| ತಿರುಪತಿ ನಾಯಕ್, ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಾರಣಗಿರಿ, ಹೊಸನಗರ
ಮಾನ್ಯ ಸಂಪಾದಕರಿಗೆ ನಮನಗಳು…
1969ರ ಜುಲೈ 21ರಂದು ನೀಲ್ ಆರ್ಮಸ್ಟ್ರಾಂಗ್ ಹೇಳಿದ್ದು: ನಾನು ಇರಿಸಿದ್ದು ಒಂದು ಚಿಕ್ಕ ಹೆಜ್ಜೆ. ಆದರೆ ಮಾನವ ಕುಲಕ್ಕೆ ಇದು ದೊಡ್ಡ ಹೆಜ್ಜೆ ಎಂದು. ವಿಸ್ತಾರ ಟಿವಿಯಲ್ಲಿ ಬಾಹ್ಯಾಕಾಶ ವಿಜ್ಞಾನಿ ಡಾ. ಗುರುಪ್ರಸಾದ್ (Chandrayaan 3) ಅವರೊಂದಿಗಿನ ಚರ್ಚೆ ಅತ್ಯಂತ ಉಪಯುಕ್ತವಾಗಿತ್ತು. ರಾಕೆಟ್, ಲ್ಯಾಂಡರ್, ರೋವರ್, ಬಾಹ್ಯಾಕಾಶ ಇತ್ಯಾದಿ ಕ್ಲಿಷ್ಟ ಸಂಗತಿಗಳನ್ನೂ ಡಾ. ಗುರುಪ್ರಸಾದ್ ಅವರು ಅತ್ಯಂತ ಸರಳವಾಗಿ ನಮಗೆ ಅರ್ಥವಾಗುವಂತೆ ವಿವರಿಸಿದರು.
ಇದನ್ನೂ ಓದಿ: Chandrayaan 3 : ಸೂರ್ಯನೆಡೆಗೆ ಇಸ್ರೋ ನೋಟ! ಮಿಷನ್ ಆದಿತ್ಯ ಹೇಗೆ ಕೆಲಸ ಮಾಡಲಿದೆ?
ಚಂದ್ರಯಾನ 3 ಕೇವಲ ಭಾರತ ಮಾತ್ರವಲ್ಲ, ದಕ್ಷಿಣ ಧೃವದಲ್ಲಿ ಇರಿಸಿದ ಮನುಕುಲದ ಸಾಧನೆಯೆಂದೇ ಹೇಳಬಹುದು. ಡಾ. ಗುರುಪ್ರಸಾದ್ ಅವರ ಮಾತು, ಆ ಸೌಜನ್ಯ, ವಿಷಯದಲ್ಲಿ ಪ್ರೌಢಿಮೆ, ತಿಳಿಸಿ ಬಿಡಿಸಿ ಹೇಳುವ ಚಾಣಾಕ್ಷತೆ ಮನ ಸೆಳೆಯಿತು ಸರ್. ಸುಮಾರು ಒಂದು ಗಂಟೆಗಳ ಈ ಸಂದರ್ಶನ ನಮ್ಮನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಂತಾಯಿತು!
ಇದನ್ನೂ ಓದಿ: Chandrayaan 3 : 14 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಕತೆ ಏನು?
ತಾವಂತೂ ಬಹಳ ಚೆನ್ನಾಗಿ ವಿಷಯ ವಿಮರ್ಶೆ ಮಾಡಿದಿರಿ, ಮಾಹಿತಿಯನ್ನು ಹೊರ ತೆಗೆದಿರಿ, ನಿಮ್ಮ ಸಂದರ್ಶನ ಪ್ರೌಢಿಮೆಯೂ ಪ್ರಶಂಸನೀಯ. ಇದೊಂದು ಅತ್ಯಮೂಲ್ಯ ಕಾರ್ಯಕ್ರಮವಾಗಿದ್ದು, ಸಂಗ್ರಹಯೋಗ್ಯವಾಗಿದೆ. ಮತ್ತೆ ಮತ್ತೆ ಪ್ರಸಾರ ಮಾಡಲರ್ಹವೆಂದು ಭಾವಿಸುತ್ತೇನೆ.
