ಪ್ರಯಾಣಿಕರಿಗೆ ಗಾಯ

Bus Accident

ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಕೆ‌ಎಸ್‌ಆರ್‌ಟಿಸಿ ಬಸ್ (Bus Accident) ಹಳ್ಳಕ್ಕೆ ನುಗ್ಗಿದ್ದರಿಂದ 25 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮಲೈ ಮಹದೇಶ್ವರ ಬೆಟ್ಟದ ತಾಳಬೆಟ್ಟದ ಸಮೀಪ ಬುಧವಾರ ಅಪಘಾತ ಸಂಭವಿಸಿದೆ. ಗಾಯಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಕ್ಕೀಡಾದ ಬಸ್ ಮಂಡ್ಯ ಜಿಲ್ಲೆ ಮದ್ದೂರು ಘಟಕಕ್ಕೆ ಸೇರಿದ್ದಾಗಿದ್ದು, ಬಸ್‌ ಮುಂಭಾಗ ಭಾಗಶಃ ಜಖಂಗೊಂಡಿದೆ.

ಇದನ್ನೂ ಓದಿ | Drowned | ಕುಡಿತದ ಮತ್ತಿನಲ್ಲಿ ಕಲ್ಲು ಕೋರೆಯ ಆಳ ನೋಡಲು ಇಳಿದ ಯುವಕ ನಾಪತ್ತೆ, ಇನ್ನೂ ಹುಡುಕಾಟ

Exit mobile version