Site icon Vistara News

KS Bhagawan: ಚಾಮುಂಡಿಗೆ ಪೌರಾಣಿಕ ಹಿನ್ನೆಲೆ ಇಲ್ಲ, ಮಹಿಷ ರಾಕ್ಷಸನಲ್ಲ ಬೌದ್ಧ ಬಿಕ್ಕು ಎಂದ ಭಗವಾನ್

Writer KS Bhagawan

ಮೈಸೂರು: ಚಾಮುಂಡಿಗೆ ಪುರಾಣದ ಹಿನ್ನೆಲೆ ಇಲ್ಲ. ಚಾಮುಂಡೇಶ್ವರಿ ಎಂಬುವುದು 200 ವರ್ಷಗಳ ಈಚೆಗೆ ಸೃಷ್ಟಿಯಾದ ಪಾತ್ರ. ಮಹಿಷ ರಾಕ್ಷಸ ಅಲ್ಲ, ಆತ ಬೌದ್ಧ ಬಿಕ್ಕು. ಅಶೋಕ‌ನ ಕಾಲದಲ್ಲಿ ಮಹಿಷನು ಧರ್ಮ ಪ್ರಚಾರಕ್ಕಾಗಿ ಮೈಸೂರಿಗೆ ಬಂದ. ಆತನ ಕಾಲಾನಂತರದಲ್ಲಿ ಚಾಮುಂಡಿ ಎನ್ನುವ ಪಾತ್ರ ಸೃಷ್ಟಿಸಲಾಯಿತು ಎಂದು ನಿವೃತ್ತ ಪ್ರಾಧ್ಯಾಪಕ, ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ (KS Bhagawan) ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಶೋಕ ಚಕ್ರವರ್ತಿ ದೇಶ ಕಂಡ ಶ್ರೇಷ್ಠ ರಾಜ. ಆತನ ಹಿರಿಮೆಯನ್ನು ಜಾತಿ ಕಾರಣಕ್ಕೆ ಸಮಾಜ ನಿರ್ಲಕ್ಷ್ಯ ಮಾಡಿದೆ. ಅಶೋಕ‌ನ ಕಾಲದಲ್ಲಿ ಮಹಿಷ ಧರ್ಮ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ. ಚಾಮುಂಡಿ ಬೆಟ್ಟ ಈ ಹಿಂದೆ ಮಹಾಬಲ ಗಿರಿ ಆಗಿತ್ತು. ಜಾತಿ ಕಾರಣಕ್ಕೆ ಚಾಮುಂಡೇಶ್ವರಿ (Chamundeshwari) ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Actor Upendra : 2ನೇ FIRಗೂ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ; ಉಪೇಂದ್ರಗೆ ಬಿಗ್‌ ರಿಲೀಫ್‌

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಈ ಬಾರಿ ಮಹಿಷ ದಸರಾ (Mahisha Dasara) ಆಚರಣೆಗೂ ಒಂದು ತಿಂಗಳು ಮೊದಲು ವಿಚಾರ ಸಂಕಿರಣ ಆಯೋಜನೆ ಮಾಡಲಾಗುತ್ತದೆ. ಮೊದಲು ಇತಿಹಾಸ ಹೇಳಿ, ನಂತರ ಆಚರಣೆ ಮಾಡುತ್ತೇವೆ. ವಿಚಾರ ಸಂಕಿರಣದಲ್ಲಿ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಈ.ಶಿ.ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಕೃಷ್ಣಮೂರ್ತಿ ಚಮರಾಂ ಸೇರಿದಂತೆ ಇತಿಹಾಸ ತಿಳಿದವರು ವಿಚಾರ ಮಂಡಿಸಲಿದ್ದಾರೆ. ಸದ್ಯದಲ್ಲೇ ಸ್ಥಳ ಹಾಗೂ ದಿನಾಂಕ ಘೋಷಣೆ ಮಾಡಲಾಗುವುದು. ದಸರಾ ವಿರುದ್ಧ ಚಾಮುಂಡಿ ವಿರುದ್ಧ ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ. ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ವಿಚಾರ ಸಂಕಿರಣದಲ್ಲಿ ಎಲ್ಲ ವಿಚಾರಗಳನ್ನು ಮುಂದಿಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ

ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾ

ಚಾಮುಂಡಿ ಬೆಟ್ಟದಲ್ಲೇ ಈ ಬಾರಿ ಮಹಿಷ ದಸರಾ ಆಚರಣೆ ಮಾಡುತ್ತೇವೆ. ಪರ್ಮಿಷನ್ ಕೊಡಲ್ಲ ಎನ್ನಲು ಇವರ‍್ಯಾರು? ನಾವು ಪುರಾಣದ ಆಚರಣೆ ಮಾಡುತ್ತಿಲ್ಲ. ಇತಿಹಾಸದ ಆಚರಣೆ ಮಾಡುತ್ತಿದ್ದೇವೆ. ನಮ್ಮನ್ನು ತಡೆಯಲು ಯಾರಿಗೂ ಅವಕಾಶ ಇಲ್ಲ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ನಮಗೆ ಇಷ್ಟ ಬಂದ ಧರ್ಮ, ಆಚರಣೆ ಮಾಡುತ್ತೇವೆ. ಈ ಬಾರಿ ಚಾಮುಂಡಿ ಬೆಟ್ಟದಲ್ಲಿ‌ ಮಹಿಷ ದಸರಾ ಮಾಡುತ್ತೇವೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

ಉಪೇಂದ್ರಾನೂ ಸ್ಲಂ ಪ್ರಾಡಕ್ಟೇ ಎಂದ ಪ್ರೊ.ಮಹೇಶ್ ಚಂದ್ರಗುರು

ಉಪೇಂದ್ರ ಹೇಳಿಕೆ ಬಗ್ಗೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಪ್ರತಿಕ್ರಿಯಿಸಿ, ನಟ ಉಪೇಂದ್ರ ಹೇಳಿಕೆ ದರ್ಪ, ದುರಹಂಕಾರದ ಪರಮಾವಧಿ. ಆ ಗಾದೆಯನ್ನು ಉಪೇಂದ್ರ ಅವರಪ್ಪ ಕಂಡು ಹಿಡಿದಿದ್ದಾ?
ಮಗನೇ ಉಪೇಂದ್ರ ಹುಷಾರ್. ಹೊಲೆಗೇರಿ, ಕೊಳೆಗೇರಿ ಅಂತೆಲ್ಲ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಉಪೇಂದ್ರ ಕೂಡ ಸ್ಲಂ ಪ್ರಾಡಕ್ಟೇ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಆಕ್ರೋಶ ಹೊರಹಾಕಿದ್ದಾರೆ.

ಉಪೇಂದ್ರ ಜಾತಿ ಸೆನ್ಸ್ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ. ಹೊಲೆಗೇರಿ ಪದ ಬಳಕೆಯಿಂದ ಒಂದು ಸಮಾಜಕ್ಕೆ ನೋವಾಗುತ್ತೆ ಎನ್ನುವ ಪ್ರಜ್ಞೆ ಇರಬೇಕಿತ್ತು. ಉಪೇಂದ್ರನನ್ನು ಕೂಡಲೇ ಬಂಧಿಸಬೇಕು ಎಂದು ಹೇಳುವುದಿಲ್ಲ.
ಒಂದಷ್ಟು ಕಾನೂನು ಪ್ರಕ್ರಿಯೆಗಳು ಇರುತ್ತವೆ. ಅದೆಲ್ಲವನ್ನೂ ಪರಿಶೀಲಿಸಿಯೇ ಕ್ರಮ ಕೈಗೊಳ್ಳಲಿ. ಒಂದು ವೇಳೆ ಉಪೇಂದ್ರ ನೀಡಿರುವ ಹೇಳಿಕೆ ಜಾತಿಗೆ ಅಪಮಾನ ಮಾಡುವುದು ಖಚಿತವಾದರೆ ಸಂವಿಧಾನದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಉಪೇಂದ್ರ ಹಿರಿಯ ನಟ. ಮಾತನಾಡುವಾಗ ಎಚ್ಚರಿಕೆ ವಹಿಸದೇ ಇದ್ದರೆ ಜನ ಬೀದಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಹೇಳಿದರು.

Exit mobile version