ಇದನ್ನೂ ಓದಿ: Chandrayaan 3 : ರಷ್ಯಾ ಚಂದ್ರಯಾನ ಮಿಷನ್ ಸೋಲಿಗೇನು ಕಾರಣ? ವಿಜ್ಞಾನಿ ಗುರುಪ್ರಸಾದ್ ಹೇಳಿದ ಕಾರಣಗಳಿವು!
‘ಎಲ್ಲವನ್ನೂ ಮರೆತು ಭಾರತದ ಅಸ್ಮಿತೆ ಅಭಿಮಾನವನ್ನು ಮೆರೆಯಬೇಕಾಗಿದೆ. ವಿಕ್ರಮ್ ಸಾರಾಭಾಯಿ, ಸತೀಶ್ ಧವನ್, ಡಾ. ರಾಮಚಂದ್ರನ್, ಡಾ. ಕಸ್ತೂರಿ ರಂಗನ್, ಶಿವನ್, ಚಂದ್ರಯಾನ -3ರ ಸಾರಥಿ ಡಾ. ಸೋಮನಾಥ ಅವರ ಶ್ರಮ ಸಾರ್ಥಕ’ ಎನ್ನುವ ಮಮತೆಯ ಮಾತು ಹೃದಯ ತುಂಬಿತು.
ಇಸ್ರೋ ವಿಶ್ವದ ನಂ. ಒನ್ ಉಡಾವಣಾ ಏಜೆನ್ಸಿಯಾಗಿದ್ದು, ಇದು ವಿಶ್ವಮಾನ್ಯವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಇಡೀ ವಿಶ್ವವೇ ಒಂದು ಮನೆಯಾಗಿ ವಿಶ್ವ ಶಾಂತಿ ನೆಲೆಯಾಗಲಿ ಎಂಬ ಅಭಿಪ್ರಾಯ ನನ್ನದು. ಆದಿತ್ಯ ಎಲ್. 1 ತಯಾರಿಯಲ್ಲಿರುವ ISROಗೆ ಶುಭವಾಗಲಿ. NASA ಕೂಡ ISRO ಜೊತೆಗೆ ಬೆರೆತು ಹೊಸಬೆಳಕು ಮೂಡಲಿ.
ವಿಜ್ಞಾನವು ಅನುಕ್ಷಣ ಪ್ರಯೋಗಾರ್ಥಕವಾಗಿರುತ್ತದೆ. ಸೋಲು ಗೆಲುವಿನ ಪ್ರಸ್ತಾಪವೇ ಇಲ್ಲಿ ಅನಗತ್ಯ. ಮುಂದೆಯೂ ಕೂಡ ನಾವು ಸೋಲು ಗೆಲುವಿನ ಹೂರಣದೊಂದಿಗೆನೇ ಸಾಗಬೇಕಾಗುತ್ತದೆ… ಡಾ. ಗುರುಪ್ರಸಾದರ ಕುರಿತು ತಾವು ಆಡಿದ ಮಾತುಗಳು ಬಹುಮೂಲ್ಯವಾಗಿದ್ದವು.
ಚಂದ್ರನ ಗೆದ್ದ ಭಾರತ ಕುರಿತ ಮಾಹಿತ್ಯಾತ್ಮಕ ಕಾರ್ಯಕ್ರಮ ಇದು. Live editing, frame coriography ಅದ್ವಿತೀಯ ಸರ್. ನಿಮಗೆ ಮತ್ತು ಟೀಮ್ ‘ವಿಸ್ತಾರ’ಕ್ಕೆ ಸಪ್ರೇಮ ಅಭಿನಂದನೆಗಳು.