Site icon Vistara News

Chamundeshwari Election Results : ಚಾಮುಂಡೇಶ್ವರಿಯಲ್ಲಿ ಭರ್ಜರಿ ಗೆಲುವು

Chamundeshwari Election Results GT devegowda Winner

#image_title

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನ ಜಿಟಿ ದೇವೇಗೌಡ (103917) ಕಾಂಗ್ರೆಸ್​ ಪಕ್ಷದ ಮಾವಿನಹಳ್ಳಿ ಸಿದ್ದೇಗೌಡ (78730) ವಿರುದ್ಧ 50807 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ದಾಖಲೆಯ 36,042 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2008ರ ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮೈಸೂರು ತಾಲೂಕು ಮತ್ತು ನಗರದ ಕೆಲವು ವಾರ್ಡ್‌ಗಳು ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ ವರುಣಾ ಹೋಬಳಿಯನ್ನು ಪ್ರತ್ಯೇಕಿಸಿ, ಟಿ ನರಸೀಪರ ಹಾಗೂ ವರುಣಾದ ಭಾಗಶಃ ಪ್ರದೇಶಗಳನ್ನು ಸೇರಿಸಿ ವರುಣಾ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯಿತು. ಆ ಕ್ಷೇತ್ರಕ್ಕೆ ಸಿದ್ದರಾಮಯ್ಯ ವಲಸೆ ಹೋದನಂತರ ಜಿ ಟಿ ದೇವೇಗೌಡ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದರು.

ಸಿದ್ದರಾಮಯ್ಯ ರಾಜಕೀಯ ಬದುಕಿನ ಮಹತ್ವದ ಘಟ್ಟ 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಿವಬಸಪ್ಪ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯನವರು 1,15,512 ಮತಗಳನ್ನು ಪಡೆದರೆ, ಶಿವಬಸಪ್ಪ ಅವರು 1,15,255 ಮತಗಳನ್ನು ಪಡೆದು ಕೇವಲ 257 ವೋಟುಗಳಿಂದ ಜಯ ಸಾಧಿಸಿದ್ದರು.

2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಮಾಜಿ ಗೆಳೆಯರ ಹಾಲಿ ಕದನ ಕ್ಷೇತ್ರವಾಗಿ ಮಾರ್ಪಾಟಾಗಿತ್ತು. ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರೆ, ಜೆಡಿಎಸ್‌ನ ಜಿಟಿಡಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದರು. ಈ ಚುನಾವಣೆಯಲ್ಲಿ 1,21,325 ಮತ ಪಡೆದ ಜಿಟಿಡಿ, 85,283 ವೋಟುಗಳನ್ನು ಪಡೆದು ದಾಖಲೆಯ ಅಂತರದಿಂದ ಗೆದ್ದರು.

ಇದು ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರರಿ. ಒಟ್ಟು 2,95,880 ಜನಸಂಖ್ಯೆ ಹೊಂದಿರುವ ಈ ಕ್ಷೇತ್ರದಲ್ಲಿ 75 ಸಾವಿರ ಒಕ್ಕಲಿಗ, 48 ಸಾವಿರ ಪರಿಶಿಷ್ಟ ಜಾತಿ, 35 ಸಾವಿರ ಕುರುಬ, 35 ಸಾವಿರ ಲಿಂಗಾಯತ, 30 ಸಾವಿರ ಪರಿಶಿಷ್ಟ ಪಂಗಡ, 14 ಸಾವಿರ ವಿಶ್ವಕರ್ಮ, 13 ಸಾವಿರ ಬ್ರಾಹ್ಮಣ, 12 ಸಾವಿರ ಮುಸ್ಲಿಂ ಹಾಗೂ ಇತರೆ ಸಮುದಾಯಗಳ 40 ಸಾವಿರ ಮತದಾರರಿದ್ದಾರೆ. ಮಾಹಿತಿ ಪ್ರಕಾರ 1,49,999 ಪುರುಷ ಹಾಗೂ 1,45,881 ಮಹಿಳಾ ಮತದಾರರನ್ನು ಹೊಂದಿಕೊಂಡಿದೆ.

Exit mobile version