ಬೆಂಗಳೂರು: ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾದ ಚಾಮರಾಜಪೇಟೆ ವಿಧಾನ ಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಜಮೀರ್ ಅಹಮದ್ ಖಾನ್ ಗೆಲವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭಾಸ್ಕರ್ ರಾವ್ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಝಡ್. ಜಮೀರ್ (65,339 ಮತಗಳು) ಅವರು ಬಿಜೆಪಿಯ ಎಂ ಲಕ್ಷ್ಮಿನಾರಾಯಣ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು.
1952ರಲ್ಲಿ ಚಾಮರಾಜಪೇಟೆ ವಿಧಾನ ಕ್ಷೇತ್ರ ರೂಪುಗೊಂಡಿತು. ಈ ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವೇ ಪಾರಮ್ಯ ಮೆರೆದಿದೆ.1972ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್, ಕಾಂಗ್ರೆಸ್ ಗೆಲುವಿಗೆ ತಡೆಯೊಡ್ಡಿದರು. ಆದರೆ, 1972ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್, ಕಾಂಗ್ರೆಸ್ ಗೆಲುವಿಗೆ ತಡೆಯೊಡ್ಡಿದ್ದರು. ಅಚ್ಚರಿಯೆಂದರೆ 1978ರಲ್ಲಿ ಬಿಜೆಪಿ ಇಲ್ಲಿ ವಿಜಯ ಸಾಧಿಸಿತ್ತು. ಪ್ರಮಿಳಾ ನೇಸರ್ಗಿ ಇಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು.
2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಮೀರ್ ಅವರು ಇಲ್ಲಿ ಜೆಡಿಎಸ್ಗೆ ನೆಲೆ ಕೊಟ್ಟರು. ಅಲ್ಲಿಂದ ಮೂರು ಬಾರಿ ಗೆದ್ದರು. 2018ರ ಚುನಾವಣೆ ಹೊತ್ತಿಗೆ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್ನಿಂದಲೂ 65,339 ಮತಗಳನ್ನು ಪಡೆದು ಗೆದ್ದಿದ್ದರು.